UPS- 8th Pay Commission: ಭವಿಷ್ಯದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸಿಗುವ ಪಿಂಚಣಿ ಲೆಕ್ಕಾಚಾರ
ಬೆಂಗಳೂರು, ಆಗಸ್ಟ್ 27: ದೇಶಾದ್ಯಂತ ಏಕೀಕೃತ ಪಿಂಚಣಿ ಯೋಜನೆ (UPS)ಯು ಮುಂದಿನ ವರ್ಷದಿಂದ ಜಾರಿಗೆ ಬರಲಿದೆ. ಇದಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದಕ್ಕೆ ಅತೃಪ್ತರಾಗಿರುವ ಕೇಂದ್ರ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆ (OPS) ಜಾರಿ ಮಾಡುವಂತೆ ಒತ್ತಾಯಿಸಿದ್ದಾರೆ. ಈ ಮಧ್ಯೆ ಜಾರಿಯಾಗಲಿರುವ ಏಕೀಕೃತ ಪಿಂಚಣಿ ಯೋಜನೆ ಹಾಗೂ 8ನೇ ವೇತನ ಆಯೋಗದಡಿ ವೇತನ ಎಷ್ಟು ಹೆಚ್ಚಾಗಲಿದೆ ಎಂಬ ಲೆಕ್ಕಾಚಾರ ಆರಂಭವಾಗಿದೆ.
ಹೌದು, ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ (NPS) ಮತ್ತು ಹಳೆಯ ಪಿಂಚಣಿ ಯೋಜನೆ (OPS) ಎರಡರ ವೈಶಿಷ್ಟ್ಯಗಳ ಸಂಯೋಜಿತ ಏಕೀಕೃತ ಪಿಂಚಣಿ ಯೋಜನೆ (UPS) ಆಯ್ಕೆ ಹೊಂದಿದ್ದಾರೆ. ಈ ಯೋಜನೆಯಿಂದ ತಮ್ಮ ನಿವೃತ್ತಿ ನಂತರ ಆರ್ಥಿಕ ಭದ್ರತೆಯ ಖಚಿತತೆ ಇರುವುದಿಲ್ಲ ಎಂಬ ಆತಂಕ ಅವರಲ್ಲಿ ಮನೆ ಮಾಡಿದೆ.

ಇನ್ನೂ ಹೊಸ ಪಿಂಚಣಿ ಯೋಜನೆಯಡಿಯಲ್ಲಿ, ನೌಕರರು ಪ್ರತಿ ತಿಂಗಳು ತಮ್ಮ ಮೂಲ ವೇತನದ ಶೇಕಡಾ 10 ರಷ್ಟು ಕೊಡುಗೆ ನೀಡಬೇಕಾಗುತ್ತದೆ. ಇದು ಸರ್ಕಾರದ ಶೇಡಕಾ 14ರಷ್ಟು ಕೊಡುಗೆಗೆ ಹೊಂದಾಣಿಕೆ ಆಗುತ್ತದೆ. ಹೀಗಾಗಿ ನೌಕರರಲ್ಲಿ ಒಂದಷ್ಟು ಆತಂಕ ಸೃಷ್ಟಿಯಾಗಿದೆ.
ನಿವೃತ್ತರಿಗೆ ಕನಿಷ್ಠ, ಗರಿಷ್ಠ ಪಿಂಚಣಿ ವಿವರ
2025 ರಿಂದ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಜಾರಿಗೆ ಬರಲಿದೆ. ಇದಕ್ಕೆ ಅರ್ಹರಾಗಲು ನೌಕರನಿಗೆ 25 ವರ್ಷಗಳ ಸೇವೆಯ ಅಗತ್ಯೆತೆ ಇದೆ. ಅಂದರೆ 2029 ಇಲ್ಲವೇ ಅದರ ನಂತರದ ವರ್ಷಗಳಲ್ಲಿ ನಿವೃತ್ತರಾಗುವ ಉದ್ಯೋಗಿಗಳು ಈ ಪೂರ್ಣ ಪಿಂಚಣಿಗೆ ಅರ್ಹರಾಗುತ್ತಾರೆ. ಈ ಹೊಸ ಪಿಂಚಣಿ ಯೋಜನೆಯು 25 ವರ್ಷಗಳ ಸೇವೆ ನೀಡಿ ನಿವೃತ್ತರಾದವರಿಗೆ ನೀಡಲಾಗುತ್ತದೆ. ಕೇವಲ ಹತ್ತು ವರ್ಷ ಸೇವೆ ನೀಡಿ ನಿವೃತ್ತರಾಗಿದ್ದರೆ ಅವರಿಗೆ ಕನಿಷ್ಠ ಪಿಂಚಣಿ 10 ಸಾವಿರ ರೂ. ಸಿಗಲಿದೆ.

