LPG: ಎರಡು ಗ್ಯಾಸ್ ಸಿಲಿಂಡರ್ ಉಚಿತವಾಗಿ ವಿತರಣೆ: ಎಲ್ಲಿ ಹಾಗೂ ಯಾವಾಗ?
LPG: ಈಗಾಗಲೇ ದೇಶದಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಬಡ ಕುಟುಂಬಗಳ ಮಹಿಳೆಯರಿಗೆ ಮೊದಲ ಬಾರಿಗೆ ಉಚಿತ ಎಲ್‌ಪಿಜಿ ಸಂಪರ್ಕ ಒದಗಿಸಲಾಗುತ್ತಿದೆ. ಆದರೆ ಇದೀಗ ಎರಡು ಗ್ಯಾಸ್ ಸಿಲಿಂಡರ್‌ಗಳನ್ನು ಒದಗಿಸಲು ಸರ್ಕಾರ ಮುಂದಾಗಿದೆ. ಹಾಗಾದ್ರೆ ಎಲ್ಲಿ ಹಾಗೂ ಉದ್ದೇಶ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಉತ್ತರ ಪ್ರದೇಶ ಸರ್ಕಾರದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 2026-27ರ ಹಣಕಾಸು ವರ್ಷದಲ್ಲಿ ಎರಡು ಉಚಿತ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಒದಗಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಹಾಗಾದ್ರೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ವರ್ಷದಲ್ಲಿ ಎರಡು ಬಾರಿ ಉಚಿತ ಸಿಲಿಂಡರ್ ವಿತರಣೆ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಈ ಯೋಜನೆಯಡಿ ವರ್ಷಕ್ಕೆ ಎರಡು ಬಾರಿಯಂತೆ, ಮೊದಲನೇ ಸಿಲಿಂಡರ್ ಅನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ (ಅಕ್ಟೋಬರ್‌ನಿಂದ ಡಿಸೆಂಬರ್ 2026) ಹಾಗೂ ಎರಡನೇ ಸಿಲಿಂಡರ್ ಅನ್ನು ಹೋಳಿ ಹಬ್ಬದ ಸಂದರ್ಭದಲ್ಲಿ (ಜನವರಿಯಿಂದ ಮಾರ್ಚ್ 2027) ಉಚಿತವಾಗಿ ನೀಡಲಿದೆ ಎಂದು ತಿಳಿದುಬಂದಿದೆ.
ಯಾವಾಗ ಉಚಿತ ಸಿಲಿಂಡರ್ ವಿತರಣೆ?
* ಮೊದಲ ಉಚಿತ ಸಿಲಿಂಡರ್: ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್‌ನಿಂದ ಡಿಸೆಂಬರ್ 2026ರ ಅವಧಿಯಲ್ಲಿ ದೊರೆಯಲಿದೆ.
* ಎರಡನೇ ಉಚಿತ ಸಿಲಿಂಡರ್: ಹೋಳಿ ಹಬ್ಬದ ಪ್ರಯುಕ್ತ ಜನವರಿಯಿಂದ ಮಾರ್ಚ್ 2027ರ ಅವಧಿಯಲ್ಲಿ ವಿತರಿಸಲಾಗುವುದು.
ಸರ್ಕಾರಕ್ಕೆ ಆರ್ಥಿಕ ಹೊರೆ
ಈ ಯೋಜನೆ ಅನುಷ್ಠಾನಕ್ಕಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ ಅಂದಾಜು ₹2,142.78 ಕೋಟಿ ಆರ್ಥಿಕ ವೆಚ್ಚವಾಗಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇನ್ನೂ ಈ ಸೌಲಭ್ಯವು ಕೇವಲ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅರ್ಹ ಫಲಾನುಭವಿಗಳಿಗೆ ಮಾತ್ರ ಸಿಗಲಿದೆ.
ಅರ್ಹತೆ ಮತ್ತು ಕಡ್ಡಾಯ ಷರತ್ತುಗಳು
* ಈ ಸೌಲಭ್ಯವು ಕೇವಲ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ನೋಂದಾಯಿತರಾಗಿರುವ ಫಲಾನುಭವಿಗಳಿಗೆ ಮಾತ್ರ ಅನ್ವಯಿಸುತ್ತದೆ.
