ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಬಂಡಾಯ ವರ್ತನೆ ತೋರಿದ ಶಿವಪಾಲ್ ಅಖಿಲೇಶ್‌ಗೆ ತಲೆಬಾಗಿದ್ದು ಏಕೆ?

|
Google Oneindia Kannada News

ಮೈನ್‌ಪುರಿ ಉಪಚುನಾವಣೆ ಫಲಿತಾಂಶ ಬಂದು ಒಂದು ತಿಂಗಳು ಕಳೆದಿದೆ. ಆದರೆ ಸಮಾಜವಾದಿ ಪಕ್ಷದಲ್ಲಿ ಶಿವಪಾಲ್ ಸಿಂಗ್ ಯಾದವ್ ಪಾತ್ರ ಏನು ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ. ಹೀಗಾಗಿ ಎಸ್‌ಪಿಯಲ್ಲಿ ಶಿವಪಾಲ್‌ ಮತ್ತೊಮ್ಮೆ ಕಣಕ್ಕಿಳಿಯುತ್ತಾರಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಮತ್ತೆ ಶುರುವಾಗಿದೆ. ಶಿವಪಾಲ್ ಅವರು ತಮ್ಮ ಪ್ರಗತಿಪರ ಸಮಾಜವಾದಿ ಪಕ್ಷವನ್ನು ಸಮಾಜವಾದಿ ಪಕ್ಷದೊಂದಿಗೆ ವಿಲೀನಗೊಳಿಸಿರುವುದರಿಂದ ಈ ಪ್ರಶ್ನೆ ಉದ್ಭವಿಸುತ್ತಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಮೈನ್‌ಪುರಿ ಉಪಚುನಾವಣೆಯ ನಂತರ ಶಿವಪಾಲ್‌ ಎಸ್‌ಪಿಯಲ್ಲಿ ನಿರೀಕ್ಷಿಸಿದ್ದ ಗೌರವ ಕಾಣುತ್ತಿಲ್ಲ. ಅವರಿಗೆ ಪಕ್ಷದಲ್ಲಿ ಇದುವರೆಗೂ ಯಾವುದೇ ಗೌರವಾನ್ವಿತ ಸ್ಥಾನ ಸಿಗದ ಕಾರಣ ಅವರ ಬೆಂಬಲಿಗರೂ ಗೊಂದಲದಲ್ಲಿದ್ದು ಹೊಸ ನೆಲೆ ಹುಡುಕುತ್ತಿದ್ದಾರೆ. ಮುಲಾಯಂ ಸಿಂಗ್ ಯಾದವ್ ಅವರ ನಿಧನದ ನಂತರ, ಚಿಕ್ಕಪ್ಪ ಶಿವಪಾಲ್ ಮತ್ತು ಸೋದರಳಿಯ ಅಖಿಲೇಶ್ ನಡುವಿನ ಭಿನ್ನಾಭಿಪ್ರಾಯಗಳು ಕಡಿಮೆಯಾಗಿವೆ ಎಂದು ತೋರುತ್ತದೆ. ಅದು ಮೈನ್‌ಪುರಿ ಉಪಚುನಾವಣೆ ಸಮೀಪಿಸುವ ವೇಳೆಗೆ ಸುಧಾರಿಸಿತ್ತು. ಬಂಡಾಯ ವರ್ತನೆ ತೋರಿದ ಶಿವಪಾಲ್ ಅಖಿಲೇಶ್‌ಗೆ ತಲೆಬಾಗಿದ್ದರು. ಆದರೀಗ ಎಸ್‌ಪಿಯಲ್ಲಿ ಶಿವಪಾಲ್ ರಾಜಕೀಯ ಭವಿಷ್ಯ ಹೇಗಿದೆ ಎನ್ನುವ ಪ್ರಶ್ನೆ ಉದ್ಬವಿಸಿದೆ.

