ಜಮ್ಮು ಕಾಶ್ಮೀರದಿಂದ ನೇರವಾಗಿ ಸೇಬು ಖರೀದಿಗೆ ಮುಂದಾದ ಕೇಂದ್ರ ಸರ್ಕಾರ
ನವದೆಹಲಿ, ಸೆಪ್ಟೆಂಬರ್ 10: ಜಮ್ಮು ಮತ್ತು ಕಾಶ್ಮೀರದಿಂದ ನೇರವಾಗಿ ಸೇಬು ಖರೀದಿಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಸರ್ಕಾರ ನಡೆಸುತ್ತಿರುವ ನ್ಯಾಷನಲ್ ಅಗ್ರಿಕಲ್ಚರ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ ಮೂಲಕ ಖರೀದಿಸಲು ನಿರ್ಧರಿಸಲಾಗಿದೆ.
Recommended Video
ಡಿಸೆಂಬರ್ 15ರಿಂದ ಪ್ರಕ್ರಿಯೆ ಆರಂಭವಾಗಲಿದೆ.ತಾವು ಬೆಳೆದು ಸೇಬು ಹಣ್ಣುಗಳನ್ನು ಮಾರಾಟ ಮಾಡಬೇಡಿ ಎಂದು ಉಗ್ರರು ರೈತರಿಗೆ ಬೆದರಿಕೆ ಹಾಕಿರುವ ಕಾರಣ ಸರ್ಕಾರವು ಈ ನಿರ್ಧಾರಕ್ಕೆ ಬಂದಿದೆ. ಪರಿಚ್ಛೇದ 370 ರದ್ದಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನವನ್ನೂ ಹಿಂಪಡೆಯಲಾಗಿತ್ತು.

ಜೊತೆಗೆ ಅವುಗಳನ್ನು ಕೇಂದ್ರಾಡಳಿತ ಪ್ರದೇಶವಾಗಿ ವಿಂಗಡಣೆ ಮಾಡಲಾಗಿತ್ತು. ಇದಕ್ಕೇ ಕೋಪಗೊಂಡಿರುವ ಪಾಕಿಸ್ತಾನವು ರೈತರಿಗೆ ಅವರು ಬೆಳೆದ ಸೇಬು ಹಣ್ಣುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತಿಲ್ಲ ಎಂದು ಬೆದರಿಕೆ ಹಾಕಿತ್ತು.
2019ರಲ್ಲಿ ಜಮ್ಮು ಕಾಶ್ಮೀರದಲ್ಲಿ ಬೆಳೆದ ಎಲ್ಲಾ ಸೇಬುಹಣ್ಣುಗಳನ್ನು ಕೇಂದ್ರ ಖರೀದಿ ಮಾಡುವುದಾಗಿ ತಿಳಿಸಿದೆ. ಜಮ್ಮು ಕಾಶ್ಮೀರದಲ್ಲಿ ಎ, ಬಿ,ಸಿ ಎಲ್ಲಾ ಶ್ರೇಣಿಯ ಹಣ್ಣುಗಳನ್ನು ಬೆಳೆಯುತ್ತಾರೆ. ಸೋಪೋರ್, ಶಾಪಿಯಾನ್, ಶ್ರೀನಗರದಲ್ಲಿರುವ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು.
ಜಮ್ಮು ಕಾಶ್ಮೀರಕ್ಕೆ ವಿಧಿಸಿದ ನಿರ್ಬಂಧಗಳಲ್ಲಿ ಬಹುತೇಕ ನಿರ್ಬಂಧಗಳನ್ನು ಹಿಂಪಡೆಯಲಾಗಿದೆ. ಹೀಗಾಗಿ ಸೇಬು ಹಣ್ಣಿನ ಬೆಲೆಯೂ ಕಡಿಮೆಯಾಗುವ ಸಾಧ್ಯತೆ ಇದೆ. ಜೊತೆಗೆ ರೈತರಿಗೂ ಹೆಚ್ಚಿನ ಲಾಭ ನೀಡುವ ಉದ್ದೇಶವೂ ಇದೆ ಎನ್ನಲಾಗಿದೆ.












Click it and Unblock the Notifications