ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನ್‌ಲಾಕ್ 5.0 ಬಿಡುಗಡೆ: ಚಿತ್ರಮಂದಿರ ತೆರೆಯಲು ಅನುಮತಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 30: ಕೇಂದ್ರ ಗೃಹ ಸಚಿವಾಲಯವು ಅನ್‌ಲಾಕ್ 5 ಮಾರ್ಗಸೂಚಿಗಳನ್ನು ಬುಧವಾರ ಪ್ರಕಟಿಸಿದೆ. ಈ ಮಾರ್ಗಸೂಚಿಯು ಅ. 1ರಿಂದ ಜಾರಿಗೆ ಬರಲಿದೆ. ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದರೂ ಗೃಹ ಸಚಿವಾಲಯವು ಮತ್ತಷ್ಟು ನಿರ್ಬಂಧಗಳನ್ನು ಸಡಿಲಗೊಳಿಸಿದ್ದು, ಕೆಲವೇ ನಿರ್ಬಂಧಗಳನ್ನು ಉಳಿಸಿಕೊಂಡಿದೆ. ಕೆಲವು ರಾಜ್ಯಗಳಲ್ಲಿನ ಸ್ಥಳೀಯ ಆಡಳಿತಗಳು ಸ್ವಯಂ ಕರ್ಫ್ಯೂ, ಸ್ಥಳೀಯ ಮಟ್ಟದ ಲಾಕ್‌ಡೌನ್‌ಗಳ ಮೇಲೆಯೇ ಹೆಚ್ಚು ಅವಲಂಬಿತವಾಗಿರುವ ನಡುವೆ, ಕೇಂದ್ರ ಸರ್ಕಾರ ನಿಯಮಗಳನ್ನು ಸಡಿಲಿಸಿದೆ.

ಹೊಸ ಮಾರ್ಗಸೂಚಿಯು ಅನೇಕ ಚಟುವಟಿಕೆಗಳಲ್ಲಿ ಮತ್ತೆ ಆರಂಭಿಸಲು ಅವಕಾಶ ನೀಡಿದೆ. ಇದರಲ್ಲಿ ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ಗಳು ಕೂಡ ಸೇರಿವೆ.

Breaking ಅನ್‌ಲಾಕ್ 5.0 ಬಿಡುಗಡೆ: ಚಿತ್ರಮಂದಿರ ತೆರೆಯಲು ಅನುಮತಿBreaking ಅನ್‌ಲಾಕ್ 5.0 ಬಿಡುಗಡೆ: ಚಿತ್ರಮಂದಿರ ತೆರೆಯಲು ಅನುಮತಿ

ಅಕ್ಟೋಬರ್ 15ರಿಂದ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಅವುಗಳ ಸೀಟಿಂಗ್ ಸಾಮರ್ಥ್ಯದ ಶೇ 50ರಷ್ಟು ಮಾತ್ರ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಶೀಘ್ರದಲ್ಲಿಯೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಲಿದೆ.

ವ್ಯವಹಾರದಿಂದ ವ್ಯವಹಾರ (ಬಿ2ಬಿ) ಪ್ರದರ್ಶನಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇದಕ್ಕೆ ವಾಣಿಜ್ಯ ಇಲಾಖೆ ನಿಯಮಾವಳಿಗಳನ್ನು ಪ್ರಕಟಿಸಲಿದೆ. ಮುಂದೆ ಓದಿ.

ತರಬೇತಿಗೆ ಈಜುಕೊಳ

ತರಬೇತಿಗೆ ಈಜುಕೊಳ

ಕ್ರೀಡಾಪಟುಗಳ ತರಬೇತಿಗೆ ಬಳಕೆಯಾಗುವಂತೆ ಸ್ವಿಮ್ಮಿಂಗ್ ಪೂಲ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇದಕ್ಕೆ ನಿರ್ದಿಷ್ಟ ಕಾರ್ಯಾಚರಣೆ ಪ್ರಕ್ರಿಯೆ (ಎಸ್‌ಒಪಿ)ಯನ್ನು ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯ ಬಿಡುಗಡೆ ಮಾಡಲಿದೆ.

ಮನರಂಜನಾ ಪಾರ್ಕ್

ಮನರಂಜನಾ ಪಾರ್ಕ್

ಮನರಂಜನಾ ಉದ್ಯಾನಗಳು ಮತ್ತು ಅಂತಹ ಇತರೆ ಸ್ಥಳಗಳಲ್ಲಿ ಚಟುವಟಿಕೆ ಆರಂಭಿಸಬಹುದಾಗಿದೆ. ಇದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಸ್‌ಒಪಿ ನೀಡಲಿದೆ. ಇದರಿಂದ ಫನ್ ಪಾರ್ಕ್, ಅಮ್ಯೂಸ್‌ಮೆಂಟ್ ಪಾರ್ಕ್ ಮುಂತಾದವುಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗಿದೆ.

