ಬಜೆಟ್ 2021 ಭಾಷಣದ ಪ್ರತಿ ಡೌನ್ಲೋಡ್ ಮಾಡಿಕೊಳ್ಳೋದು ಹೇಗೆ?
2021-22ನೇ ಸಾಲಿನ ಬಜೆಟ್ ಇದೇ ಮೊದಲ ಬಾರಿಗೆ ಕಾಗದರಹಿತವಾಗಿ ಮಂಡನೆಯಾಗಿದೆ. 2021ರ ಫೆಬ್ರವರಿ 1 ರಂದು ಆಯವ್ಯಯ ಪತ್ರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೇಕ್ ಇನ್ ಇಂಡಿಯಾ ಟ್ಯಾಬ್ ಬಳಸಿ ಮಂಡಿಸಿದರು.
ಈ ಬಾರಿ ಬಜೆಟ್ ನಲ್ಲಿ ವಿಶೇಷ ಮೊಬೈಲ್ ಅಪ್ಲಿಕೇಷನ್ ಹೊರ ತಂದಿದ್ದು, ಈ ಮೊಬೈಲ್ ಅಪ್ಲಿಕೇಷನ್ ನಲ್ಲಿ 14 ಕೇಂದ್ರ ಬಜೆಟ್ ಗಳ ದಾಖಲೆಗಳು ಸಹ ಲಭ್ಯವಿದ್ದು, ಇದರಲ್ಲಿ ವಾರ್ಷಿಕ ಹಣಕಾಸು ದಾಖಲೆಗಳು [ಸಾಮಾನ್ಯವಾಗಿ ಕರೆಯಲ್ಪಡುವ ಆಯವ್ಯಯ], ಪೂರಕ ಬೇಡಿಕೆಗಳು, ಹಣಕಾಸು ಮಸೂದೆಗಳು,, ಸಂವಿಧಾನಬದ್ಧ ದಾಖಲೆಗಳು, ಮತ್ತಿತರ ಮಾಹಿತಿಗಳು ದೊರೆಯಲಿವೆ.
ಈ ಅಪ್ಲಿಕೇಷನ್ ಆಂಡ್ರಾಯ್ಡ್ ಹಾಗೂ ಐಒಎಸ್ ಎರಡು ಸಾಧನಗಳಲ್ಲೂ ಲಭ್ಯವಿರಲಿದೆ. ಈ ಮೊಬೈಲ್ ಆ್ಯಪ್ ಬಳಕೆ ಸ್ನೇಹಿಯಾಗಿದ್ದು, ಮುದ್ರಣ, ಹುಡುಕಾಟ, ಜೂಮ್ ಇನ್ ಮತ್ತು ಜೂಮ್ ಔಟ್, ದ್ವಿಮುಖ ಸ್ಕ್ರೋಲಿಂಗ್, ವಿಷಯಗಳ ಪಟ್ಟಿ ಮತ್ತು ಬಾಹ್ಯ ಲಿಂಕ್ ಇತ್ಯಾದಿ ವೈಶಿಷ್ಟ್ಯಗಳೊಂದಿಗೆ ಕೂಡಿದೆ

ಈ ಮೊಬೈಲ್ ಆಪ್ ಕೇಂದ್ರ ಬಜೆಟ್ ನ ವೆಬ್ ಪೋರ್ಟಲ್(http://www.indiabudget.gov.in/) ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಅಥವಾ ಗೂಗಲ್ ಪ್ಲೇಸ್ಟೋರಿನಲ್ಲಿ ಅಥವಾ ಆಪಲ್ ಸ್ಟೋರ್ ನಲ್ಲಿ Union Budget Mobile App ಸರ್ಚ್ ಮಾಡಿ
ನ್ಯಾಷನಲ್ ಇನ್ಫಾರ್ಮೇಟಿಕ್ಸ್ ಸೆಂಟರ್ (NIC) ವಿನ್ಯಾಸಗೊಳಿಸುವ ಆಪ್ ಮಾತ್ರ ಡೌನ್ಲೋಡ್ ಮಾಡಿಕೊಳ್ಳಿ.

ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ದೊರೆಯುವ ಈ ಮೊಬೈಲ್ ಅಪ್ಲಿಕೇಷನ್ ನಲ್ಲಿ ವಾರ್ಷಿಕ ಹಣಕಾಸು ದಾಖಲೆಗಳು [ಸಾಮಾನ್ಯವಾಗಿ ಕರೆಯಲ್ಪಡುವ ಆಯವ್ಯಯ], ಪೂರಕ ಬೇಡಿಕೆಗಳು, ಹಣಕಾಸು ಮಸೂದೆಗಳು,, ಸಂವಿಧಾನಬದ್ಧ ದಾಖಲೆಗಳು, ಮತ್ತಿತರ ಮಾಹಿತಿಗಳು ದೊರೆಯಲಿವೆ.












Click it and Unblock the Notifications