ಮೋದಿ ಕಾಲಿಗೆ ಬಿದ್ರು, ರಾಹುಲ್ ಮುತ್ತು ಕೊಟ್ರು: ಇದ್ರಲ್ಲಿ ತಪ್ಪೇನಿದೆ ಟ್ವಿಟ್ಟಿಗರೇ?
Recommended Video

ಬಿಜೆಪಿ ಮತ್ತು ಕಾಂಗ್ರೆಸ್ ಅಭಿಮಾನಿಗಳು ಸದಾ ಒಂದಲ್ಲಾ ಒಂದು ವಿಚಾರವನ್ನು ಇಟ್ಟುಕೊಂಡು ಒಬ್ಬರು ಇನ್ನೊಬ್ಬರ ಕಾಲೆಳೆಯುವ ಕೆಲಸವನ್ನು ಮಾಡಿಕೊಂಡು ಬರುತ್ತಲೇ ಇದ್ದಾರೆ. ಕೆಲವೊಂದು ಆರೋಗ್ಯಕರ ಚರ್ಚೆಯಾದರೆ, ಬಹುತೇಕ ಬಾರಿ ಬೇಡವಾದ ಕಾರಣಕ್ಕೇ ಚರ್ಚೆಗಳು ನಡೆಯುತ್ತಿರುತ್ತವೆ.
ಇಂತಹ ಬೇಡವಾದ ವಿಷಯವನ್ನು ಇಟ್ಟುಕೊಂಡು ಬಿಜೆಪಿ ಮತ್ತು ಕಾಂಗ್ರೆಸ್ ಟ್ವಿಟ್ಟರ್ ಬೆಂಬಲಿಗರು ಈಗ ಚರ್ಚೆ ನಡೆಸಲಾರಂಭಿಸಿದ್ದಾರೆ.
ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ತನ್ನ ತಾಯಿ ಸೋನಿಯಾ ಗಾಂಧಿಗೆ ಪ್ರೀತಿಯ ಮುತ್ತನ್ನು ಇಟ್ಟು ಆಶೀರ್ವಾದ ಪಡೆದುಕೊಂಡಿದ್ದರು. ಈ ವಿಷಯವನ್ನು ಇಟ್ಟುಕೊಂಡು, ಮೋದಿ ತನ್ನ ತಾಯಿಯ ಬಳಿ ಆಶೀರ್ವಾದ ಪಡೆಯುವ ದೃಶ್ಯ ಮತ್ತು ರಾಹುಲ್ ಆಶೀರ್ವಾದ ಪಡೆಯುವ ಪದ್ದತಿಯನ್ನು ತಾಳೆಹಾಕಿ ಚರ್ಚೆ ನಡೆಯುತ್ತಿದೆ.
ಮೋದಿ ತನ್ನ ತಾಯಿಯ ಪಾದಕ್ಕೆ ಎರಗಿ ಆಶೀರ್ವಾದ ಪಡೆಯುವ ಮತ್ತು ರಾಹುಲ್ ತನ್ನ ತಾಯಿಗೆ ಮುತ್ತು ನೀಡಿ ಅಶೀರ್ವಾದ ಪಡೆಯುವ ವಿಷಯವನ್ನಿಟ್ಟುಕೊಂಡು, 'ಇದೇನಾ ನಮ್ಮ ಸಂಸ್ಕೃತಿ' ಎನ್ನುವ ಅನಾವಶ್ಯಕ ಚರ್ಚೆ ನಡೆಯುತ್ತಿದೆ.
ಮೋದಿಯವರದ್ದು ಭಾರತೀಯ ಸಂಸ್ಕೃತಿ, ರಾಹುಲ್ ಗಾಂಧಿಯವರದ್ದು ಪಾಶ್ಚಿಮಾತ್ಯ ಸಂಸ್ಕೃತಿ ಎನ್ನುವುದು ಒಂದೆಡೆ, ಇದರಲ್ಲಿ ತಪ್ಪೇನಿದೆ ಎನ್ನುವ ರಾಹುಲ್ ಪರ ಚರ್ಚೆಗಳು ಟ್ವಿಟ್ಟರ್ ನಲ್ಲಿ ನಡೆಯುತ್ತಿದೆ. ಇದರ ಕೆಲವೊಂದು ಸ್ಯಾಂಪಲ್ ಮುಂದಿದೆ..

