• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಯ್ಡು-ಮೋದಿ, ವಿಚ್ಛೇದನ ಮತ್ತು ಅವಕಾಶವಾದೀ ರಾಜಕಾರಣ..!

|
   ಮೋದಿಯವರ ಎನ್ ಡಿ ಎ ಮೈತ್ರಿಕೂಟಕ್ಕೆ ವಿದಾಯ ಚಂದ್ರಬಾಬು ನಾಯ್ಡುರವರ ಟಿಡಿಪಿ | Oneindia Kannada

   ಹೈದರಾಬಾದ್, ಮಾರ್ಚ್ 16: ನಿರೀಕ್ಷೆಯಂತೆ ಎನ್ ಡಿಎ ಮೈತ್ರಿಕೂಟದಿಂದ ಟಿಡಿಪಿ(ತೆಲಗು ದೇಶಂ ಪಕ್ಷ) ಹೊರಗಡಿಯಿಟ್ಟಿದೆ. ಹಲವು ದಿನಗಳ ಹಗ್ಗಜಗ್ಗಾಟಕ್ಕೆ ಈ ಮೂಲಕ ಅಂತ್ಯ ಸಿಕ್ಕಂತಾಗಿದೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ನೆಪವನ್ನಿಟ್ಟುಕೊಂಡು ನರೇಂದ್ರ ಮೊದಿ ನೇತೃತ್ವದ ಸರ್ಕಾರದ ವಿರುದ್ಧ ಹಲವು ದಿನಗಳಿಂದ ಆರೋಪ ನಡೆಸುತ್ತಲೇ ಇದ್ದ ಡಿಡಿಪಿ, ಎನ್ ಡಿಎ(ನ್ಯಾಶ್ನಲ್ ಡೆಮಾಕ್ರೆಟಿಕ್ ಅಲಿಯನ್ಸ್) ಮೀತ್ರಿಕೂಟದಿಂದ ಹೊರಬಂದು, ಮೋದಿ ಸರ್ಕಾರದ ವಿರಿದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದೆ.

   ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯರನ್ನು ಹಲವಾರು ಬಾರಿ ಕೇಳಿದ್ದರೂ ಈ ಕುರಿತು ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

   ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

   ಆದರೆ ನಾಲ್ಕು ವರ್ಷಗಳ ಕಾಲ ಅಧಿಕಾರ ನಡೆಸಿದ ನಂತರ ಆಂಧ್ರಕ್ಕೆ ವಿಶೇಷ ಸ್ಥಾನ ಮಾನ ನೀಡುವ ಕುರಿತು ಮಾತೆತ್ತಿದ ಚಂದ್ರಬಾಬು ನಾಯ್ಡು ಅವರ ಬಗ್ಗೆಯೂ ಕೆಲವರು ಟೀಕೆ ಮಾಡುತ್ತಿದ್ದಾರೆ. ಇಷ್ಟು ದಿನ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಟಿಡಿಪಿ, ಎನ್ ಡಿಎ ದೋಸ್ತಿ ಮುರಿದಿರುವುದು ದೇಶದ ರಾಜಕೀಯದಲ್ಲಿ ತಲ್ಲಣ ಮೂಡಿಸಿದೆ. ಈ ಕುರಿತು ಟ್ವಿಟ್ಟಿಗರು ನೀಡಿದ ಪ್ರತಿಕ್ರಿಯೆ ಇಲ್ಲಿದೆ.

   ಎನ್ ಡಿಎ ಮೈತ್ರಿಕೂಟಕ್ಕೆ ಟಿಡಿಪಿ ವಿಚ್ಛೇದನ, ಸಿಡಿದೆದ್ದ ಚಂದ್ರಬಾಬು ನಾಯ್ಡು

   ರಾಜಕೀಯ ಅವಕಾಶವಾದ

   ಟಿಡಿಪಿ ಹೀಗೆ ಮೋಸ ಮಾಡುತ್ತಿರುವುದು ಇದೇ ಮೊದಲಲ್ಲ. ಎನ್ ಡಿಎ-1, ಅಟಲ್ ಜೀ ಸರ್ಕಾರಕ್ಕೂ ಚಂದ್ರಬಾಬು ನಾಯ್ಡು ಹೀಗೇ ಮೋಸ ಮಾಡಿದ್ದರು. ಈಗ ನರೇಮದ್ರ ಮೋದಿಯವರಿಗೆ ಮೋದ ಮಾಡಲು ಅವರು ವೈ ಎಸ್ ಜಗನ್ ಜೊತೆ ಕೈಜೋಡಿಸಿದ್ದಾರೆ.

   ಭ್ರಷ್ಟಾಚಾರ ಮತ್ತು ರಾಜಕೀಯ ಅವಕಾಶವಾಕ್ಕಾಗಿ ಅವರಿಂದು ಆಂಧ್ರಪ್ರದೇಶಕ್ಕೆ ದ್ರೋಹ ಬಗೆದಿದ್ದಾರೆ. ಅಧಿಕಾರದ ದುರಾಸೆಗೆ ಜನಾದೇಶವನ್ನು ಹೇಗೆ ಹೈಜಾಕ್ ಮಾಡಲಾಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ವಿನೀತ್ ಎಂಬುವವರು ಟ್ವೀಟ್ ಮಾಡಿದ್ದಾರೆ.

   ಡಿಎಂಕೆ ಗೂ ಟಿಡಿಪಿಗೂ ವ್ಯತ್ಯಾಸವಿಲ್ಲದ

   ಟಿಡಿಪಿ ಎಂದರೆ ಮತ್ತೊಂದು ಡಿಎಂಕೆ ಇದ್ದ ಹಾಗೆ. ಅದಕ್ಕಿಂತ ಅವಕಾಶವಾದಿ ಬೇರೆ ಇಲ್ಲ. ಕಳೆದ ನಾಲ್ಕು ವರ್ಷದಿಂದ ಅಧಿಕಾರವನ್ನು ಚೆನ್ನಾಗಿ ಅನುಭವಿಸಿದ್ದಾರೆ. ಈಗ ಭೂಮಿಯನ್ನೇ ಆಳುತ್ತೇವೆ ಎಂಬ ಅಹಂಕಾರದಲ್ಲಿ ಮೈತ್ರಿ ಕಡಿದುಕೊಂಡಿದ್ದಾರೆ. ಇದು ಹೆತ್ತ ತಾಯಿಯನ್ನೇ ಕೊಂದಂತೆ. ಚಂದ್ರಬಾಬು ನಾಯ್ಡು ಅವರು ಕರುಣಾನಿಧಿಯಂತೆ ಈ ರೀತಿಯ ಮೋಸವನ್ನು ಹಲವು ಬಾರಿ ಮಾಡಿದ್ದಾರೆ ಎಂದು ದೂರಿದ್ದಾರೆ ವಿವೇಕ್ ಕೆ. ಎಂಬುವವರು.

   ನಾವು ಚಂದ್ರಬಾಬು ನಾಯ್ಡು ಅವರೊಂದಿಗಿದ್ದೇವೆ!

   ಬಿಜೆಪಿ ಆಂಧ್ರಪ್ರದೇಶಕ್ಕೆ ಮೋಸ ಮಾಡಿದೆ. ಮೋದಿ ಮತ್ತು ಶಾ ಸೇರಿಕೊಂಡು ಆಂಧ್ರಪ್ರದೇಶ ಮತ್ತು ಚಂದ್ರಬಾಬು ನಾಯ್ಡು ಅವರ ವಿಶ್ವಾಸ ಕಳೆದುಕೊಂಡಿದ್ದಾರೆ. ನಾವು ಆಂಧ್ರಪ್ರದೇಶದ ಜನರೆಲ್ಲ ಚಂದ್ರಬಾಬು ನಾಯ್ಡು ಅವರೊಂದಿಗಿದ್ದೇವೆ. ಕರ್ನಾಟಕ ಸೇರಿದಂತೆ ಇನ್ನು ಕೆಲವು ತಿಂಗಳುಗಳಲ್ಲಿ ನಡೆಯಲಿರುವ ಎಲ್ಲ ಚುನಾವಣೆಗಳಲ್ಲೂ ನಾವು ಬಿಜೆಪಿಗೆ ಪಾಠ ಕಲಿಸುತ್ತೇವೆ ಎಂದಿದ್ದಾರೆ ನರೇಶ್ ಪಠಾಕುಮಾರಿ.

