5 ರಾಜ್ಯಗಳ ವಿಧಾನಸಭಾ ಚುನಾವಣೆ: ಸವಿವರ ವೇಳಾಪಟ್ಟಿ
Recommended Video

ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಚುನಾವಣಾ ಆಯೋಗ ಇಂದು ದಿನಾಂಕ ಘೋಷಿಸಿದೆ.
ನವದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಓ ಪಿ ರಾವತ್, ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿ ಬಿಡುಗಡೆ ಮಾಡಿದರು.
ರಾಜಸ್ಥಾನ, ಮಧ್ಯಪ್ರದೇಶ, ಮಿಜೋರಾಂ, ಛತ್ತೀಸ್ ಗಢ ರಾಜ್ಯಗಳ ವಿಧಾನಸಭೆಯ ಕಾಲಾವಧಿ ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ. ತೆಲಂಗಾಣದಲ್ಲಿ ವಿಧಾನಸಭೆ ವಿಸರ್ಜನೆಯಾಗಿರುವುದರಿಂದ ಚುನಾವಣೆ ಅನಿವಾರ್ಯವಾಗಿದೆ.
ಅಷ್ಟಕ್ಕೂ ಚುನಾವಣೆ ಯಾವಾಗ? ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಎಂದು? ಫಲಿತಾಂಶ ಯಾವಾಗ? ಇಲ್ಲಿದೆ ಮಾಹಿತಿ.

ಛತ್ತೀಸ್ ಗಢ- ಮೊದಲ ಹಂತ
ಮೊದಲ ಹಂತ(18 ಕ್ಷೇತ್ರಗಳಲ್ಲಿ)
ಅಧಿಸೂಚನೆ: ಅಕ್ಟೋಬರ್ 16, 2018
ನಾಮಪತ್ರಸಲ್ಲಿಕೆಗೆ ಕೊನೆ ದಿನಾಂಕ: 23 ಅಕ್ಟೋಬರ್ 2018
ನಾಮಪತ್ರ ಪರಿಶೀಲನೆ: 24 ಅಕ್ಟೋಬರ್ 2018
ನಾಮಪತ್ರ ಹಿಂಪಡೆಯಲು ಕೊನೇ ದಿನಾಂಕ: 26 ಅಕ್ಟೋಬರ್ 2018
ಮತದಾನ: ನವೆಂಬರ್ 12, 2018
ಮತ ಎಣಿಕೆ: 11 ಡಿಸೆಂಬರ್ 2018

ಛತ್ತೀಸ್ ಗಢ-ಎರಡನೇ ಹಂತ
ಎರಡನೇ ಹಂತ(72 ಕ್ಷೇತ್ರಗಳಲ್ಲಿ)
ನಾಮಪತ್ರಸಲ್ಲಿಕೆಗೆ ಕೊನೆ ದಿನಾಂಕ: 2 ನವೆಂಬರ್ 2018
ನಾಮಪತ್ರ ಪರಿಶೀಲನೆ: 3 ನವೆಂಬರ್ 2018
ನಾಮಪತ್ರ ಹಿಂಪಡೆಯಲು ಕೊನೇ ದಿನಾಂಕ: 5 ನವೆಂಬರ್ 2018
ಮತದಾನ: 20 ನವೆಂಬರ್ 2018
ಮತ ಎಣಿಕೆ: 11 ಡಿಸೆಂಬರ್ 2018
ಒಟ್ಟು ವಿಧಾನಸಭಾ ಕ್ಷೇತ್ರ: 90

ರಾಜಸ್ಥಾನ-ತೆಲಂಗಾಣ
ಅಧಿಸೂಚನೆ: 12 ನವೆಂಬರ್ 2018
ನಾಮಪತ್ರ ಪರಿಶೀಲನೆ: 24 ನವೆಂಬರ್ 2018
ನಾಮಪತ್ರ ಹಿಂಪಡೆಯಲು ಕೊನೇ ದಿನಾಂಕ: 22 ನವೆಂಬರ್ 2018
ಮತದಾನ: ಡಿಸೆಂಬರ್ 7, 2018
ಮತ ಎಣಿಕೆ: 11 ಡಿಸೆಂಬರ್ 2018
ಒಟ್ಟು ವಿಧಾನಸಭಾ ಕ್ಷೇತ್ರಗಳು: ರಾಜಸ್ಥಾನ-200, ತೆಲಂಗಾಣ-119

ಮಧ್ಯಪ್ರದೇಶ-ಮಿಜೊರಾಂ
ಅಧಿಸೂಚನೆ: 2 ನವೆಂಬರ್ 2018
ನಾಮಪತ್ರ ಸಲ್ಲಿಕೆಗೆ ಕೊನೇ ದಿನ: 9 ನವೆಂಬರ್ 2018
ನಾಮಪತ್ರ ಹಿಂಪಡೆಯಲು ಕೊನೇ ದಿನಾಂಕ: 14 ನವೆಂಬರ್ 2018
ಮತದಾನ: 28, ನವೆಂಬರ್ 2018
ಮತ ಎಣಿಕೆ: 11 ಡಿಸೆಂಬರ್ 2018(ಮಂಗಳವಾರ)
ಒಟ್ಟು ವಿಧಾನಸಭಾ ಕ್ಷೇತ್ರಗಳು: ಮಧ್ಯಪ್ರದೇಶ-230, ಮಿಜೊರಾಂ-40












Click it and Unblock the Notifications