ನಟಿ ತ್ರಿಶಾ ಕುರಿತ ಹೇಳಿಕೆ ವಿವಾದ, ಕೋರ್ಟ್ ಆದೇಶ ನಡುವೆಯೂ ಉದಯನಿಧಿ ಸ್ಟಾಲಿನ್ ಅರೆಸ್ಟ್
ತಂಜಾವೂರು: ನಟ ಮತ್ತು ರಾಜಕಾರಣಿ ಉದಯನಿಧಿ ಸ್ಟಾಲಿನ್ ಅವರು ನಟಿ ತ್ರಿಶಾ ಕೃಷ್ಣನ್ ಕುರಿತು ನೀಡಿರುವ ಅವಹೇಳನಕಾರಿ ಹೇಳಿಕೆ ತಮಿಳುನಾಡಿನಾದ್ಯಂತ ಭಾರೀ ಚರ್ಚೆ ಹುಟ್ಟು ಹಾಕಿದೆ. ಇದರ ಬೆನ್ನಲ್ಲೆ ಉದಯನಿಧಿ ಸ್ಟಾಲಿನ್ ಅವರನ್ನು ಇಂದು ಮಂಗಳವಾರ ಪೊಲೀಸರು ಸ್ಟಾಲಿನ್ ಮನೆಯಿಂದಲೇ ಬಂಧಿಸಿ ಕರೆದೊಯ್ದಿದ್ದಾರೆ. ಇದಕ್ಕು ಮುನ್ನವೇ ಬಂಧನ ವಿಚಾರವಾಗಿ ಕೋರ್ಟ್ ಮಹತ್ವದ ಆದೇಶ ಸಹ ನೀಡಿದೆ. ಕಾನೂನು ಕ್ರಮ ಎದುರಿಸುತ್ತೇನೆ ಎಂದು ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ಮತ್ತು ತಮಿಳುನಾಡಿಗೆ ಮಧ್ಯ ಕಾವೇರಿ ನದಿ ವಿವಾದ ಭುಗಿಲೆದ್ದಿದೆ. ಇದೇ ಕಾವೇರಿ ನದಿ ನೀರು ವಿಚಾರವಾಗಿ ನೆನ್ನೆ ಸೋಮವಾರ ತಂಜಾವೂರಿನಲ್ಲಿ ಪ್ರತಿಭಟನಾ ಸಮಾವೇಶ ನಡೆದಿತ್ತು. ಈ ವೇಳೆ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲನ್ ಅವರು ನಟಿ ತ್ರಿಶಾ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇಂದು ಕೋರ್ಟ್ ಆದೇಶದ ಹೊರತಾಗಿಯು ಉದಯನಿಧಿ ಸ್ಟಾಲಿನ್ ರನ್ನು ಪೊಲೀಸರು ಬಂಧಿಸಿ ಜೀಪಿನಲ್ಲಿ ಕರೆದೊಯ್ದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಕೋರ್ಟ್ ಹೇಳಿದ್ದೇನು?
ಕಾವೇರಿ ನೀರಿಗೆ ಸಂಬಂಧಿಸಿದ ತಮ್ಮ ಭಾಷಣದಲ್ಲಿ ನಟಿ ತ್ರಿಶಾ ಕುರಿತು ಡಬಲ್ ಮೀನಿಂಗ್ ಹೇಳಿಕೆ ನೀಡಿದ್ದ ಉದಯ ನಿಧಿ ಸ್ಟಾಲಿನ್ ಬಂಧನ ಆಗಲಿದೆ ಎನ್ನಲಾಗಿತ್ತು. ಇದೇ ವಿಚಾರವಾಗಿ ಕೋರ್ಟ್ 'ಇಂದು ಮಧ್ಯಾಹ್ನ 12 ಗಂಟೆಯವರೆಗೆ ಉದಯನಿಧಿ ಅವರನ್ನು ಬಂಧಿಸದಂತೆ ಪೊಲೀಸರಿಗೆ ನಿರ್ದೇಶಿಸಿ ಆದೇಶಿಸಿದೆ. ಮಧ್ಯಾಹ್ನ ಹೊತ್ತಿಗಾಗಲೇ ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಈ ಆದೇಶದ ನಡುವೆಯು ಉದಯ್‌ರನ್ನು ಪೊಲೀಸರು ಅರೆಸ್ ಮಾಡಿದ್ದಾರೆ.