ತೂಗುಯ್ಯಾಲೆಯಲ್ಲಿ ಶಿವಪಾಲ್

ತೂಗುಯ್ಯಾಲೆಯಲ್ಲಿ ಶಿವಪಾಲ್

2016ರ ನಂತರ ಮೊದಲ ಬಾರಿಗೆ ಮೈನ್‌ಪುರಿ ಉಪಚುನಾವಣೆಯಾಗಿದ್ದು, ರಾಜಕೀಯ ವೇದಿಕೆಯನ್ನು ಹಂಚಿಕೊಳ್ಳಲು ಅಖಿಲೇಶ್ ಮತ್ತು ಶಿವಪಾಲ್ ಪರಸ್ಪರ ಒಪ್ಪಿಗೆಯನ್ನು ಸೂಚಿಸಿದರು. ಉಪಚುನಾವಣೆ ಗೆಲುವಿನ ನಂತರ ಅಖಿಲೇಶ್ ಅವರು ತಮ್ಮ ಚಿಕ್ಕಪ್ಪನಿಗೆ ಎಸ್ಪಿಯಲ್ಲಿ ಗೌರವಾನ್ವಿತ ಹುದ್ದೆಯನ್ನು ನೀಡುವ ಮೂಲಕ ಸ್ವಾಗತಿಸುತ್ತಾರೆ ಎಂದು ನಂಬಲಾಗಿತ್ತು. ಶಿವಪಾಲ್ ಯಾದವ್ ತಮ್ಮ ಪಕ್ಷವನ್ನು ವಿಲೀನಗೊಳಿಸಿದರೂ ಎಸ್ಪಿಯಲ್ಲಿ ಹುದ್ದೆ ಮತ್ತು ಜವಾಬ್ದಾರಿಗಾಗಿ ಕಾಯುತ್ತಿದ್ದಾರೆ. ಈವರೆಗೂ ಯಾವುದೇ ಹುದ್ದೆಯನ್ನು ಅವರಿಗೆ ನೀಡಲಾಗಿಲ್ಲ. ಹೀಗಾಗಿ ಚಿಕ್ಕಪ್ಪ-ಸೋದರಳಿಯ ಜಗಳದ ಸಂದರ್ಭದಲ್ಲಿ ಶಿವಪಾಲ್ ಜೊತೆಗಿರುವ ಕಾರ್ಯಕರ್ತರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಅಖಿಲೇಶ್ ಶಿವಪಾಲ್ ಅವರನ್ನು ಕಡೆಗಣಿಸುತ್ತಿರುವುದನ್ನು ಕಂಡೂ ಶಿವಪಾಲ್ ಎಸ್ ಪಿಯಲ್ಲಿ ಪವರ್ ಫುಲ್ ಆಗುವುದನ್ನು ನೋಡಲು ಬಯಸುವುದಿಲ್ಲ. ಶಿವಪಾಲ್ ಇನ್ನೂ ತೂಗುಯ್ಯಾಲೆಯಲ್ಲಿ ಇರಲು ಇದೇ ಕಾರಣ ಎಂದು ಹೇಳಲಾಗುತ್ತಿದೆ.

