ವೋಟಿಂಗ್ %: 64 ಕ್ಷೇತ್ರಗಳ ಮತದಾನ ವಿವರ

ಬೆಂಗಳೂರು, ಮೇ.7: ಲೋಕಸಭಾ ಚುನಾವಣೆಯ ಎಂಟನೇ ಹಂತದ ಮತದಾನ ಬುಧವಾರ ಜಾರಿಯಲ್ಲಿದೆ. ಒಟ್ಟು 64 ಲೋಕಸಭಾ ಕ್ಷೇತ್ರಗಳಲ್ಲಿ ಹಾಗೂ ಸೀಮಾಂಧ್ರದ 175 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ನಡೆಯುತ್ತಿದೆ. ಉತ್ತರಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಸೀಮಾಂಧ್ರ,ಪಶ್ಚಿಮ ಬಂಗಾಳ, ಬಿಹಾರ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವು ಸ್ಥಾನಗಳಲ್ಲಿ ಮತದಾನ ನಡೆಯುತ್ತಿದೆ.

ಏಳು ರಾಜ್ಯಗಳ 64 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 79 ಮಹಿಳಾ ಅಭ್ಯರ್ಥಿಗಳೂ ಸೇರಿದಂತೆ 997 ಅಭ್ಯರ್ಥಿಗಳ ಭವಿಷ್ಯಕ್ಕೆ ಮತದಾರ ಮುದ್ರೆ ಒತ್ತುತ್ತಿದ್ದಾನೆ. 8ನೇ ಹಂತದಲ್ಲಿ 7 ರಾಜ್ಯಗಳ 64 ಸ್ಥಾನಗಳಿಗಾಗಿ ಸ್ಪರ್ಧೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ 6, ಉತ್ತರಾಖಂಡ್ ನ 5, ಹಿಮಾಚಲ ಪ್ರದೇಶದ 4, ಉತ್ತರಪ್ರದೇಶದ 80, ಬಿಹಾರದ 40, ಆಂಧ್ರಪ್ರದೇಶ 42 ಹಾಗೂ ಪಶ್ಚಿಮ ಬಂಗಾಳದ 42 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
6.05: 5 ಸೀಮಾಂಧ್ರದಲ್ಲಿ ಶೇ 74 ರಷ್ಟು ಮತದಾನ.ಹಿಮಾಚಲ ಪ್ರದೇಶದಲ್ಲಿ 62.25%, ಅಮೇಥಿಯಲ್ಲಿ 49.96%, ಬೆಂಗಾಳದಲ್ಲಿ 80.51%.
5.45: 4 ಗಂಟೆಗೆ ಬಿಹಾರದಲ್ಲಿ ಶೇ 50.35%.
5.30: ಉತ್ತರಪ್ರದೇಶದಲ್ಲಿ ಮತದಾರರಿಗೆ ಹನ ಹಂಚುತ್ತಿದ್ದ ಯೂಥ್ ಕಾಂಗ್ರೆಸ್ ಕಾರ್ಯಕರ್ತರ ಬಂಧನ.
5.15: 3 ಗಂಟೆಗೆ ಹಿಮಾಚಲ ಪ್ರದೇಶ 54%, ಸೀಮಾಂಧ್ರದಲ್ಲಿ 63%.
5.00: 3 ಗಂಟೆಗೆ ಪಶ್ಚಿಮ ಬಂಗಾಳದಲ್ಲಿ 73.02%.
4.30: ಸುಲ್ತಾನ್ ಪುರದ ಅಭ್ಯರ್ಥಿ ವರುಣ್ ಗಾಂಧಿ ಅವರು ಸೆಕ್ಯುರಿಟಿ ಅಧಿಕಾರಿ ಜತೆ ವಾಕ್ಸಮರ ನಡೆಸಿದ್ದಾರೆ.

