• search

ಶಂಕಿತ ಇಬ್ಬರು ಉಗ್ರರಿಗೂ ಸೋನಿಯಾ ಆಪ್ತ ಕಾರ್ಯದರ್ಶಿಗೂ ಏನು ಸಂಬಂಧ?

By Balaraj Tantri
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಗುಜರಾತಿನ ಭಯೋತ್ಪಾದನಾ ನಿಗ್ರಹ (ಎಟಿಎಸ್) ದಳ ಇಬ್ಬರು ಶಂಕಿತ ಐಎಸ್ಐಎಸ್ ಉಗ್ರರನ್ನು ಸೂರತ್ ನಲ್ಲಿ ಎರಡು ದಿನದಹಿಂದೆ ಬಂಧಿಸಿತ್ತು. ಈ ಸಂಬಂಧ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ನೀಡಿರುವ ಹೇಳಿಕೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ದಾರಿ ಮಾಡಿಕೊಟ್ಟಿದೆ.

  ಇಬ್ಬರು ಶಂಕಿತ ಉಗ್ರರಲ್ಲಿ ಒಬ್ಬ ಅಂಕಲೇಶ್ವರ ಸರ್ದಾರ್ ಪಟೇಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಈ ಆಸ್ಪತ್ರೆಯ ಟ್ರಸ್ಟಿಗಳಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆಪ್ತ/ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಕೂಡಾ ಒಬ್ಬರು.

  ಸೋನಿಯಾ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

  ಭರೂಚ್ ನಲ್ಲಿ ನವೀಕರಣಗೊಂಡ ಆಸ್ಪತ್ರೆಯ ಉದ್ಘಾಟನೆಯಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜೊತೆ ಅಹಮದ್ ಪಟೇಲ್ ಕೂಡಾ ಭಾಗವಹಿಸಿದ್ದರು. ಇಬ್ಬರು ಬಂಧಿತ ಶಂಕಿತ ಉಗ್ರರಲ್ಲಿ ಒಬ್ಬ ಈ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಗುಜರಾತ್ ಸಿಎಂ ರೂಪಾನಿ ಹೇಳಿದ್ದಾರೆ.

  ಇಂತಹ ಉಗ್ರನಿಗೆ ತಮ್ಮ ಆಸ್ಪತೆಯಲ್ಲಿ ಕೆಲಸ ನೀಡಿದ್ದಕ್ಕೆ, ನೈತಿಕ ಹೊಣೆಹೊತ್ತು ಅಹಮದ್ ಪಟೇಲ್ ರಾಜೀನಾಮೆ ನೀಡಬೇಕೆಂದು ರೂಪಾನಿ ಒತ್ತಾಯಿಸಿದ್ದಾರೆ. ರೂಪಾನಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಚುನಾವಣೆಯ ವೇಳೆ ಬಿಜೆಪಿ ಅಸಾಹಯಕತೆಯಿಂದ ಈ ಹೇಳಿಕೆ ನೀಡುತ್ತಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

  ಆಸ್ಪತ್ರೆಯ ಮಾನವ ಸಂಪನ್ಮೂಲ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮೊಹಮ್ಮದ್ ಖಾಸಿಂ ಎನ್ನುವ ವ್ಯಕ್ತಿಯನ್ನು ಮಾಮೂಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಕಂಪೆನಿಗೆ ಸೇರಿಸಿಕೊಳ್ಳಲಾಗಿತ್ತು, ಈ ಅಕ್ಟೋಬರ್ ನಾಲ್ಕರಂದು ಆತ ಕಂಪೆನಿಗೆ ರಾಜೀನಾಮೆ ನೀಡಿದ್ದಾನೆ. ಈತನಿಗೆ ಉಗ್ರರ ಜೊತೆ ಸಂಬಂಧವಿದೆ ಎನ್ನುವ ಮಾಹಿತಿ ನಮಗಿರಲಿಲ್ಲ ಎಂದು ಇಲಾಖೆ ಸ್ಪಷ್ಟ ಪಡಿಸಿದೆ. ಮುಂದೆ ಓದಿ...

  ಅಹಮದ್ ಪಟೇಲ್ ರಾಜೀನಾಮೆ ನೀಡಲಿ

  ಅಹಮದ್ ಪಟೇಲ್ ರಾಜೀನಾಮೆ ನೀಡಲಿ

  ಅಹಮದ್ ಪಟೇಲ್ ರಾಜೀನಾಮೆ ನೀಡಬೇಕೆಂದು ಗುಜರಾತ್ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಎಟಿಎಸ್ ಕಾರ್ಯಾಚರಣೆಯನ್ನು ನಾವು ಮನಸಾರೆ ಹೊಗಳುತ್ತೇವೆ. ಆದರೆ, ಬಿಜೆಪಿ ಆರೋಪ ತಲೆಬುಡ ಇಲ್ಲದಂತದ್ದು. ದೇಶದ ಭದ್ರತೆ ನಮಗೆ ಮೊದಲ ಆದ್ಯತೆ, ಇಂತಹ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಬಾರದು ಎಂದು ಕಾಂಗ್ರೆಸ್ ಹೇಳಿದೆ.