* ಫಲಾನುಭವಿಗಳ ಬ್ಯಾಂಕ್ ಖಾತೆಯು ಕಡ್ಡಾಯವಾಗಿ ಆಧಾರ್‌ನೊಂದಿಗೆ ಜೋಡಣೆಯಾಗಿರಬೇಕು.
* ಆಧಾರ್ ದೃಢೀಕರಣ ಅಥವಾ ಬೆರಳಚ್ಚಿನ ಇ-ಕೆವೈಸಿ ದೃಢೀಕರಣ (e-KYC Authenticated) ಕಡ್ಡಾಯವಾಗಿ ಪೂರ್ಣಗೊಂಡಿರಬೇಕು.
ಪ್ರಯೋಜನ ಮತ್ತು ಉದ್ದೇಶ
ಸಾಮಾನ್ಯ ಕುಟುಂಬಗಳಿಗೆ ಹಬ್ಬಗಳ ಸಮಯದಲ್ಲಿ ಎದುರಾಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು ಹಾಗೂ ಗ್ರಾಮೀಣ ಪ್ರದೇಶದ ಬಡ ಮಹಿಳೆಯರು ಹೊಗೆಮುಕ್ತ ಸ್ವಚ್ಛ ಇಂಧನ ಬಳಸುವುದನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ನಿರ್ಧಾರದಿಂದ ರಾಜ್ಯದ ಕೋಟ್ಯಂತರ ಕುಟುಂಬಗಳಿಗೆ ಹಬ್ಬಗಳ ಸಮಯದಲ್ಲಿ ತುಂಬಾ ಸಹಾಯ ಆದಂತಾಗಲಿದೆ.
ಯೋಜನೆಯ ಪ್ರಮುಖ ಸೌಲಭ್ಯಗಳು
* ಉಚಿತ LPG ಸಂಪರ್ಕ: ಅರ್ಹ ಮಹಿಳೆಯರಿಗೆ ಯೋಜನೆಯ ನಿಯಮಗಳ ಪ್ರಕಾರ ಹೊಸ ಗ್ಯಾಸ್ ಸಂಪರ್ಕ ಒದಗಿಸಲಾಗುತ್ತದೆ.
* ಪ್ರಸ್ತುತ, ಉಚಿತ ಗ್ಯಾಸ್ ಸ್ಟವ್ ಹಾಗೂ ಮೊದಲ ಸಿಲಿಂಡರ್ ರೀಫಿಲ್ ಸೌಲಭ್ಯ ದೊರೆಯಬಹುದು.
* ಸಿಲಿಂಡರ್ ಸಬ್ಸಿಡಿ: ಅರ್ಹ ಫಲಾನುಭವಿಗಳಿಗೆ ಸರ್ಕಾರ ಘೋಷಿಸಿರುವ ನಿಯಮಗಳು ಮತ್ತು ಮಿತಿಗಳ ಪ್ರಕಾರ ಸಬ್ಸಿಡಿ ದೊರೆಯಬಹುದು.
* ಸಾಂಪ್ರದಾಯಿಕ ಇಂಧನಗಳಿಂದ ಉಂಟಾಗುವ ಹೊಗೆಯಿಂದ ಮುಕ್ತಿ ನೀಡುವುದು ಇದರ ಉದ್ಧಶವಾಗಿದೆ.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
* ಅರ್ಜಿದಾರರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
* ಕುಟುಂಬದಲ್ಲಿ ಈಗಾಗಲೇ ಯಾವುದೇ ಸದಸ್ಯರ ಹೆಸರಿನಲ್ಲಿ ಎಲ್‌ಪಿಜಿ ಸಂಪರ್ಕ ಇರಬಾರದು.
* ಬಡ ಕುಟುಂಬಕ್ಕೆ ಸೇರಿದವರಾಗಿರಬೇಕು.
* ಪರಿಶಿಷ್ಟ ಜಾತಿ/ಪಂಗಡ, ಅಂತ್ಯೋದಯ ಅನ್ನ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಸೇರಿದಂತೆ ಅರ್ಹ ವರ್ಗಗಳ ಮಹಿಳೆಯರು ನಿಯಮಾನುಸಾರ ಅರ್ಜಿ ಸಲ್ಲಿಕೆ ಮಾಡಬಹುದು.


Click it and Unblock the Notifications