Priyanka Gandhi

2.00: ವಾರಣಾಸಿಯ ರಿಟರ್ನಿಂಗ್ ಆಧಿಕಾರಿಯನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಅರುಣ್ ಜೇಟ್ಲಿ ಆಗ್ರಹ[ವಿವರ ಇಲ್ಲಿ ಓದಿ]
1.30: 1 ಗಂಟೆಗೆ ಉತ್ತರಪ್ರದೇಶದಲ್ಲಿ ಶೇ 36.15ರಷ್ಟು ಮತದಾನ
1.20: ಹಿಮಾಚಲ ಪ್ರದೇಶದಲ್ಲಿ ಶೇ 45ರಷ್ಟು ಮತದಾನ. ಬಿಹಾರದಲ್ಲಿ ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ ಮತದಾನ.
1.10: 1 ಗಂಟೆಗೆ ಪಶ್ಚಿಮ ಬಂಗಾಳದಲ್ಲಿ ಶೇ 61.62, ಅಮೇಥಿಯಲ್ಲಿ ಶೇ 37
1.00: ಸ್ಮೃತಿ ಇರಾನಿ ದೂರಿನ ಮೇರೆಗೆ ಜಿಲ್ಲಾಡಳಿತದಿಂದ ಕ್ರಮ. ಪ್ರಿಯಾಂಕಾ ಗಾಂಧಿ ಪಿಎಪ್ರೀತಿ ಸಹಾಯ್ ಗೆ ಅಮೇಥಿ ತೊರೆಯುವಂತೆ ಸೂಚನೆ.
12.45:1 ಗಂಟೆಗೆ ಬಿಹಾರದಲ್ಲಿ ಶೇ 29.03ರಷ್ಟು ಮತದಾನ.
12.30: ಪ್ರಿಯಾಂಕಾ ಗಾಂಧಿ ಪಿಎಗೆ ಅಮೇಥಿ ಮತಗಟ್ಟೆಯಲ್ಲಿ ಏನು ಕೆಲಸ ಎಂದು ಪ್ರಶ್ನಿಸಿದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ.

12.20 :
ಉತ್ತರಪ್ರದೇಶ 25.18%. ಕಾರ್ಗಿಲ್ 26%.
12.00: 11 ಗಂಟೆಗೆ ಬಿಹಾರದಲ್ಲಿ 22.36%, ಉತ್ತರಾಖಂಡ್ 17%,
11.45 : 11 ಗಂಟೆಗೆ ಪಶ್ಚಿಮ ಬಂಗಾಳದಲ್ಲಿ ಶೇ 45.8, ಅಮೇಥಿಯಲ್ಲಿ 21%. ಹಿಮಾಚಲ ಪ್ರದೇಶ 31.71%
11.40:
ಅಮೇಥಿಯಲ್ಲಿ ರಾಹುಲ್ ಗಾಂಧಿ ಸಂಚಾರದ ಬಗ್ಗೆ ಆಮ್ ಆದ್ಮಿ ಪಕ್ಷ ಕಿಡಿ, ಚುನಾವಣಾ ಆಯೋಗಕ್ಕೆ ದೂರು.
11.20: ಅಮೇಥಿಯ ಫುಲ ಗ್ರಾಮದ ಮತಗಟ್ಟೆಯೊಂದರಲ್ಲಿ ಬಿಜೆಪಿಯ ಕಮಲ ಚಿನ್ಹೆ ಕಂಡು ಕೆಂಡಾ ಮಂಡಲವಾದ ರಾಹುಲ್ ಗಾಂಧಿ.
11.15: 10 ಗಂಟೆಗೆ ಬಿಹಾರದಲ್ಲಿ ಶೇ 15.28.
11.00: ಅಮೇಥಿಯಲ್ಲಿ ಬೂತ್ ವಶಪಡಿಸಿಕೊಂಡ ಆರೋಪ ಹೊತ್ತ ಆಮ್ ಆದ್ಮಿ ಪಕ್ಷದ ಕುಮಾರ್ ವಿಶ್ವಾಸ್.
Live LS Polls voting

10.47: ಕಾಶ್ಮೀರದ ಬಾರಾಮುಲ್ಲಾದಲ್ಲಿ 9 ಗಂಟೆಗೆ ಶೇ 3.63ರಷ್ಟು ಮತದಾನ.
10.43: ಆಂಧ್ರದ ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ ಅವರು ಚಿತ್ತೂರಿನಲ್ಲಿ ಮತದಾನ ಮಾಡಿದ್ದಾರೆ.
10.06: 9 ಗಂಟೆಗೆ ಬಿಹಾರದಲ್ಲಿ ಶೇ9.4, ಉತ್ತರಪ್ರದೇಶ 11%, ಸೀಮಾಂಧ್ರದಲ್ಲಿ 14.6%.
9.45:ಅಮೇಥಿಯಲ್ಲಿ 9 ಗಂಟೆ ಸುಮಾರಿಗೆ ಶೇ 10.4ರಷ್ಟು ಮತದಾನವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+