ಕಾಲೇಜಲ್ಲಿ ಲೈಂಗಿಕ ಕಿರುಕುಳ ನೀಡಿದ್ರೆ ಹುಷಾರ್...
ನವದೆಹಲಿ, ಫೆ. 10: ದೇಶದಲ್ಲಿ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಅತಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹಲವು ವಿಶ್ವವಿದ್ಯಾಲಯಗಳಲ್ಲೂ ಲೈಂಗಿಕ ಕಿರುಕುಳ ನೀಡಿದ ಕುರಿತು ದೂರು ಕೇಳಿಬಂದಿವೆ. ಆದ್ದರಿಂದ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲು ಯುಜಿಸಿ ಮುಂದಾಗಿದೆ.
ಕಾಲೇಜು ಕ್ಯಾಂಪಸ್‌ಗಳಲ್ಲಿ ಲೈಂಗಿಕ ಕಿರುಕುಳ ಹಾಗೂ ಲಿಂಗ ತಾರತಮ್ಯ ತಡೆಗಟ್ಟಲು ಪ್ರತಿ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳು ವಿಶೇಷ ಘಟಕ ಹೊಂದಿರಬೇಕು ಎಂದು ಯುಜಿಸಿ ಸೂಚನೆ ನೀಡಿದೆ. ಈ ಕುರಿತು ಯುಜಿಸಿ ಕಾರ್ಯದರ್ಶಿ ಜಸ್ಪಾಲ್ ಎಸ್. ಸಂಧು ಅವರು ಎಲ್ಲ ವಿಶ್ವವಿದ್ಯಾಲಯಗಳಿಗೆ ಸುತ್ತೋಲೆ ರವಾನಿಸಿದ್ದಾರೆ. [ವೃದ್ಧನ ಮಾನ ಹರಾಜು ಹಾಕಿದ ಯುವತಿ]

ಏನೇನು ಮಾಡಬೇಕು? : ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ತಮಗಾದ ಲೈಂಗಿಕ ಕಿರುಕುಳ ಹಾಗೂ ಲಿಂಗ ತಾರತಮ್ಯ ಕುರಿತು ದೂರು ನೀಡಲು ಪ್ರತಿ ವಿಶ್ವವಿದ್ಯಾಲಯಗಳೂ ತಮ್ಮ ವೆಬ್ ಸೈಟ್‌ನಲ್ಲಿ ವಿಶೇಷ ಪುಟ ರಚಿಸಬೇಕು. ಈ ಮೂಲಕ ಅವರು ರಜಿಸ್ಟ್ರಾರ್, ಪ್ರಾಂಶುಪಾಲರು ಅಥವಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ನೇರವಾಗಿ ದೂರು ನೀಡಲು ಅವಕಾಶ ಮಾಡಿಕೊಡಬೇಕು. ಇದರ ಜೊತೆಯಲ್ಲಿ ದೂರು ನೀಡಲು ಅನುವಾಗುವಂತೆ ದೂರು ಪುಸ್ತಕ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. [23 ಮಕ್ಕಳಿದ್ದರೂ ತೆವಲು ಬಿಡದ ವೃದ್ಧ]
ದೂರನ್ನು ತನಿಖೆ ನಡೆಸಲು ವಿಶೇಷ ಘಟಕ ರಚಿಸಬೇಕು. ಈ ಘಟಕಕ್ಕೆ ಹಿರಿಯ ಅಧಿಕಾರಿಗಳು ಅಥವಾ ಸಿಬ್ಬಂದಿಯನ್ನು ನೇಮಿಸಬೇಕು. ಅವರು ದೂರುಗಳನ್ನು ಸೂಕ್ಷ್ಮವಾಗಿ ಪರಾಮರ್ಶೆಗೆ ಒಳಪಡಿಸಬೇಕು. ದುಷ್ಕರ್ಮಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು.
ಲಿಂಗಾಧಾರಿತ ಹಿಂಸೆ ಪ್ರಕರಣಗಳಲ್ಲಿ ಯಾವುದೇ ಕನಿಕರ ತೋರಬಾರದು. ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಕೈಗೊಂಡ ಕ್ರಮದ ಕುರಿತು ಪ್ರಾಂಶುಪಾಲರು, ರಜಿಸ್ಟ್ರಾರ್ ಅಥವಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಯುಜಿಸಿ ಗಮನಕ್ಕೆ ತರಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. [ಶಿಶುಪೀಡಕ 'ಪ್ರಿನ್ಸಿ' ಪಾಲ್ ಗೆ ರೆಡ್ ಕಾರ್ನರ್]
ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಲು ಯುಜಿಸಿ ವತಿಯಿಂದ ಕಾರ್ಯಪಡೆ ರಚಿಸಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications