ಆ.6: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

ಬೆಂಗಳೂರು, ಆ.6: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

11.45 : ನಾಗರಿಕ ಸೇವಾ(ಯುಪಿಎಸ್ಸಿ) ಪರೀಕ್ಷೆ ಮೆರಿಟ್ ಪಟ್ಟಿ ಗೊಂದಲ ಮುಂದುವರೆದಿದೆ. ಈ ಬಗ್ಗೆ ಸಂಸತ್ತಿನಲ್ಲಿ ಬುಧವಾರ ಚರ್ಚೆ ನಡೆಯುವ ಸಾಧ್ಯತೆಯಿದೆ.
11.40: ಯುಪಿಎಸ್ಸಿ ಮೆರಿಟ್ ಪಟ್ಟಿ ಸಿದ್ಧಪಡಿಸುವಾಗ ಆಂಗ್ಲ ಭಾಷೆ ಪರೀಕ್ಷೆ ಅಂಕ ಪರಿಗಣಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದರೂ ಪ್ರತಿಭಟನೆ ಮುಂದುವರೆದಿದೆ.
11.35: ಯುಪಿಎಸ್ಸಿಯಲ್ಲಿ ಆಂಗ್ಲ ಭಾಷಾ ಕೌಶಲ್ಯ ಪರೀಕ್ಷೆ ಸಂಪೂರ್ಣ ರದ್ದುಗೊಳಿಸುವಂತೆ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

Updates India, International News in Brief Aug 6

11.30: ಪಶ್ಚಿಮ ಬಂಗಾಳದ ಬಂಗಾಳ ಕೊಲ್ಲಿ ಕರಾವಳಿಯಲ್ಲಿ 640 ಮೀನುಗಾರರನ್ನು ಹೊತ್ತೊಯ್ಯುತ್ತಿದ್ದ 40 ದೋಣಿಗಳು ಕಳೆದ ರವಿವಾರ ರಾತ್ರಿಯಿಂದ ಕಾಣೆಯಾಗಿವೆ
11.20: ಆರ್ ಬಿಐ ತನ್ನ ನೂತನ ದ್ವೈಮಾಸಿಕ ಸಾಲ ನೀತಿಯನ್ನು ಮಂಗಳವಾರ ಪ್ರಕಟಿಸಿದ್ದು, ಬಡ್ಡಿದರ, ಸಾಲನೀತಿಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.
11.00: ಮಾಜಿ ಕ್ರಿಕೆಟ್ ಆಟಗಾರ ಅರವಿಂದ್ ಆಪ್ಟೆ ಅವರು ಬುಧವಾರ ನಿಧನರಾಗಿದ್ದಾರೆ.
10.45: ದೆಹಲಿಯಲ್ಲಿ ಟ್ಯಾಕ್ಸಿ ಚಾಲಕನೊಬ್ಬ 5 ವರ್ಷ ವಯಸ್ಸಿನ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.
10.30: ಜನಪ್ರಿಯ ಕಾರ್ಟೂನ್ ಕ್ಯಾರೆಕ್ಟರ್ ಚಾಚಾ ಚೌಧರಿ ಮುಂತಾದ ಕಾರ್ಟೂನ್ ಜನಕ ಪ್ರಾಣ್ ಅವರು ನಿಧನರಾಗಿದ್ದಾರೆ.
10.00: ಲಿಬೇರಿಯಾದಲ್ಲಿ ಮಾರಕ ಎಬೋಲಾ ವೈರಸ್ ಗೆ 268 ಜನ ಬಲಿಯಾಗಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+