ಪ್ರತ್ಯೇಕ ಪಕ್ಷ ಕಟ್ಟಿದ ಅಖಿಲೇಶ್ ಚಿಕ್ಕಪ್ಪ

ಪ್ರತ್ಯೇಕ ಪಕ್ಷ ಕಟ್ಟಿದ ಅಖಿಲೇಶ್ ಚಿಕ್ಕಪ್ಪ

2016 ರ ನಂತರವೂ ಅಖಿಲೇಶ್ ಮತ್ತು ಶಿವಪಾಲ್ ನಡುವಿನ ಸಂಬಂಧವು ಸೌಹಾರ್ದಯುತವಾಗಿತ್ತು. ರಾಜಕೀಯ ಆಂತರಿಕ ಕಲಹಗಳಿಂದ ಅವರಿಬ್ಬರ ನಡುವೆ ಬಿರುಕು ಉಂಟಾಯಿತು. ಮುಲಾಯಂ ಸಿಂಗ್ ಯಾದವ್ ವಿಧಾನಸಭೆ ಚುನಾವಣೆಗೂ ಮುನ್ನ ಹೇಗೋ ಇಬ್ಬರ ನಡುವೆ ರಾಜಿ ಮಾಡಿಕೊಂಡು 2017ರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸಿದ್ದರು. ಶಿವಪಾಲ್ ಎಸ್‌ಪಿ ಟಿಕೆಟ್‌ನಲ್ಲಿ ಜಸ್ವಂತ್‌ನಗರದಿಂದ ಸ್ಪರ್ಧಿಸಿ ಶಾಸಕರಾದರು, ಆದರೆ ಅಖಿಲೇಶ್ ಅವರ ಬೆಂಬಲಿಗರನ್ನು ಕಳೆದುಕೊಂಡರು. ಈ ಒಪ್ಪಂದವು ಉದ್ವಿಗ್ನತೆಯ ನಡುವೆ ಹೆಚ್ಚು ಕಾಲ ಉಳಿಯಲಿಲ್ಲ. 2018 ರಲ್ಲಿ, ಶಿವಪಾಲ್ ಪ್ರಗತಿಶೀಲ ಸಮಾಜವಾದಿ ಪಕ್ಷದ ಹೆಸರಿನಲ್ಲಿ ತಮ್ಮದೇ ಆದ ಪ್ರತ್ಯೇಕ ಪಕ್ಷವನ್ನು ಸ್ಥಾಪಿಸಿದರು. 2019ರ ಲೋಕಸಭೆ ಚುನಾವಣೆಗೂ ತಮ್ಮದೇ ಪಕ್ಷದಿಂದ ಸ್ಪರ್ಧಿಸಿದ್ದರು. ನಿರೀಕ್ಷಿತ ಯಶಸ್ಸು ಸಿಗದಿದ್ದರೂ ಎಸ್ಪಿಯನ್ನು ಕೆಣಕುವಲ್ಲಿ ಯಶಸ್ವಿಯಾದರು.

ಅಖಿಲೇಶ್ ಶಿವಪಾಲ್ ನಡುವೆ ಮನಸ್ತಾಪ

ಅಖಿಲೇಶ್ ಶಿವಪಾಲ್ ನಡುವೆ ಮನಸ್ತಾಪ

2022ರ ವಿಧಾನಸಭಾ ಚುನಾವಣೆಗೂ ಮೊದಲು ಓಂ ಪ್ರಕಾಶ್ ರಾಜ್‌ಭರ್ ಅವರಿಂದ ಚಿಕ್ಕಪ್ಪ-ಸೋದರಳಿಯ ಯೋಗಿ ಸರ್ಕಾರವನ್ನು ಬೀಳಿಸುವ ತಂತ್ರದ ಭಾಗವಾಗಿ ಮತ್ತೊಮ್ಮೆ ಒಗ್ಗೂಡಿದರು. ಇದರಿಂದಾಗಿ ಶಿವಪಾಲ್ ಅವರ ಪಕ್ಷದೊಂದಿಗೆ ಎಸ್‌ಪಿ ಮೈತ್ರಿ ಮಾಡಿಕೊಂಡಿತು. ಆದರೆ ಅಖಿಲೇಶ್ ಶಿವಪಾಲ್‌ಗೆ ಜಸ್ವಂತ್‌ನಗರದಲ್ಲಿ ಕೇವಲ ಒಂದು ಸ್ಥಾನವನ್ನು ನೀಡಿದರು. ಶಿವಪಾಲ್ ಅವರು ತಮ್ಮ ಮಗ ಆದಿತ್ಯ ಯಾದವ್‌ಗೆ ಸ್ಥಾನವನ್ನು ಬಯಸಿದ್ದರು, ಆದರೆ ಅಖಿಲೇಶ್ ಸ್ವಜನಪಕ್ಷಪಾತದ ಭಯದಿಂದ ಹಾಗೆ ಮಾಡಲು ನಿರಾಕರಿಸಿದರು. ಶಿವಪಾಲ್ ಗೂ ಕೂಡ ಎಸ್ಪಿ ಚಿಹ್ನೆಯ ಮೇಲೆ ಸ್ಪರ್ಧಿಸುವಂತೆ ಒತ್ತಾಯಿಸಲಾಯಿತು.

ಶಿವಪಾಲ್ ಅಖಿಲೇಶ್‌ಗೆ ತಲೆಬಾಗಿದ್ದು ಏಕೆ?

ಶಿವಪಾಲ್ ಅಖಿಲೇಶ್‌ಗೆ ತಲೆಬಾಗಿದ್ದು ಏಕೆ?

ವಿಧಾನಸಭೆ ಚುನಾವಣೆ ಗೆಲುವಿನ ಬಳಿಕ ಎಸ್‌ಪಿ ಶಾಸಕರ ಸಭೆಯಲ್ಲಿ ಶಿವಪಾಲ್‌ ಅವರನ್ನು ಕರೆಯದಿದ್ದಾಗ ಮತ್ತೆ ಶಿವಪಾಲ್ ಅಖಿಲೇಶ್‌ ವಿರುದ್ಧ ಕಿಡಿಕಾರಿದರು. ಎಸ್‌ಪಿಯಿಂದ ಹಲವು ಬಾರಿ ಮೋಸ ಹೋಗಿದ್ದೇನೆ, ಈಗ ಈ ಪಕ್ಷದ ಜೊತೆ ಹೋಗುವುದಿಲ್ಲ ಎಂದು ಶಿವಪಾಲ್ ಹೇಳಿದ್ದರು. ಆದರೆ ಮುಲಾಯಂ ಸಿಂಗ್ ಯಾದವ್ ನಿಧನ ಮತ್ತು ಮೈನ್‌ಪುರಿ ಉಪಚುನಾವಣೆ ನಂತರ ಶಿವಪಾಲ್ ಮತ್ತೊಮ್ಮೆ ಎಸ್‌ಪಿ ಮತ್ತು ಅಖಿಲೇಶ್‌ಗೆ ಹತ್ತಿರವಾಗಿದ್ದಾರೆ. ಶಿವಪಾಲ್ ಅವರು ತಮ್ಮ ಪುತ್ರ ಆದಿತ್ಯ ಯಾದವ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿತರಾಗಿರುವ ಕಾರಣ ಈ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಊಹಿಸಲಾಗಿದೆ.

ಆದರೆ ಅಖಿಲೇಶ್ ಮಾತ್ರ ಅವರ ಆಸೆಗಳನ್ನೆಲ್ಲ ಮಣ್ಣುಪಾಲು ಮಾಡುತ್ತಲೇ ಬಂದಿದ್ದಾರೆ. ಸಮಾಜವಾದಿ ಪಕ್ಷದಲ್ಲಿ ಶಿವಪಾಲ್ ಅವರ ಸ್ಥಿತಿ ಏನಾಗಿದೆ ಎಂಬುದು ಅವರಿಗೆ ಅರ್ಥವಾಗಿದೆ. ಹಾಗಾಗಿ ಅಖಿಲೇಶ್ ಯಾವುದಕ್ಕೂ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ಹೀಗಾಘಿ ಸದ್ಯ ಶಿವಪಾಲ್ ಒಂದೆಡೆ ಬಾವಿ, ಇನ್ನೊಂದೆಡೆ ಹಳ್ಳ ಎಂಬಂತಾಗಿದೆ. ಹೀಗಿರುವಾಗ ಎಸ್ ಪಿಯಲ್ಲಿ ಶಿವಪಾಲ್ ರಾಜಕೀಯ ಭವಿಷ್ಯವೇನು ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ.

English summary
UP: Why did rebellious Shivpal Yadav bow to Akhilesh Yadav? A question has arisen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X