ಆಧಾರ್ ಸುರಕ್ಷತೆಗೆ ಎರಡು ಕ್ರಮ ಘೋಷಿಸಿದ ಯುಐಎಡಿಐ
ನವದೆಹಲಿ, ಜನವರಿ 10 : ಆಧಾರ್ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ವರದಿ ಹಿನ್ನಲೆಯಲ್ಲಿ ಯುಐಎಡಿಐ ಎರಡು ಹೊಸ ಸುರಕ್ಷತಾ ಕ್ರಮ ಕೈಗೊಂಡಿದೆ. ಈ ಮೂಲಕ ಖಾಸಗಿತನದ ಹಕ್ಕು ಕಾಪಾಡಲು ಮುಂದಾಗಿದೆ.
ಬುಧವಾರ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಎಡಿಐ) ವಿರ್ಚುವಲ್ ಐಡಿ ಮತ್ತು ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಎರಡು ಸುರಕ್ಷತಾ ಕ್ರಮಗಳನ್ನು ಪ್ರಕಟಿಸಿದೆ.
Virtual ID ಪಡೆಯುವುದರಿಂದ ನಿಮ್ಮ ಆಧಾರ್ ಸಂಖ್ಯೆಯನ್ನು ನೀಡುವುದಕ್ಕೆ ಕಡಿವಾಣ ಬೀಳಲಿದೆ. 16 ಸಂಖ್ಯೆಗಳ Virtual Idಯನ್ನು ಜನರು ಬಳಕೆ ಮಾಡಬಹುದಾಗಿದೆ.

ಮೊಬೈಲ್ ಸಂಖ್ಯೆ ಪಡೆಯುವಾಗಿ Virtual Idಯನ್ನು ನೀಡಬಹುದಾಗಿದೆ. ಹೆಸರು, ವಿಳಾಸ, ಭಾವಚಿತ್ರಗಳ ಮಾಹಿತಿ ಪಡೆಯಲು ಇದು ಸಾಕಾಗುತ್ತದೆ. ಆದ್ದರಿಂದ, ಆಧಾರ್ ಸಂಖ್ಯೆ ನೀಡುವ ಅಗತ್ಯವಿರುವುದಿಲ್ಲ.
ಗ್ರಾಹಕರು ಎಷ್ಟು Virtual Idಗಳನ್ನು ಬೇಕಾದರೂ ಪಡೆಯಬಹುದು. ಹೊಸ ಐಡಿ ಪಡೆದಾಗ ಹಿಂದಿನದು ರದ್ದಾಗಲಿದೆ. ಮಾರ್ಚ್ 1, 2018ರಿಂದು Virtual ID ನೀಡುವ ಪ್ರಕ್ರಿಯೆ ಆರಂಭವಾಗಲಿದೆ.
ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ) ಪ್ರಕ್ರಿಯೆನ್ನು ಗ್ರಾಹಕ ಸ್ನೇಹಿಯಾಗಿ ಮಾಡಲಾಗುತ್ತದೆ. ಇದರಿಂದಾಗಿ ಖಾಸಗಿ ಏಜನ್ಸಿಗಳು ಗ್ರಾಹಕರ ಮಾಹಿತಿಯನ್ನು ಸಂಗ್ರಹಿಸಿ ಇಡದಂತೆ ಯುಐಎಡಿಐ ತಡೆಯಲಿದೆ.












Click it and Unblock the Notifications