ಇನ್ನೂ ಈ ಯೋಜನೆ ಜಾರಿಯಾಗುವ ಹೊತ್ತಿಗೆ 2025ರಲ್ಲಿ 7ನೇ ವೇತನ ಆಯೋಗವು ಅಂತ್ಯಗೊಳ್ಳಲಿದೆ. ನಂತರ 2026ರ ಜನರಿಯಲ್ಲಿ 8ನೇ ವೇತನ ಆಯೋಗ ಜಾರಿಯಾಗಲಿದೆ. ಆ ಹೊತ್ತಿಗೆ ಪಿಂಚಣಿ ಎಷ್ಟು ಕೈಗೆ ಸಿಗಲಿದೆ ಎಂದು ನೌಕರರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಫಿಟ್‌ಮೆಂಟ್ ಆಧಾರದಲ್ಲಿ ಪರಿಷ್ಕರಣೆ
ಹೊಸ ವೇತನ ಆಯೋಗದ ಅಡಿ ಶೇ 1.92ರ ಫಿಟ್‌ಮೆಂಟ್ ಅಂಶದ ಆಧಾರದಲ್ಲಿ ವೇತನದ ಮ್ಯಾಟ್ರಿಕ್ಸ್ ಸಿದ್ಧಪಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. 7ನೇ ವೇತನ ಆಯೋಗದ ಅಡಿಯಲ್ಲಿ ಇದೇ ಫಿಟ್‌ಮೆಂಟ್ ಅಂಶ ಲೆಕ್ಕಾಚಾರದಲ್ಲಿ 18,000 ರೂ.ವೇತನದವರಿಗೆ ಕನಿಷ್ಠ ವೇತನ 34,560 ರೂಗಳಿಗೆ ಪರಿಷ್ಕರಿಸಬಹುದು. ಇನ್ನೂ ಕೇಂದ್ರ ಸರ್ಕಾರದ ಅತ್ಯುನ್ನತ ವೇತನ ಶ್ರೇಣಿಯಾದ 18 ನೇ ಹಂತದ ಗರಿಷ್ಠ ವೇತನವು ಪ್ರಸ್ತುತ 2.5 ಲಕ್ಷ ರೂ. ವೇತನ ಶ್ರೇಣಿಯ ಶ್ರೇಣಿಯು 18 ಹಂತಗಳನ್ನು ಒಳಗೊಂಡಿದೆ.
ಈ 18ನೇ ಹಂತದದಲ್ಲಿ ಫಿಟ್‌ಮೆಂಟ್ ಅಂಶ 1.92 ರಷ್ಟು ಅಂಶ ಆಧರಿಸಲಾಗುತ್ತದೆ. ಇದರ ಲೆಕ್ಕಾಚಾರಗಳ ಅಧಿಕೃತ ಮಾಹಿತಿ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಹೊಸ ಏಕೀಕೃತ ಪಿಂಚಣಿ ಯೋಜನೆ ಅಡಿಯಲ್ಲಿ ನೌಕರನ ನಿವೃತ್ತಿಗೂ ಮೊದಲ ಒಂದು ವರ್ಷದ ಸರಾಸರಿ ಮಾಸಿಕ ವೇತನದ ಶೇಕಡಾ 50ರಷ್ಟು ಹಣ ಪಿಂಚಣಿ ಹೊಂದಿಸಲಾಗುತ್ತದೆ. ಈ ಪಿಂಚಣಿಯ ಅರ್ಹತೆಯನ್ನು 25 ವರ್ಷಗಳ ಸೇವೆ ಆಧಾರದಲ್ಲಿ ನೀಡಲಾಗುತ್ತದೆ. ಸದ್ಯ ಹೊಸ ಆಯೋಗ ಮತ್ತು ಯೋಜನೆ ಅನುಮೋದನೆಯ ಹಂತದಲ್ಲಿವೆ. ಜಾರಿಯಾದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.












Click it and Unblock the Notifications