ಉಬರ್ ಲಾಸ್ಟ್ & ಫೌಂಡ್ ಇಂಡೆಕ್ಸ್ 2023: ಮರೆತುಹೋಗುವ ನಗರಗಳಲ್ಲಿ ದೆಹಲಿ ಫಸ್ಟ್; ಬೆಂಗಳೂರಿಗೆ ಎಷ್ಟನೇ ಸ್ಥಾನ?
ಉಬರ್‌ನ 2023ರ ಲಾಸ್ಟ್ ಅಂಡ್ ಫೌಂಡ್ ಇಂಡೆಕ್ಸ್ ಪ್ರಕಾರ, ಭಾರತದ ಅತ್ಯಂತ ಮರೆವಿನ ನಗರವಾಗಿ ದೆಹಲಿ ಅಗ್ರಸ್ಥಾನ ಪಡೆದುಕೊಂಡಿದೆ. ಈ ಹಿಂದೆ ಎರಡು ವರ್ಷಗಳ ಕಾಲ ವಾಣಿಜ್ಯ ನಗರಿ ಮುಂಬೈ ಮೊದಲ ಸ್ಥಾನವನ್ನು ಪಡೆದಿತ್ತು.
ಇದೀಗ ದೆಹಲಿಯು ಮುಂಬೈ ನಗರವನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದೆ. ಇನ್ನು ಮೊದಲ ನಾಲ್ಕು ಮರೆತುಹೋಗುವ ನಗರಗಳ ಪಟ್ಟಿಯಲ್ಲಿ ಹೈದರಾಬಾದ್ ಮತ್ತು ಬೆಂಗಳೂರು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.

2023ರ ಲಾಸ್ಟ್ ಅಂಡ್ ಫೌಂಡ್ ಇಂಡೆಕ್ಸ್ ಪ್ರಕಾರ, ಭಾರತೀಯರು ತಮ್ಮ ಉಬರ್ ಟ್ಯಾಕ್ಸಿಗಳಲ್ಲಿ ಬೇರೇ ಬೇರೆ ವಸ್ತುಗಳನ್ನು ಮರೆತು ಹೋಗುತ್ತಾರೆ ಎಂಬುದನ್ನು ಸಾಬೀತುಪಡಿಸಿದೆ.
ಉಬರ್‌ನ ಲಾಸ್ಟ್ ಅಂಡ್ ಫೌಂಡ್ ಇಂಡೆಕ್ಸ್ ಆಗಾಗ ಮರೆತುಹೋಗುವ ವಸ್ತುಗಳು, ನಗರಗಳು, ದಿನಗಳು ಮತ್ತು ಸಮಯಗಳ ಮಾಹಿತಿಯನ್ನು ಒದಗಿಸುತ್ತದೆ. ಇದು ಎಲ್ಲವೂ ಡೇಟಾದಿಂದ ಬೆಂಬಲಿತವಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಯಾವುದಾದರೂ ವಸ್ತು ಮರೆತು ಹೋದರೆ ಉಬರ್ ಅಪ್ಲಿಕೇಶನ್‌ನಲ್ಲಿನ ಲಭ್ಯವಿರುವ ಆಯ್ಕೆಗಳ ಕುರಿತು ಪ್ರಯಾಣಿಕರಿಗೆ ತಿಳಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
ಮಂಗಳವಾರ, ಮೇ 2ರಂದು ಬಿಡುಗಡೆಯಾದ ಸೂಚ್ಯಂಕ ಪ್ರಕಾರ, ಮೊಬೈಲ್ ಫೋನ್‌ಗಳು ಸಾಮಾನ್ಯವಾಗಿ ಮರೆತುಹೋಗುವ ವಸ್ತುಗಳಾಗಿವೆ. ಈ ಕ್ಯಾಬ್‌ಗಳಲ್ಲಿ ಜನರು ತಮ್ಮ ಟಿವಿ, ವೆಸ್ಟರ್ನ್ ಕಮೋಡ್, ಬ್ರೂಮ್ ಮತ್ತು ಭಾರೀ ಯಂತ್ರೋಪಕರಣಗಳನ್ನು ಸಹ ಮರೆತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ವರದಿಯ ಪ್ರಕಾರ, ಜನರು ಶನಿವಾರ ಹೆಚ್ಚಿನ ಸೋಮಾರಿಯಾಗಿರುತ್ತಾರೆ. ಅಂದು ಉಬರ್ ಕ್ಯಾಬ್‌ನಲ್ಲಿರುವ ವಸ್ತುಗಳನ್ನು ಮರೆತುಬಿಡುತ್ತಾರೆ ಮತ್ತು ದಿನದ ಸಂಜೆ ಅತ್ಯಂತ ಮರೆತುಹೋಗುವ ಸಮಯವಾಗಿದೆ. ಪ್ರಯಾಣಿಕರು ಸುಮಾರು 7 ಗಂಟೆಗೆ ಜಾಸ್ತಿ ಮರೆಯುತ್ತಾರೆ. 6 ಮತ್ತು 8 ಗಂಟೆಗೆ ಮರೆತುಬಿಡುತ್ತಾರೆ.