  ಕಾಂಗ್ರೆಸ್ with ಟೆರರಿಸ್ಟ್ ಹ್ಯಾಷ್ ಟ್ಯಾಗ್

  ಕಾಂಗ್ರೆಸ್ with ಟೆರರಿಸ್ಟ್ ಹ್ಯಾಷ್ ಟ್ಯಾಗ್

  #CongressWithTerrorists ಎನ್ನುವ ಟ್ವಿಟ್ಟರ್ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದ್ದು, ಭಯೋತ್ಪಾದಕರಿಗಾಗಿ ಅಹ್ಮದ್ ಪಟೇಲ್ ಒಂದು ಆಸ್ಪತ್ರೆಯನ್ನು ಸುರಕ್ಷಿತ ತಾಣ ಮಾಡಲು ಸಾಧ್ಯವಾದರೆ, ಕಾಂಗ್ರೆಸ್ ನೇತೃತ್ವದಲ್ಲಿ ಗುಜರಾತ್ ಯಾವ ಮಟ್ಟಕ್ಕೆ ಇಳಿಯುತ್ತಿತ್ತು ಎನ್ನುವ ಟ್ವೀಟ್.

  ಕಾಂಗ್ರೆಸ್ ಮತ್ತು ಭಯೋತ್ಪಾದನೆ ಇಬ್ಬರೂ ಒಂದೇ

  ಕಾಂಗ್ರೆಸ್ ಮತ್ತು ಭಯೋತ್ಪಾದನೆ ಇಬ್ಬರೂ ಒಂದೇ

  ಕಾಂಗ್ರೆಸ್ ಮತ್ತು ಭಯೋತ್ಪಾದನೆ ಇಬ್ಬರೂ ಒಂದೇ. ಯಾಕೆ ಅಹಮದ್ ಪಟೇಲ್, ತನ್ನ ಆಸ್ಪತೆಯಲ್ಲಿ ಉಗ್ರನಿಗೆ ನೆಲೆ ಕೊಡಬೇಕಿತ್ತು.

  ಅಹಮದ್ ಪಟೇಲ್, ಸೋನಿಯಾ ಕಾರ್ಯದರ್ಶಿ

  ಅಹಮದ್ ಪಟೇಲ್, ಸೋನಿಯಾ ಕಾರ್ಯದರ್ಶಿ

  ಸೋನಿಯಾ ಆಪ್ತನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಶಂಕಿತ ಉಗ್ರನ ಬಂಧನ. ಗುಜರಾತ್ ಚುನಾವಣೆಯನ್ನು ಉಗ್ರರ ಸಹಾಯದೊಂದಿಗೆ ಕಾಂಗ್ರೆಸ್ ಗೆಲಲ್ಲು ಪ್ರಯತ್ನಿಸುತ್ತಿದೆಯೇ?

  ISI ಗೂಢಚಾರ ಎಂದು ವ್ಯಕ್ತಿಯ ಫೋಟೋ

  ISI ಗೂಢಚಾರ ಎಂದು ವ್ಯಕ್ತಿಯ ಫೋಟೋ

  ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಭಾಷಣ ಮಾಡುತ್ತಿದ್ದ ಇಮೇಜನ್ನು ಹಾಕಿ, ಅದರ ಹಿಂದೆ ISI ಗೂಢಚಾರ ಎಂದು ವ್ಯಕ್ತಿಯ ಫೋಟೋ ಹಾಕಿರುವ ಟ್ವೀಟ್

  ಝಾಕೀರ್ ಹುಸೇನ್ ಅವರನ್ನು ಬರಮಾಡಿಕೊಂಡಿತ್ತು

  ಝಾಕೀರ್ ಹುಸೇನ್ ಅವರನ್ನು ಬರಮಾಡಿಕೊಂಡಿತ್ತು

  ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಲು ಝಾಕೀರ್ ಹುಸೇನ್ ಅವರನ್ನು ಬರಮಾಡಿಕೊಂಡಿತ್ತು. ದೇಶಕ್ಕೆ ಬ್ರಿಟಿಷರಿಗಿಂತ ಜಾಸ್ತಿ ತೊಂದರೆಯಾಗಿರುವುದು ಕಾಂಗ್ರೆಸ್ಸಿನಿಂದ ಎನ್ನುವ ಟ್ವೀಟ್.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The arrest of 2 suspected ISIS terrorists by Gujarat ATS a few days ago has sparked off a war of words between the BJP and the Congress. BJP demand Ahmed Patel resignation, since, one of the suspected ISIS terrorists arrested was working in where Ahmed Patel is one of the trustee of that hospital till 2014.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more