ಪತಿ, ಮಗುವಿನೆದುರೇ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ!
ಮುಜಾಫರ್ ನಗರ್, ಅಕ್ಟೋಬರ್ 7: ಪತಿ ಮತ್ತು ಮಗುವಿನೆದುರಲ್ಲೇ ಮಹಿಳೆಯೊಬ್ಬರ ಮೇಲೆ ನಾಲ್ವರು ದುರುಳರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.
ಪತಿ ಮತ್ತು ಮಗುವಿನೊಂದಿಗೆ ಬೈಕಿನಲ್ಲಿ ಹೋಗುತ್ತಿದ್ದ ಆಕೆಯನ್ನು ಎಳೆದು ಬೀಳಿಸಿದ ನಾಲ್ವರು ಅಪರಿಚಿತರು ಆಕೆಯನ್ನು ಹತ್ತಿರದ ಕಬ್ಬಿನ ಗದ್ದೆಗೆ ಕರೆದೊಯ್ದು ಹಿಂಸಿಸಿ, ಅತ್ಯಾಚಾರ ಎಸಗಿದ್ದಾರೆ.

ಆಕೆಯನ್ನು ರಕ್ಷಿಸಲು ಬಂದ ಪತಿಯನ್ನು ಕಟ್ಟಿ ಹಾಕಿ ಆತನನ್ನೂ ಥಳಿಸಿದ್ದಾರೆ. ಜೊತೆಗೆ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಮಗುವನ್ನು ಸಾಯಿಸುವುದಾಗಿ ಹೆದರಿಸಿದ್ದಾರೆ.
ಈ ಕುರಿತು ಮಹಿಳೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಮುಜಾಫರ್ ನಗರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.












Click it and Unblock the Notifications