ಪ್ರೀತಿಸಿದ ತಪ್ಪಿಗೆ ತಂದೆ, ಅಣ್ಣ, ಬಂಧುಗಳಿಂದ ಅತ್ಯಾಚಾರದ ಶಿಕ್ಷೆ!

ಮುಜಾಫರ್ ನಗರ, ನವೆಂಬರ್ 29: ಛಿ, ಇಂಥ ಘಟನೆಗಳೂ ನಡೆಯೋಕೆ ಸಾಧ್ಯಾನಾ ಅಂತ ಅಸಹ್ಯಪಡುವ ಮಟ್ಟಿನ ಹೀನಾತಿಹೀನ ಘಟನೆಯೊಂದು ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.

ಪ್ರೀತಿಸಿದ ಹುಡುಗನೊಂದಿಗೆ ಓಡಿ ಹೋಗಿದ್ದ ಹುಡುಗಿಯನ್ನು ವಾಪಸ್ ಕರೆದುಕೊಂಡು ಬಂದು, ತಂದೆ, ಅಣ್ಣ ಮತ್ತು ಆಕೆಯ ದೊಡ್ಡಪ್ಪ, ಚಿಕ್ಕಪ್ಪಂದಿರೇ ಅತ್ಯಾಚಾರ ಮಾಡಿ ಶಿಕ್ಷಿಸಿದ ವಿಕೃತ ಘಟನೆ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

UP: Woman raped by her father, brother, uncles for eloping with boyfriend

ಉತ್ತರ ಪ್ರದೇಶದ ಮುಜಾಫರ್ ನಗರದ ಧಾನೆಡಾ ಎಂಬ ಗ್ರಾಮದ ಮಹಿಳೆಯೊಬ್ಬರು, ಹುಡುಗನೊಬ್ಬನನ್ನು ಪ್ರೀತಿಸಿ, ಮನೆಯವರೆಲ್ಲ ಒಪ್ಪುವುದಿಲ್ಲವೆಂದು ತಿಳಿದು ಆತನ ಹಿಂದೆ ಓಡಿಹೋಗಿದ್ದರು. ವಿಷಯ ತಿಳಿದ ಆಕೆಯ ಕುಟುಂಬಸ್ಥರು, ಕೆಲತಿಂಗಳ ನಂತರ ಆಕೆಯನ್ನು ಮನೆಗೆ ಎಳೆದುಕೊಂಡುಬಂದಿದ್ದಾರೆ. ಮನೆಯ ಮರ್ಯಾದೆ ತೆಗೆದಿದ್ದಕ್ಕಾಗಿ ಆಕೆಗೆ ಶಿಕ್ಷೆ ನೀಡಿದ್ದಾರೆ. ಅದೂ ಅತ್ಯಾಚಾರದ ಶಿಕ್ಷೆ!

ಪ್ರೀತಿಸಿದ ಹುಡುಗನೊಂದಿಗೆ ಓಡಿಹೋಗುವುದರಿಂದ ಮನೆಯ ಮರ್ಯಾದೆ ಹೋಗುತ್ತದೆ ಎನ್ನುವ ಈ ಜನರು, ಸ್ವಂತ ಮಗಳು, ತಂಗಿಯ ಮೇಲೆ ಅತ್ಯಾಚಾರ ಎಸಗುವುದನ್ನು ಗೌರವ ಉಳಿಸುವ ಕಾರ್ಯವೆಂದು ಅದ್ಹೇಗೆ ಬಣ್ಣಿಸುತ್ತಾರೋ ದೇವರೇ ಬಲ್ಲ!

ತನ್ನ ಸ್ವಂತ ತಂದೆ, ಸಹೋದರ ಮತ್ತು ಚಿಕ್ಕಪ್ಪ, ದೊಡ್ಡಪ್ಪಂದಿರೇ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಸ್ವತಃ ಮಹಿಳೆಯೇ ಪೊಲೀಸರಿಗೆ ದೂರು ನೀಡಿದ್ದಲ್ಲದೆ, ತನಗೆ ಅವರಿಂದ ಪ್ರಾಣ ಬೆದರಿಕೆ ಇದೆ ಎಂದೂ ಹೇಳಿಕೊಂಡಿದ್ದಾಳೆ. ಈ ಸಂಬಂಧ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+