ಮೋದಿ ಕಾಲಿಗೆ ನಮಸ್ಕರಿಸುವುದು, ರಾಹುಲ್ ಇನ್ನೊಂದು ಇಮೇಜ್
ನರೇಂದ್ರ ಮೋದಿ ತನ್ನ ತಾಯಿಗೆ ಕಾಲಿಗೆ ನಮಸ್ಕರಿಸುತ್ತಿರುವ ದೃಶ್ಯ ಒಂದೆಡೆ ಇಟ್ಟುಕೊಂಡು, ಇನ್ನೊಂದೆಡೆ ರಾಹುಲ್ ತನ್ನ ತಾಯಿಗೆ ಮುತ್ತನ್ನಿಟ್ಟು ಆಶೀರ್ವಾದ ಪಡೆಯುತ್ತಿರುವ ಇಮೇಜನ್ನು ಕೊಲಾಜ್ ಮಾಡಿ, ಟ್ವಿಟ್ಟರ್ ನಲ್ಲಿ ಚರ್ಚೆ ನಡೆಯುತ್ತಿದೆ.

ಪಾಶ್ಚಿಮಾತ್ಯ ಸಂಸ್ಕೃತಿ, ಇಂಡಿಯನ್ ಕಲ್ಚರ್
ಇದು ನಮ್ಮ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ತೋರಿಸುತ್ತದೆ. ಇದು ಇಂಡಿಯನ್ ಕಲ್ಚರ್, ಇನ್ನೊಂದು ಇಟೆಲಿಯನ್ ಕಲ್ಚರ್. ಹರ್ ಹರ್ ಮೋದಿ ಎನ್ನುವ ಮೋದಿ ಪರವಿರುವ ಟ್ವೀಟುಗಳು.

ಇದು ಅವರವರ ವೈಯಕ್ತಿಕ ವಿಚಾರ
ಇದು ಅವರವರ ವೈಯಕ್ತಿಕ ವಿಚಾರ. ನೀವೊಬ್ಬರು ಪತ್ರಕರ್ತರು, ನಿಮ್ಮ ಟ್ವೀಟುಗಳು ಇತರರ ಮೇಲೆ ಪ್ರಭಾವ ಬೀರುತ್ತದೆ. ಎಲ್ಲದಕ್ಕೂ ಒಂದು ಸಂಸ್ಕೃತಿ ಅನ್ನೋದು ಇರುತ್ತೆ. ನಾವೇನು ಮೋದಿ ವಿರೋಧಿಗಳಲ್ಲ, ಆದರೆ ಬೇಡವಾದ ವಿಚಾರವನ್ನಿಟ್ಟುಕೊಂಡು ಚರ್ಚೆ ನಡೆಸುವುದಕ್ಕೆ ನನ್ನ ವಿರೋಧವಿದೆ ಎನ್ನುವ ಟ್ವೀಟ್.

ಮೋದಿಯವರದ್ದು ಫೋಟೋಗಾಗಿ ತೆಗೆದುಕೊಳ್ಳುತ್ತಿರುವ ಆಶೀರ್ವಾದ
ಇವರಿಬ್ಬರ ನಡುವೆ ಬಹಳ ವ್ಯತ್ಯಾಸವಿದೆ, ರಾಹುಲ್ ಗಾಂಧಿಯವರದ್ದು ನಿಜವಾದ ಪ್ರೀತಿ, ಮೋದಿಯವರದ್ದು ಫೋಟೋಗಾಗಿ ತೆಗೆದುಕೊಳ್ಳುತ್ತಿರುವ ಆಶೀರ್ವಾದ. ಹಿಂದೂ ಮತ್ತು ಕ್ರಿಶ್ಚಿಯನ್ ಸಂಸ್ಕೃತಿಯನ್ನು ಇದನ್ನು ಬಿಂಬಿಸುತ್ತದೆ.

ಜನಿವಾರ ಹಾಕಿಕೊಂಡ ಪಂಡಿತರ ಪಾಶ್ಚಿಮಾತ್ಯ ಸಂಸ್ಕೃತಿ
ಮೋದಿಯೂ ಕೂಡಾ ತನ್ನ ತಾಯಿಗೆ ಮುತ್ತಿಟ್ಟು ಆಶೀರ್ವಾದ ಪಡೆದುಕೊಂಡಿದ್ದರೆ ಬೇಡ ಅನ್ನುತ್ತಿದ್ದರೇ? ಜನಿವಾರ ಹಾಕಿಕೊಂಡ ಪಂಡಿತರ ಪಾಶ್ಚಿಮಾತ್ಯ ಸಂಸ್ಕೃತಿ ಎನ್ನುವ ಟ್ವೀಟ್.












Click it and Unblock the Notifications