ಕಾರು ಕೊಟ್ಟಿಲ್ಲ ಎಂದು ನಿಕಾಹ್ ಸಮಾರಂಭ ನಡೆದು ಎರಡು ಗಂಟಗಳಲ್ಲೇ ತ್ರಿವಳಿ ತಲಾಖ್ ಘೋಷಿಸಿದ ವರ!

ಮದುವೆಯಾಗಿ ಕೆಲವೇ ಗಂಟೆಗಳ ನಂತರ ಮುಸ್ಲಿಂ ವ್ಯಕ್ತಿಯಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ಶುಕ್ರವಾರದಂದು ನಿಕಾಹ್ ಸಮಾರಂಭ ನಡೆದು ಎರಡು ಗಂಟಗಳಲ್ಲೇ ವಧುವಿಗೆ ತ್ರಿವಳಿ ತಲಾಖ್ ಘೋಷಿಸಿದ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ.

ಮದುವೆಗೂ ಮುನ್ನ ವರದಕ್ಷಿಣೆಯಾಗಿ ಕಾರು ಪಡೆದಿದ್ದ ವರನಿಗೆ ಮದುವೆ ಮುಗಿದ ಬಳಿಕ ಕಾರು ಕಾಣಿಸಲಿಲ್ಲ. ಹೀಗಾಗಿ ಕೋಪಗೊಂಡ ವರನು ಮದುವೆಯ ಮೆರವಣಿಗೆಯೊಂದಿಗೆ ಏಕಾಂಗಿಯಾಗಿ ಹಿಂದಿರುಗಿದ್ದಾನೆ.

UP: Groom announced triple talaq within two hours after the Nikah ceremony!

ವಧುವಿನ ಸಹೋದರ ಕಮ್ರಾನ್ ವಾಸಿ ಇಂಡಿಯಾ ಟುಡೇಗೆ ತನ್ನ ಇಬ್ಬರು ಸಹೋದರಿಯರು ಆಗ್ರಾದ ಫತೇಹಾಬಾದ್ ರಸ್ತೆಯಲ್ಲಿರುವ ಮದುವೆ ಮಂಟಪದಲ್ಲಿ ಒಂದೇ ದಿನದಲ್ಲಿ ವಿವಾಹವಾದರು ಎಂದು ಹೇಳಿದ್ದಾರೆ. ನಿಕಾಹ್ ಸಮಾರಂಭದ ನಂತರ ನನ್ನ ಒಬ್ಬ ಸಹೋದರಿ ಸಂತೋಷದಿಂದ ಗಂಡನ ಮನೆಗೆ ಹೋದರು. ಆದರೆ ಮತ್ತೊಬ್ಬ ಸಹೋದರಿಯ ಪತಿ ಮೊಹಮ್ಮದ್ ಆಸಿಫ್, ಮದುವೆ ಮಂಡಪದಲ್ಲಿ ವರದಕ್ಷಿಣೆಗಾಗಿ ನೀಡಬೇಕಿದ್ದ ಕಾರು ಕಾಣದೆ ಅಸಮಾಧಾನಗೊಂಡರು.

ಅವನ ಕುಟುಂಬವು ಕೋಪಗೊಂಡಿತು. ವಧು ಪೋಷಕರು ವರದಕ್ಷಿಣೆಯ ಇತರ ವಸ್ತುಗಳ ಹೊರತಾಗಿ ಆಸಿಫ್‌ಗೆ ಕಾರು ಕೊಡುವುದಾಗಿ ಭರವಸೆ ನೀಡಿದ್ದರು. ವರನ ಕುಟುಂಬ ಸ್ಥಳದಲ್ಲೇ ಕಾರು ಕೊಡಿಸಿ ಇಲ್ಲವೇ 5 ಲಕ್ಷ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದರು. ಆದರೆ ವಧುವಿನ ಕುಟುಂಬ ಅಂತಹ ಅಲ್ಪಾವಧಿಯ ಸೂಚನೆಯಲ್ಲಿ ಕಾರು ಅಥವಾ ನಗದು ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದಾಗ, ಆಸಿಫ್ ತ್ರಿವಳಿ ತಲಾಖ್ ಅನ್ನು ಉಚ್ಚರಿಸಿದ್ದಾರೆ. ಜೊತೆಗೆ ಅವರ ಕುಟುಂಬದೊಂದಿಗೆ ಮದುವೆ ಸ್ಥಳದಿಂದ ಹೊರಟಿದ್ದಾರೆ.

