ಡೆಲ್ಟಾ ಆತಂಕ; ಮತ್ತೆ ಭಾರತದ ವಿಮಾನಗಳ ಮೇಲೆ ನಿರ್ಬಂಧ ವಿಸ್ತರಿಸಿದ ಯುಎಇ

ನವದೆಹಲಿ, ಜುಲೈ 26: ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಭಾರತದಿಂದ ಬರುವ ವಿಮಾನಗಳ ಮೇಲೆ ಹೇರಿದ್ದ ನಿರ್ಬಂಧವನ್ನು ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ಆಗಸ್ಟ್‌ 2ರವರೆಗೂ ವಿಸ್ತರಿಸಿದೆ.

ಯುಎಇ ಅಧಿಕಾರಿಗಳ ನಿರ್ದೇಶನದ ಮೇರೆಗೆ ವಿಮಾನಗಳ ಮೇಲೆ ನಿರ್ಬಂಧ ವಿಸ್ತರಿಸಲಾಗಿದೆ. ಈ ನಿರ್ಬಂಧ ಇನ್ನಷ್ಟು ವಿಸ್ತರಣೆಯಾಗಬಹುದು ಎಂದು ಖಲೀಜ್ ಟೈಮ್ಸ್‌ ಎಟಿಹಾಡ್ ಏರ್‌ವೇಸ್ ವರದಿ ಮಾಡಿದೆ.

UAE Extends Ban On Flights From India Till August 2

"ಭಾರತದಿಂದ ಯುಎಇಗೆ ಬರುವ ವಿಮಾನಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿರುವ ಕುರಿತು ನಮಗೆ ದೃಢೀಕರಣ ದೊರೆತಿದೆ" ಎಂದು ಎಟಿಹಾಡ್ ಏರ್‌ವೇಸ್ ಸಂಸ್ಥೆ ಮಾಹತಿ ನೀಡಿದೆ.

ಭಾರತದಲ್ಲಿ ಡೆಲ್ಟಾ ಕೊರೊನಾ ರೂಪಾಂತರ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ. ಕೆನಡಾ ಕೂಡ ಕಳೆದ ತಿಂಗಳು ವಿಮಾನಗಳ ಮೇಲಿನ ನಿರ್ಬಂಧವನ್ನು ಒಂದು ತಿಂಗಳ ಕಾಲ ವಿಸ್ತರಿಸಿತ್ತು.

ಈಚೆಗಷ್ಟೆ, ಭಾರತೀಯರಿಗೆ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸುವ ವಿಷಯವಾಗಿ ವಿದೇಶಿ ಸರ್ಕಾರಗಳೊಂದಿಗೆ ಚರ್ಚಿಸುವುದಾಗಿ ಕೇಂದ್ರ ತಿಳಿಸಿತ್ತು.

"ಸದ್ಯಕ್ಕೆ ಭಾರತದ ಕೊರೊನಾ ಪರಿಸ್ಥಿತಿ ಸುಧಾರಣೆಯಾಗಿದ್ದು, ಭಾರತೀಯರಿಗೆ ಪ್ರಯಾಣ ನಿರ್ಬಂಧಗಳನ್ನು ತೆರವುಗೊಳಿಸುವ ಸಂಬಂಧ ವಿದೇಶಿ ಸರ್ಕಾರಗಳೊಂದಿಗೆ ಚರ್ಚಿಸುತ್ತೇವೆ. ಇದು ಆರ್ಥಿಕ ಚೇತರಿಕೆಗೆ ಬಹುಮುಖ್ಯ ಅಂಶವಾಗಿದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+