ಉತ್ತರ ಪ್ರದೇಶ: ಸಾಮೂಹಿಕ ಅತ್ಯಾಚಾರ ಎಸಗಿ ಜೀವಂತ ಸುಟ್ಟ ಪಾಪಿಗಳು

ಬರೇಲಿ, ಜುಲೈ 15: ಗೃಹಿಣಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪಾಪಿಗಳು ಆ ನಂತರ ಆಕೆಯನ್ನು ದೇವಸ್ಥಾನವೊಂದರಲ್ಲಿ ಕೈಕಾಲು ಕಟ್ಟಿ ಜೀವಂತ ಸುಟ್ಟು ಹಾಕಿರುವ ಘಟನೆ ಉತ್ತರ ಪ್ರದೇಶದ ಸಂಬಾಲ್ ಜಿಲ್ಲೆಯಲ್ಲಿ ನಡೆದಿದೆ.

ಸಂಬಾಲ್ ಜಿಲ್ಲೆ ಸಮೀಪದ ರಾಜಪುರ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಶನಿವಾರ ಮುಂಜಾನೆ ಐದು ಜನ ಕಿರಾತಕರು ಗೃಹಿಣಿಯ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾರೆ ಆ ನಂತರ ಕೆಲ ಸಮಯದ ನಂತರ ಮತ್ತೆ ಬಂದು ಆಕೆಯನ್ನು ಹೊತ್ತೊಯ್ದು ಯೋಗಶಾಲಾ ದೇವಸ್ಥಾನದಲ್ಲಿ ಜೀವಂತ ಸುಟ್ಟಿದ್ದಾರೆ. ಗೃಹಿಣಿಗೆ ಇಬ್ಬರು ಮಕ್ಕಳು ಇದ್ದಾರೆ. ಪತಿ ಗಾಜಿಯಾಬಾದ್‌ನಲ್ಲಿ ದಿನಗೂಲಿ ಕಾರ್ಮಿಕನಾಗಿದ್ದಾನೆ.

UP woman burned alive in temple after being gang-raped

ಅತ್ಯಾಚಾರಕ್ಕೆ ಒಳಗಾದ ಮಹಿಳೆಯು ಕೂಡಲೇ ತನ್ನ ಸಹೋದರಿನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ, ಆತ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸುವ ವೇಳೆಗೆ ವಾಪಸ್ ಬಂದ ಕಿರಾತಕರು ಆಕೆಯನ್ನು ಅಪಹರಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆಯು ಸಾಯುವ ಮುನ್ನಾ ಪೊಲೀಸ್‌ ಸಹಾಯವಾಣಿ ಸಂಖ್ಯೆ 100 ಕ್ಕೆ ಕರೆ ಮಾಡಿದ್ದಾರೆ ಆದರೆ ಉಪಯೋಗವಾಗಿಲ್ಲ.

ಪೊಲೀಸರು 5 ಜನರ ಕೇಸು ದಾಖಲಿಸಿದ್ದಾರೆ. ಆದರೆ ಈ ವರೆಗೆ ಯಾರನ್ನೂ ಬಂಧಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+