MP Salary Hike: ಹಾಲಿ-ಮಾಜಿ ಸಂಸದರ ವೇತನ, ಭತ್ಯೆ, ಪಿಂಚಣಿ ಹೆಚ್ಚಳ: ಪರಿಷ್ಕೃತ ವೇತನ ಎಷ್ಟು?
ಕೇಂದ್ರ ಸರ್ಕಾರವು ಹಾಲಿ ಹಾಗೂ ಮಾಜಿ ಸಂಸದರಿಗೆ ಯುಗಾದಿಗೂ ಮುನ್ನವೇ ಸಿಹಿಸುದ್ದಿ ಕೊಟ್ಟಿದೆ. ಸಂಸತ್ ಸದಸ್ಯರು (ಸಂಸದರು) ಮತ್ತು ಮಾಜಿ ಸಂಸತ್ ಸದಸ್ಯರ ವೇತನ, ದಿನಭತ್ಯೆ, ಪಿಂಚಣಿ ಹಾಗೂ ಹೆಚ್ಚುವರಿ ಪಿಂಚಣಿ ಮೊತ್ತವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಈ ಪರಿಷ್ಕೃತ ಹೆಚ್ಚಳವು ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ. ಯುಗಾದಿ ಸಂದರ್ಭದಲ್ಲೇ ಎಲ್ಲ ಸಂಸದರು ಹಾಗೂ ಮಾಜಿ ಸಂಸದರಿಗೆ ಕೇಂದ್ರ ಸರ್ಕಾರವು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಹಾಗಾದ್ರೆ ಸಂಸದರ ಪರಿಷ್ಕೃತ ವೇತನ ಎಷ್ಟು ಎಂಬುದನ್ನು ಇಲ್ಲಿ ತಿಳಿಯಿರಿ.
ಸಂಸದೀಯ ವ್ಯವಹಾರಗಳ ಸಚಿವಾಲಯವು ಸೋಮವಾರ ಹೊರಡಿಸಿದ ಅಧಿಸೂಚನೆಯಲ್ಲಿ ಈ ಬಗ್ಗೆ ಉಲ್ಲೇಖಿಸಿದೆ. ಏಪ್ರಿಲ್ 1, 2023ರಿಂದ ಜಾರಿಗೆ ಬರುವಂತೆ ಸಂಸದರು ಮತ್ತು ಮಾಜಿ ಸಂಸದರ ವೇತನ, ಭತ್ಯೆಗಳು ಮತ್ತು ಪಿಂಚಣಿಗಳಲ್ಲಿ ಶೇಕಡಾ 24ರಷ್ಟು ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ. ಅದರಂತೆ ಸಂಸದರ ಮಾಸಿಕ ವೇತನವನ್ನು 1 ಲಕ್ಷ ರೂಪಾಯಿಗಳಿಂದ 1.24 ಲಕ್ಷ ರೂಪಾಯಿಗಳಿಗೆ ಪರಿಷ್ಕರಿಸಲಾಗಿದೆ. ಇದರೊಂದಿಗೆ ಅವರ ದೈನಂದಿನ ಭತ್ಯೆಗಳು ಮತ್ತು ಪಿಂಚಣಿ ಪ್ರಯೋಜನಗಳನ್ನು ಕೂಡ ಹೆಚ್ಚಿಸಲಾಗಿದೆ.

ಈ ಅಧಿಸೂಚನೆಯ ಪ್ರಕಾರ ಹಾಲಿ ಸಂಸದರ ದಿನಭತ್ಯೆಯನ್ನು 2,000 ರೂಪಾಯಿಗಳಿಂದ 2,500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಮಾಜಿ ಸಂಸದರು ಈಗ ತಿಂಗಳಿಗೆ 31,000 ರೂಪಾಯಿ ಪಿಂಚಣಿ ಪಡೆಯಲಿದ್ದು, ಈ ಹಿಂದೆ 25,000 ರೂಪಾಯಿ ಪಡೆಯುತ್ತಿದ್ದರು. ಇದರ ಜೊತೆಗೆ ಹೆಚ್ಚುವರಿಯಾಗಿ ಐದು ವರ್ಷಗಳನ್ನು ಮೀರಿ ಪ್ರತಿ ವರ್ಷ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಹೆಚ್ಚುವರಿ ಪಿಂಚಣಿಯನ್ನು ಕೂಡ ತಿಂಗಳಿಗೆ 2,000 ರೂಪಾಯಿಯಿಂದ 2,500 ರೂಪಾಯಿಗೆ ಹೆಚ್ಚಿಸಲಾಗಿದೆ.
ಸಂಸದರ ವೇತನ, ಭತ್ಯೆ ಮತ್ತು ಪಿಂಚಣಿ ಕಾಯ್ದೆಯಡಿ ಈ ಪರಿಷ್ಕರಣೆ ಮಾಡಲಾಗಿದೆ. ಇದು 1961ರ ಆದಾಯ ತೆರಿಗೆ ಕಾಯ್ದೆಯಲ್ಲಿ ನಿರ್ದಿಷ್ಟಪಡಿಸಿದ ವೆಚ್ಚ ಹಣದುಬ್ಬರ ಸೂಚ್ಯಂಕವನ್ನು ಆಧರಿಸಿದ್ದು, 2018ರ ಬಳಿಕ ಸಂಸದರ ವೇತನ ಮತ್ತು ಭತ್ಯೆಗಳಲ್ಲಿ ಇದು ಮೊದಲ ಪರಿಷ್ಕರಣೆಯಾಗಿದೆ.