ಅಂತರ್ ರಾಜ್ಯ ಸಂಚಾರಕ್ಕೆ ಅನುಮತಿ

ಅಂತರ್ ರಾಜ್ಯ ಸಂಚಾರಕ್ಕೆ ಅನುಮತಿ

ಅಂತರ್ ರಾಜ್ಯ ಮತ್ತು ಅಂತಾರಾಜ್ಯ ಓಡಾಟದ ಮೇಲೆ ಇನ್ನು ನಿರ್ಬಂಧ ಇರುವುದಿಲ್ಲ. ವ್ಯಕ್ತಿಗಳು ಮತ್ತು ಸರಕುಗಳ ರಾಜ್ಯದಿಂದ ರಾಜ್ಯಕ್ಕೆ ಹಾಗೂ ರಾಜ್ಯದೊಳಗೆ ಸಂಚಾರ ಮುಕ್ತವಾಗಲಿದೆ. ಅಂತಹ ಸಂಚಾರಗಳಿಗೆ ಯಾವುದೇ ಪ್ರತ್ಯೇಕ ಅನುಮತಿ, ಅನುಮೋದನೆ ಅಥವಾ ಇ ಪರ್ಮಿಟ್ ಅಗತ್ಯವಿರುವುದಿಲ್ಲ.

ಶಾಲೆಗಳನ್ನು ತೆರೆಯಲು ಅವಕಾಶ

ಶಾಲೆಗಳನ್ನು ತೆರೆಯಲು ಅವಕಾಶ

ಶಾಲೆಗಳು ಮತ್ತು ತರಬೇತಿ ಸಂಸ್ಥೆಗಳನ್ನು ಶ್ರೇಣೀಕೃತ ಮಾದರಿಯಲ್ಲಿ ಪುನಃ ಆರಂಭಿಸಲು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳಿಗೆ ಅ. 15ರ ಬಳಿಕ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ನೀಡಲಾಗಿದೆ. ಸಂಬಂಧಿತ ಶಾಲೆ/ಮ್ಯಾನೇಜ್ಮೆಂಟ್ ಜತೆ ಸಮಾಲೋಚನೆ ನಡೆಸಿ, ಅಲ್ಲಿನ ಪರಿಸ್ಥಿತಿಗಳ ಮೌಲ್ಯಮಾಪನ ಮತ್ತು ಷರತ್ತುಗಳ ಅಡಿ ನಿರ್ಧಾರ ತೆಗೆದುಕೊಳ್ಳಬಹುದು.

ಲಾಕ್‌ಡೌನ್ ಮಾಡುವಂತಿಲ್ಲ

ಲಾಕ್‌ಡೌನ್ ಮಾಡುವಂತಿಲ್ಲ

ಕೇಂದ್ರ ಸರ್ಕಾರದ ಪೂರ್ವ ಸಮಾಲೋಚನೆ ನಡೆಸದೆ ಕಂಟೇನ್ಮೆಂಟ್ ವಲಯಗಳ ಆಚೆಗೆ ರಾಜ್ಯ/ಜಿಲ್ಲೆ/ಉಪವಿಭಾಗ/ನಗರ ಅಥವಾ ಗ್ರಾಮೀಣ ಮಟ್ಟದಲ್ಲಿ ಯಾವುದೇ ಸ್ಥಳೀಯ ಲಾಕ್‌ಡೌನ್‌ಗಳನ್ನು ವಿಧಿಸುವಂತಿಲ್ಲ ಎಂದು ಮಾರ್ಗಸೂಚಿ ಹೇಳಿದೆ.

ವಿದೇಶ ಪ್ರಯಾಣ ನಿರ್ಬಂಧ

ವಿದೇಶ ಪ್ರಯಾಣ ನಿರ್ಬಂಧ

ಗೃಹ ಸಚಿವಾಲಯದ ಅನುಮತಿಯ ಹೊರತಾಗಿ ಬೇರೆ ಅಂತಾರಾಷ್ಟ್ರೀಯ ಪ್ರಯಾಣಗಳಿಗೆ ನಿರ್ಬಂಧ ಮುಂದುವರಿಸಲಾಗಿದೆ. ಕಂಟೇನ್ಮೆಂಟ್ ವಲಯಗಳಲ್ಲಿನ ಕಠಿಣ ಲಾಕ್‌ಡೌನ್ ಅ. 31ರವರೆಗೂ ಮುಂದುವರಿಯಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

English summary
Unlock 5.0 Guidelines: What's allowed to open and what's closed. Here is the detail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X