ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2018: ಯಾವುದು ಏರಿಕೆ? ಯಾವುದು ಇಳಿಕೆ?

By Sachhidananda Acharya
|
Google Oneindia Kannada News

Recommended Video

Union Budget 2018 : ಯಾವುದು ಏರಿಕೆ? ಯಾವುದು ಇಳಿಕೆ? | Oneindia Kannada

ನವದೆಹಲಿ, ಫೆಬ್ರವರಿ 1: ಬಹುನಿರೀಕ್ಷಿತ 2018-19ನೇ ಸಾಲಿನ ಬಜೆಟ್ ನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸಂಸತ್ ನಲ್ಲಿ ಮಂಡಿಸಿದ್ದಾರೆ. ಇದೀಗ ದೇಶದ ಜನರು ಬಜೆಟ್ ನಿಂದ ತಮ್ಮ ದಿನನಿತ್ಯದ ಜೀವನದಲ್ಲಾಗುವ ಪರಿಣಾಮಗಳ ಬಗ್ಗೆ ಆಲೋಚಿಸುತ್ತಿದ್ದಾರೆ.

ಕೇಂದ್ರ ಆಯವ್ಯಯ 2018 : ಬಡವರ ಕೃಷಿಕರ ಬಜೆಟ್ಕೇಂದ್ರ ಆಯವ್ಯಯ 2018 : ಬಡವರ ಕೃಷಿಕರ ಬಜೆಟ್

ಹಾಗಾದರೆ ಬಜೆಟ್ ನಿಂದ ನಮ್ಮ-ನಿಮ್ಮ ನಿತ್ಯ ಜೀವನದ ಮೇಲೆ ಆಗುವ ಪರಿಣಾಮಗಳೇನು? ನಾವು ದಿನ ನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಏರಿಕೆಯಾಗಲಿದೆ? ಯಾವ ವಸ್ತುಗಳ ಬೆಲೆ ಇಳಿಕೆಯಾಗಲಿದೆ?

ಕೇಂದ್ರ ಬಜೆಟ್ 2018: ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ಕೇಂದ್ರ ಬಜೆಟ್ 2018: ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು

ಇಲ್ಲಿದೆ ಸಮಗ್ರ ಮಾಹಿತಿ..

ಮೊಬೈಲ್ ದುಬಾರಿ

ಮೊಬೈಲ್ ದುಬಾರಿ

ಮೊಬೈಲ್ ಫೋನ್ ಮತ್ತು ಮೊಬೈಲ್ ಫೋನ್ ಉಪಕರಣಗಳ ಆಮದಿನ ಮೇಲಿದ್ದ ಅಬಕಾರಿ ಸುಂಕವನ್ನು ಬಜೆಟ್ ನಲ್ಲಿ ಶೇಕಡಾ 15 ರಿಂದ 20ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಇವುಗಳ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗಲಿದೆ.

ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು ಎಂಬ ಕಾರಣಕ್ಕೆ ಮೊಬೈಲ್ ಫೋನ್ ಆಮದಿನ ಮೇಲಿನ ಸುಂಕ ಏರಿಕೆ ಮಾಡಲಾಗಿದೆ. ಇದರಿಂದ ಮುಖ್ಯವಾಗಿ ಚೀನಾ ಮೂಲದ ಮೊಬೈಲ್ ತಯಾರಿಕಾ ಸಂಸ್ಥೆಗಳಾದ ವಿವೋ, ಒಪ್ಪೋ, ಶಿಯೋಮಿ, ಹುವಾಯ್ ಕಂಪನಿಗಳಿಗೆ ಹೊಡೆತ ಬೀಳಲಿದ್ದರೆ, ಗ್ರಾಹಕರ ಜೇಬಿಗೆ ಮೊಬೈಲ್ ಫೋನ್ ಗಳು ಭಾರವಾಗಲಿವೆ.

ಶೈಕ್ಷಣಿಕ ಸೆಸ್ ಏರಿಕೆ

ಶೈಕ್ಷಣಿಕ ಸೆಸ್ ಏರಿಕೆ

ಬಜೆಟ್ ನಲ್ಲಿ ಆದಾಯ ತೆರಿಗೆ ಮೇಲಿನ ಶೈಕ್ಷಣಿಕ ಸೆಸ್ ನ್ನು ಹಾಲಿ ಶೇಕಡಾ 3 ರಿಂದ 4ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ವೈಯಕ್ತಿಕ ತೆರಿಗೆ ಪಾವತಿಯಲ್ಲಿ ಹೆಚ್ಚಳವಾಗಲಿದೆ. ಇದು ಮಧ್ಯಮ ವರ್ಗದವರಿಗೆ ಹೊರೆಯಾಗಲಿದೆ. ಆದಾಯ ತೆರಿಗೆ ಪಾವತಿಯಲ್ಲಾಗುವ ಹೆಚ್ಚಳದ ಪ್ರಮಾಣವನ್ನು ಈ ಕೆಳಗಿನ ಟೇಬಲ್ ನಲ್ಲಿ ವಿವರವಾಗಿ ನೀಡಲಾಗಿದೆ.

60 ವರ್ಷ ಕೆಳಗಿನವರಿಗೆ

60 ವರ್ಷ ಕೆಳಗಿನವರಿಗೆ

60 ವರ್ಷ ಕೆಳಗಿನ ನಾಗರಿಕರ ವಾರ್ಷಿಕ ತೆರಿಗೆ ಪಾವತಿಯಲ್ಲಿ ಏರಿಕೆಯಾಗಲಿದೆ. 5 ಲಕ್ಷ ರೂ. ನಿವ್ವಳ ವಾರ್ಷಿಕ ಆದಾಯ ಹೊಂದಿರುವವರು 125 ರೂ. ಹೆಚ್ಚಿನ ತೆರಿಗೆ ಪಾವತಿಸಬೇಕಾಗಿದೆ. 10 ಲಕ್ಷ ಹಾಗೂ 15 ಲಕ್ಷ ರೂ. ಆದಾಯ ಹೊಂದಿರುವವರು ಕ್ರಮವಾಗಿ 1,125 ಮತ್ತು 2,625 ರೂಪಾಯಿ ಹೆಚ್ಚುವರಿ ತೆರಿಗೆ ಪಾವತಿಸಬೇಕಾಗಿದೆ.

60 ವರ್ಷ ಮೇಲ್ಪಟ್ಟ 80 ವರ್ಷದೊಳಗಿನ ನಾಗರಿಕರು

60 ವರ್ಷ ಮೇಲ್ಪಟ್ಟ 80 ವರ್ಷದೊಳಗಿನ ನಾಗರಿಕರು

60 ವರ್ಷ ಮೇಲ್ಪಟ್ಟ ಆದರೆ 80 ವರ್ಷ ಕೆಳಗಿನ ನಾಗರಿಕರ ತೆರಿಗೆ ಪಾವತಿಯಲ್ಲಿ ಏರಿಕೆಯಾಗಿದೆ. ಆದರೆ ಇವರಿಗೆ ಅಲ್ಪ ವಿನಾಯಿತಿ ಸಿಗಲಿದೆ. ಹೀಗಾಗಿ 5 ಲಕ್ಷ ರೂ. ನಿವ್ವಳ ಆದಾಯ ಹೊಂದಿರುವವರು 100 ರೂ. ಹೆಚ್ಚಿನ ತೆರಿಗೆ ಪಾವತಿಸಬೇಕಾಗಿದೆ. 10 ಲಕ್ಷ ಹಾಗೂ 15 ಲಕ್ಷ ರೂ. ಆದಾಯ ಹೊಂದಿರುವವರು ಕ್ರಮವಾಗಿ 1,100 ಮತ್ತು 2,600 ರೂಪಾಯಿ ಹೆಚ್ಚುವರಿ ತೆರಿಗೆ ಪಾವತಿಸಬೇಕಾಗಿದೆ.

80 ವರ್ಷ ಮೀರಿದ ನಾಗರಿಕರು

80 ವರ್ಷ ಮೀರಿದ ನಾಗರಿಕರು

ಅತಿ ಹಿರಿಯ ನಾಗರೀಕರಿಗೂ ಜೇಟ್ಲಿ ಸೆಸ್ ಬಿಸಿ ಮುಟ್ಟಿಸಿದ್ದಾರೆ. 80 ವರ್ಷ ಮೀರಿದ ನಾಗರಿಕರು 10 ಲಕ್ಷ ಮತ್ತು 15 ಲಕ್ಷ ರೂಪಾಯಿ ವಾರ್ಷಿಕ ಆದಾಯ ಪಡೆಯುತ್ತಿದ್ದಲ್ಲಿ ಕ್ರಮವಾಗಿ 1,000 ರೂ ಮತ್ತು 2,500 ರೂಪಾಯಿ ತೆರಿಗೆ ಪಾವತಿಸಬೇಕಾಗಿದೆ.

ಆಮದು ವಸ್ತುಗಳ ಬೆಲೆ ಏರಿಕೆ

ಆಮದು ವಸ್ತುಗಳ ಬೆಲೆ ಏರಿಕೆ

ಒಂದೊಮ್ಮೆ ನೀವು ವಿದೇಶದಿಂದ ಆಮದಾಗುವ ವಸ್ತುಗಳನ್ನು ಖರೀದಿಸಲು ಇಚ್ಛಿಸಿದಲ್ಲಿ ಹೆಚ್ಚಿನ ಹಣ ಪಾವತಿ ಮಾಡಬೇಕಾಗುತ್ತದೆ.

ಕಾರು, ಮೋಟಾರ್ ಸೈಕಲ್, ಮೊಬೈಲ್ ಫೋನ್, ಚಿನ್ನ, ಬೆಳ್ಳಿ, ವಜ್ರ, ಫ್ಯಾನ್ಸಿ ಆಭರಣಗಳು, ತರಕಾರಿ, ಹಣ್ಣಿನ ಜ್ಯೂಸ್, ಸನ್ ಗ್ಲಾಸ್, ಸುಗಂಧ ಧ್ರವ್ಯಗಳು, ಅಡುಗೆ ತಯಾರಿಸಲು ಬಳಸುವ ವಸ್ತುಗಳು, ಮೆನಿಕ್ಯೂರ್ ಮತ್ತು ಪೆಡಿಕ್ಯೂರ್ ವಸ್ತುಗಳು, ಹಲ್ಲಿನ ಸ್ವಚ್ಛತೆ ಮತ್ತು ಶೇವ್ ಗೆ ಸಂಬಂಧಿಸಿದ ವಸ್ತುಗಳು, ಬಸ್ ಮತ್ತು ಟ್ರಕ್ ಗಳ ಟೈರುಗಳು, ರೇಷ್ಮೆ ಬಟ್ಟೆ, ಚಪ್ಪಲಿ, ಮುತ್ತು ರತ್ನಗಳು, ಸ್ಮಾರ್ಟ್ ವಾಚ್ ಸೇರಿದಂತೆ ವಿಭಿನ್ನ ಗಡಿಯಾರಗಳು, ಎಲ್ಇಡಿ, ಎಲ್ ಸಿಡಿ ಟಿವಿ, ಗೃಹ ಉಪಯೋಗಿ ವಸ್ತುಗಳು, ಬಲ್ಬ್ ಗಳು, ಆಟಿಕೆ ವಸ್ತುಗಳು, ವಿಡಿಯೋ ಗೇಮ್ ಸಾಧನಗಳು, ಕ್ರೀಡೆಗೆ ಬಳಸುವ ವಸ್ತುಗಳು, ಸಿಗರೇಟ್, ಕ್ಯಾಂಡಲ್, ಗಾಳಿಪಟ, ಆಲಿವ್ ಮತ್ತು ಕಡಲೆ ಎಣ್ಣೆಯಂಥ ಅಡುಗೆ ಎಣ್ಣೆಗಳ ಬೆಲೆ ಏರಿಕೆಯಾಗಲಿದೆ.

ಬೆಲೆ ಇಳಿಕೆ

ಬೆಲೆ ಇಳಿಕೆ

ಇದೇ ವೇಳೆ ಹಲವು ವಸ್ತುಗಳ ಬೆಲೆ ಬಜೆಟ್ ನಂತರ ಇಳಿಕೆಯಾಗಲಿದೆ. ಅವುಗಳಲ್ಲಿ ಕಚ್ಛಾ ಗೋಡಂಬಿ, ಸೋಲಾರ್ ಪ್ಯಾನಲ್ ಗೆ ಬಳಸುವ ಗಾಜುಗಳು, ಶ್ರವಣ ಸಾಧನಗಳು ಮತ್ತು ಇನ್ನೂ ಕೆಲವು ಸರಕುಗಳ ಬೆಲೆಯಲ್ಲಿ ಇಳಿಕೆಯಾಗಲಿದೆ.

English summary
Union Budget 2018 presented in the Parliament on Thursday in which the Narendra Modi government announced changes in excise and customs duties on certain items which are set to get costlier after the budget. As per the Budget, Customs duty on mobile phones has been increased from 15 per cent to 20 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X