ಕಾನೂನು ಪ್ರಕಾರ ಕೇಸ್ ಎದುರಿಸುವೆ: ಸ್ಟಾಲಿನ್
ನಾನು ಯಾರು ಹೆಸರು ಉಲ್ಲೇಖ ಮಾಡಿಲ್ಲ, ಕಾನೂನು ಪ್ರಕಾರ ಪ್ರಕರಣ ಎದುರಿಸುತ್ತೇನೆ ಎಂದು ತಿಳಿಸಿದ್ದಾರೆ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. ಈ ಮೂಲಕ ತಾವು ಖುದ್ದು ತ್ರಿಶಾ ಅವರ ಹೆಸರು ಹೇಳಿಲ್ಲ ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಉದಯ್ ನಿಧಿ ಸ್ಟಾಲಿನ್ ಹೇಳಿದ್ದೇನು?
ಕಾವೇರಿ ನದಿ ನೀರು ಸಮಸ್ಯೆ ಕುರಿತು ಭಾಷಣ ಮಾಡುವ ವೇಳೆ ಟಿವಿಕೆ ಪಕ್ಷದ ಮುಖ್ಯಸ್ಥ, ಸಿಎಂ ಸಿ. ವಿಜಯ್ ಜೋಸೆಫ್ ಅವರ ವಿರುದ್ಧ ಉದಯ್ ಕಿಡಿ ಕಾರಿದರು. ತಮಿಳುನಾಡಿಗೆ ಒಂದು ಹನಿ ನೀರು ಬಂದಿಲ್ಲ ಎಂದು ಟೀಕಿಸಿ ಭಾಷಣ ಮಾಡುವಾಗ ಕೆಲವರು ತ್ರಿಶಾ....ತ್ರಿಶಾ... ಎಂದು ಕೂಗಿದ್ದಾರೆ. ಈ ವೇಳೆ ಭಾಷಣಕ್ಕೆ ಕೊಂಚ ತಡೆ ನೀಡಿದ ಉದಯ್ ಇವರಿಗೆ ಕಾವೇರಿ ನೀರಿನ ಬಗ್ಗೆ ಚಿಂತೆ ಇಲ್ಲ. ನೀರು ಬೇರೆಡೆಗೆ ತಲುಪಲಿ, ತಲುಪದಿರಲಿ ಅದು ಅಲ್ಲಿಗೆ ತಲುಪಬೇಕು ಎಂದು ನಗುತ್ತಾ ಹೇಳಿದರು. ಬಳಿಕ ಅವರು ಇದು ಕಾವೇರಿ ನೀರಿನ ಬಗ್ಗೆ ಎಂದು ತಿಳಿಸಿದ್ದಾರೆ.
🚨 "ಉದಯನಿಧಿ ಬಂಧನ ತಡೆಯಲು ರಸ್ತೆಯಲ್ಲೇ ಮಲಗಿ ಡಿಎಂಕೆ ಕಾರ್ಯಕರ್ತರ ಧರಣಿ!": ಪೊಲೀಸ್ ವಾಹನ ತಡೆದು ಭಾರಿ ಹೈಡ್ರಾಮಾ, ಪರಿಸ್ಥಿತಿ ಉದ್ವಿಗ್ನ!#UdhayanidhiStalin #DMKProtest #ViralWatch #OIKannada #OIReels #RoadBlock #TamilNaduPolitics pic.twitter.com/gWa48BE2nw
— oneindiakannada (@OneindiaKannada) August 4, 2026
ಅವರ ಈ ಹೇಳಿಕೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಉದಯ್ ನಿಧಿ ಕುರಿತು ಸಾಕಷ್ಟು ಆಕ್ರೋಶ ವ್ಯಕ್ತವಾಗಿವೆ. ಯಾವುದೇ ತಂದೆ, ತಾಯಿ, ಮಗಳನ್ನು ಹೊಂದಿದ ರೌಡಿ, ಕಳ್ಳ ಸಹ ಇಷ್ಟೊಂದು ಅಸಭ್ಯವಾಗಿ ಮಾತನಾಡಲು ಸಾಧ್ಯವಿಲ್ಲ. ಇದನ್ನು ಕ್ಷಮಿಸಲಾಗದು ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.
ಪೊಲೀಸರು ಉದಯ್ ನಿಧಿ ಹೇಳಿಕೆ ಆಧಾರದಲ್ಲಿ ಸ್ವಯಂ ದೂರು ದಾಖಲಿಸಿಕೊಂಡಿದ್ದು, ಇದೀಗ ಬಂಧಿಸಿ ಕರೆದೊಯ್ದು ವಿಚಾರಣೆ ಆರಂಭಿಸಿದ್ದಾರೆ. ಎಲ್ಲರ ಚಿತ್ತ ತಮಿಳುನಾಡಿನ ಈ ಪ್ರಕರಣ, ಇಂದಿನ ನ್ಯಾಯಾಲಯದ ವಿಚಾರಣೆ ಮೇಲೆ ನಟ್ಟಿದೆ.


Click it and Unblock the Notifications