ಸಂಸದರಿಗೆ ಏನೆಲ್ಲ ಭತ್ಯೆಗಳು ಸಿಗುತ್ತೆ?
2018ರಲ್ಲಿ ಕೊನೆಯ ಬಾರಿ ಸಂಸದರ ವೇತನ ಹಾಗೂ ಇನ್ನಿತರ ಭತ್ಯೆಗಳನ್ನು ಪರಿಷ್ಕರಿಸಲಾಗಿತ್ತು. ಆಗ ಸಂಸದರ ಮೂಲ ವೇತನವನ್ನು ತಿಂಗಳಿಗೆ 1 ಲಕ್ಷ ರೂಪಾಯಿ ಎಂದು ನಿಗದಿಪಡಿಸಲಾಗಿತ್ತು. ಇದರ ಜೊತೆಗೆ ಕಚೇರಿ ವೆಚ್ಚಗಳು ಮತ್ತು ಮತದಾರರೊಂದಿಗೆ ಸಂವಹನ ಸೇರಿ ಇತರೆ ಉದ್ದೇಶಗಳ ಖರ್ಚಿಗೆ 70,000 ರೂಪಾಯಿ ಕ್ಷೇತ್ರ ಭತ್ಯೆಯನ್ನು ಕೂಡ ನೀಡಲಾಗುತ್ತಿತ್ತು.
ಅಲ್ಲದೆ, ಸಂಸದರು ಫೋನ್ ಮತ್ತು ಇಂಟರ್ನೆಟ್ ಬಳಕೆಗೆ ವಾರ್ಷಿಕ ಭತ್ಯೆ, ತಮಗೆ ಮತ್ತು ಅವರ ಕುಟುಂಬಗಳಿಗೆ ವರ್ಷಕ್ಕೆ 34 ಉಚಿತ ದೇಶೀಯ ವಿಮಾನಗಳು, ಅನ್‌ಲಿಮಿಟೆಡ್ ಫಸ್ಟ್ ಕ್ಲಾಸ್ ರೈಲು ಪ್ರಯಾಣ ಮತ್ತು ರಸ್ತೆ ಪ್ರಯಾಣಕ್ಕಾಗಿ ಮೈಲೇಜ್ ಭತ್ಯೆ ಮುಂತಾದ ಹೆಚ್ಚುವರಿ ಸವಲತ್ತುಗಳನ್ನು ಸಹ ಸಂಸದರು ಪಡೆಯುತ್ತಾರೆ. ಸುಮಾರು 50,000 ಯೂನಿಟ್ ಉಚಿತ ವಿದ್ಯುತ್, ವಾರ್ಷಿಕವಾಗಿ 4,000 ಕಿಲೋಲೀಟರ್ ನೀರು, ನವದೆಹಲಿಯಲ್ಲಿ ಸರ್ಕಾರದಿಂದ ಒದಗಿಸಲಾದ ವಸತಿಯನ್ನು ಪಡೆಯುತ್ತಾರೆ. ಒಂದು ವೇಳೆ ಕೇಂದ್ರ ಸರ್ಕಾರದ ಅಧಿಕೃತ ವಸತಿಗಳಿಂದ ಹೊರಗುಳಿಯುವವರು ವಸತಿ ಭತ್ಯೆಯನ್ನು ಕೂಡ ಪಡೆಯಬಹುದು.
-
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್ ಕೊಟ್ಟ ವಿ.ಸೋಮಣ್ಣ -
ಬೆಂಗಳೂರಿನಲ್ಲಿ ಇಂದು ಶ್ರೀ ಎಂ ಅವರ "ಉಪನಿಷತ್ತುಗಳು ಮತ್ತು ಜೆ.ಕೃಷ್ಣಮೂರ್ತಿ" ಹೊಸ ಕೃತಿ ಬಿಡುಗಡೆ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ











Click it and Unblock the Notifications