UP: Groom announced triple talaq within two hours after the Nikah ceremony!

ಕಮ್ರಾನ್ ವಾಸಿ ನೀಡಿದ ದೂರಿನ ಆಧಾರದ ಮೇಲೆ ಆಸಿಫ್ ಮತ್ತು ಇತರ ಆರು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಹೆಸರಿಸಿರುವ ಎಲ್ಲ ಏಳು ಮಂದಿಯನ್ನು ಬಂಧಿಸಬೇಕು ಎಂದು ವಾಸಿ ಆಗ್ರಹಿಸಿದ್ದರು.

ಮೂರು ಬಾರಿ ತಲಾಖ್ ಹೇಳುವ ಮೂಲಕ ಮಹಿಳೆಗೆ ವಿಚ್ಛೇದನ ನೀಡುವುದು ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯಿದೆ, 2019 ರ ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗಿದೆ.

ಏನಿದು ತ್ರಿವಳಿ ತಲಾಖ್?

ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಪತಿಯು ತನ್ನ ಪತ್ನಿಗೆ ಮೂರು ಬಾರಿ ತಲಾಖ್ ಹೇಳುವ ಮೂಲಕ ವಿಚ್ಛೇದನ ನೀಡುವ ಪದ್ಧತಿ ಇದೆ. ಇದನ್ನೇ ತ್ರಿವಳಿ ತಲಾಖ್ ಎನ್ನಲಾಗುತ್ತದೆ.

ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ತ್ರಿವಳಿ ತಲಾಖ್​ ಪದ್ಧತಿಗೆ ಸಮ್ಮತಿ ಇದೆ. ಮೂರು ಬಾರಿ ತಲಾಖ್ ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ಕೊಡಬಹುದಾಗಿದೆ. ಇಸ್ಲಾಮ್ ನ ಮೂಲ ಕಾನೂನಿನಲ್ಲಿ ತ್ರಿವಳಿ ತಲಾಖ್ ಗೆ ಬೇರೆಯೇ ವಿಧಿವಿಧಾನಗಳು ಇವೆ. ಆದರೂ ಈಗೀಗ ಈ ಕಾನೂನು ದುರ್ಬಳಕೆಯಾಗಿ ಇನ್ಸ್ ​ಟಂಟ್ ತಲಾಖ್ (ತತ್ ಕ್ಷಣವೇ ನೀಡುವ ವಿಚ್ಛೇದನ) ಆಗಿಬಿಟ್ಟಿದೆ.

ನಿಂತಲ್ಲೇ ಮೂರು ಬಾರಿ ತಲಾಖ್ ಎಂದು ಹೇಳುವುದು; ಮೊಬೈಲ್ ಫೋನಲ್ಲೇ ಮೂರು ಬಾರಿ ತಲಾಖ್ ಎಂದು ಹೇಳುವುದು; ವಾಟ್ಸಾಪ್ ಅಥವಾ ಮೆಸೇಜ್ ಮೂಲಕ ಮೂರು ಬಾರಿ ತಲಾಖ್ ಎಂದು ಹೇಳುವುದು; ಪತ್ರವೊಂದರಲ್ಲಿ ಮೂರು ಬಾರಿ ತಲಾಖ್ ಎಂದು ಬರೆಯುವುದು ಇತ್ಯಾದಿ ಅಕ್ರಮ ತಲಾಖ್ ಪದ್ಧತಿಗಳು ಚಾಲ್ತಿಯಲ್ಲಿವೆ. ಮುಸ್ಲಿಮ್ ಮಹಿಳೆಯರು ತಲಾಖ್ ಗೆ ತುತ್ತಾಗಿ ನಿಕೃಷ್ಟಕ್ಕೊಳಗಾಗುತ್ತಿದ್ದಾರೆನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+