Breaking; ಗುರುವಾರದಿಂದ ಯುಕೆ ಪ್ರಧಾನಿ ಭಾರತ ಭೇಟಿ
ನವದೆಹಲಿ, ಏಪ್ರಿಲ್ 20; ಎರಡು ದಿನಗಳ ಭೇಟಿಗಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತಕ್ಕೆ ಆಗಮಿಸುತ್ತಿದ್ದಾರೆ. ಅಹಮದಾಬಾದ್‌ನಿಂದ ಅವರ ಭಾರತ ಭೇಟಿಯ ಕಾರ್ಯಕ್ರಮಗಳು ಆರಂಭವಾಗಲಿವೆ.
ಏಪ್ರಿಲ್ 21 ಮತ್ತು 22ರಂದು ಬೋರಿಸ್ ಜಾನ್ಸನ್ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಗುರುವಾರ ಅವರು ಅಹಮದಾಬಾದ್‌ನಲ್ಲಿ ಉದ್ಯಮಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ.
ಬೋರಿಸ್ ಜಾನ್ಸನ್ ಎರಡು ವರ್ಷಗಳ ಹಿಂದೆಯೇ ಭಾರತಕ್ಕೆ ಆಗಮಿಸಬೇಕಿತ್ತು. ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಭಾರತ ಅವರನ್ನು ಅತಿಥಿಯಾಗಿ ಆಹ್ವಾನಿಸಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಭಾರತ ಭೇಟಿ ರದ್ದಾಗಿತ್ತು.

ಅಹಮದಾಬಾದ್‌ನಿಂದ ಬೋರಿಸ್ ಜಾನ್ಸನ್ ದೆಹಲಿಗೆ ತೆರಳಲಿದ್ದಾರೆ. ಏಪ್ರಿಲ್ 22ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬೋರಿಸ್ ಜಾನ್ಸನ್ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ.
ರಕ್ಷಣೆ, ರಾಜತಾಂತ್ರಿಕ ಸಂಬಂಧ, ಆರ್ಥಿಕ ಸಹಭಾಗಿತ್ವದ ಕುರಿತು ನರೇಂದ್ರ ಮೋದಿ ಮತ್ತು ಬೋರಿಸ್ ಮಾತುಕತೆ ನಡೆಸಲಿದ್ದಾರೆ. ಯುರೋಪಿಯನ್ ಒಕ್ಕೂಟದಿಂದ ಹೊರ ಬಂದ ಬಳಿಕ ಬ್ರಿಟನ್ ಏಷ್ಯಾ ಫೆಸಿಫಿಕ್ ಭಾಗದ ದೇಶಗಳ ಜೊತೆ ವ್ಯಾಪಾರ ವಹಿವಾಟಿಗೆ ಆದ್ಯತೆ ನೀಡುತ್ತಿದೆ.
ಬೋರಿಸ್ ಜಾನ್ಸನ್ ಭಾರತ ಭೇಟಿ ಬಗ್ಗೆ ಬ್ರಿಟನ್ ಪ್ರಧಾನ ಮಂತ್ರಿಗಳ ಕಚೇರಿ ಪ್ರಕಟಣೆ ಹೊರಡಿಸಿದೆ. ದೆಹಲಿಯಲ್ಲಿ ಏಪ್ರಿಲ್ 22ರಂದು ಬೋರಿಸ್ ಜಾನ್ಸನ್ ಮತ್ತು ನರೇಂದ್ರ ಮೋದಿ ಭೇಟಿಯಾಗಲಿದ್ದಾರೆ. ಏಷ್ಯಾ-ಫೆಸಿಫಿಕ್ ಪ್ರದೇಶದಲ್ಲಿನ ಭದ್ರತಾ ಸಹಕಾರ ಹೆಚ್ಚಿಸುವ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಿದೆ.
ಬ್ರಿಟನ್ ಮತ್ತು ಭಾರತದ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಮಾತುಕತೆ ನಡೆಯುವ ನಿರೀಕ್ಷೆ ಇದೆ. 2035ರ ವೇಳೆಗೆ ವಾರ್ಷಿಕ 37 ಬಿಲಿಯನ್ ಡಾಲರ್ ಉಭಯ ದೇಶಗಳ ದ್ವಿಪಕ್ಷೀಯ ವ್ಯವಹಾರವನ್ನು ಹೆಚ್ಚಿಸುವ ಸಂಭವ ಇದೆ.












Click it and Unblock the Notifications