ಭಾರತದಾದ್ಯಂತ ಉಬರ್‌ಗಳಲ್ಲಿ ಬಿಟ್ಟುಹೋದ ಸಾಮಾನ್ಯ ವಸ್ತುಗಳೆಂದರೆ ಫೋನ್‌ಗಳು, ಬ್ಯಾಗ್, ವ್ಯಾಲೆಟ್ ಮತ್ತು ಬಟ್ಟೆಗಳಾಗಿವೆ. ಇದೇ ವೇಳೆ ಪೊರಕೆ, ಕಾಲೇಜು ಪ್ರವೇಶ ಕಾರ್ಡ್ ಮತ್ತು ತಮ್ಮ ಮಕ್ಕಳ ಸ್ಟ್ರೋಲ್ಲೆರ್‌ನಂತಹ ವಿಶಿಷ್ಟ ಮತ್ತು ವಿಲಕ್ಷಣ ವಸ್ತುಗಳನ್ನು ಮರೆಯುವ ಪ್ರವೃತ್ತಿಯನ್ನು ಭಾರತೀಯರು ಬೆಳೆಸಿಕೊಂಡಿದ್ದಾರೆ.
ಮೊಬೈಲ್ ಫೋನ್ ನಂತರ, ಲ್ಯಾಪ್‌ಟಾಪ್ ಬ್ಯಾಗ್‌ಗಳು, ವ್ಯಾಲೆಟ್, ಬಟ್ಟೆ, ಹೆಡ್‌ಫೋನ್‌ಗಳು, ನೀರಿನ ಬಾಟಲಿಗಳು ಮತ್ತು ಕನ್ನಡಕ ಅಥವಾ ಸನ್‌ಗ್ಲಾಸ್, ಕೀ, ಆಭರಣ ಮತ್ತು ಕೈಗಡಿಯಾರ ಸಹ ಟಾಪ್ 10 ಪಟ್ಟಿಯಲ್ಲಿ ಸೇರಿಕೊಂಡಿವೆ.
ಉಬರ್ ಕ್ಯಾಬ್‌ಗಳಲ್ಲಿ ಮೊಬೈಲ್ ಫೋನ್ ಸಾಮಾನ್ಯವಾಗಿ ಮರೆತುಹೋಗುವ ವಸ್ತಗಳಾಗಿವೆ ಮತ್ತು ಉಬರ್ ಕ್ಯಾಬ್‌ಗಳಲ್ಲಿ ಬಿಟ್ಟುಹೋದ ಪ್ರಮುಖ ಮೂರು ಫೋನ್ ಬ್ರ್ಯಾಂಡ್‌ಗಳೆಂದರೆ ಸ್ಯಾಮ್‌ಸಂಗ್, ಆ್ಯಪಲ್, ಮತ್ತು ಒನ್ ಪ್ಲಸ್.
ಉಬರ್ ಕ್ಯಾಬ್‌ಗಳಲ್ಲಿ ಜನರು ಐಫೋನ್‌ಗಳಿಗಿಂತ ಮೂರು ಪಟ್ಟು ಹೆಚ್ಚು ಆಂಡ್ರಾಯ್ಡ್ ಫೋನ್‌ಗಳನ್ನು ಮರೆತಿದ್ದಾರೆ ಎಂದು ಉಬರ್‌ನ ಲಾಸ್ಟ್ ಅಂಡ್ ಫೌಂಡ್ ಇಂಡೆಕ್ಸ್ ವರದಿ ಹೇಳುತ್ತದೆ.
ಒಬ್ಬ ಸವಾರನು ದೊಡ್ಡ ಪರದೆಯ ಟಿವಿಯನ್ನೇ ಮರೆತಿದ್ದರೆ, ಇನ್ನೊಬ್ಬ ತನ್ನ ವಾಕಿಂಗ್ ಸ್ಟಿಕ್ ಅನ್ನು ಮರೆತಿರುವುದು ವರದಿಯಾಗಿದೆ. ಪ್ರಯಾಣಿಕರು ಉಬರ್ ಕ್ಯಾಬ್‌ಗಳಲ್ಲಿ ಕೆಂಪು ಬಣ್ಣದ ವಸ್ತುಗಳನ್ನೇ ಹೆಚ್ಚಾಗಿ ಮರೆತುಬಿಡುತ್ತಾರೆ. ನಂತರ ನೀಲಿ, ಹಳದಿ, ಗುಲಾಬಿ ಮತ್ತು ಗುಲಾಬಿ ಬಣ್ಣಗಳ ವಸ್ತುಗಳ ಸ್ಥಾನ ಪಡೆದಿವೆ.












Click it and Unblock the Notifications