   ಬಿಜೆಪಿಗೆ ಬಹುದೊಡ್ಡ ಹಿನ್ನಡೆ

   ನಾನು ಬಿಜೆಪಿಯನ್ನು ಇಷ್ಟಪಡುತ್ತೇನೆ. ಆದರೂ ಎನ್ ಡಿಎಯಿಂದ ಟಿಡಿಪಿ ಹೊರಬಂದಿದ್ದು, ಬಿಜೆಪಿಗೆ ಬಹುದೊಡ್ಡ ಹಿನ್ನಡೆ. ಚಂದ್ರಬಾಬು ನಾಯ್ಡು ಒಬ್ಬ ಚತುರ ರಾಜಕಾರಣಿ ಎಂಬುದನ್ನು ಮರೆಯಬಾರದು. ಅಭಿವರದ್ಧಿಯ ವಿಷಯ ಬಂದಾಗಲೂ ಹಲವು ವಿಷಯಗಳಲ್ಲಿ ಅವರು ಓದಿಯವರನ್ನೂ ಮೀರಿಸಿದ್ದಾರೆ. ಈ ಕುರಿತು ಬಿಜೆಪಿ ಗಂಭೀರವಾಗಿ ಚಿಂತಿಸದಿದ್ದಲ್ಲಿ ದಕ್ಷಿಣ ಭಾರತದಲ್ಲಿ ಬಹುದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ. ವಿಶೇಷ ಸ್ಥಾನಮಾನ ಕೊಟ್ಟು ಬಿಡಿ, ಆಗ ಸಮಸ್ಯೆಯೇ ಇರುವುದಿಲ್ಲ ಎಂದಿದ್ದಾರೆ ಸಾಯಿ ಭಾರದ್ವಾಜ್.

   ಮತಕ್ಕಾಗಿ ಏನೆಲ್ಲ ಹರಸಾಹಸ!

   ಆಂಧ್ರಪ್ರದೇಶ ಹೇಗೆ ವಿಶೇಷ ಸ್ಥಾನಮಾನ ಪಡೆಯುವುದಕ್ಕೆ ಸಾಧ್ಯ ಎಂದು ಚಂದ್ರಬಾಬು ನಾಯ್ಡು ಅವರು ವಿವರಿಸಲಿ. ಸಂವಿಧಾನದ ಪ್ರಕಾರ ಅದು ಸಾಧ್ಯವಿಲ್ಲ. ಇವೆಲ್ಲವೂ ಕೆಲವು ಮತದಾರರನ್ನು ಸೆಳೆಯುವ ತಂತ್ರವಷ್ಟೆ. ವಿಶೇಷ ಸ್ಥಾನಮಾನದ ಅರ್ಥ ತಿಳಿಯದವರು ಇದನ್ನು ಸರ್ಕಾರದ ಸಾಧನೆ ಎಂದುಕೊಳ್ಳುತ್ತಾರೆ ಎಂದು ಅನೂಪ್ ಎಂಬುವವರು ಟ್ವೀಟ್ ಮಾಡಿದ್ದಾರೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Telugu Desam Party exits from BJP-led National Democratic Alliance. TDP national president and Andhra Pradesh Chief Minister N Chandrababu Naidu mooted the idea of moving a no-confidence motion against the Narendra Modi government. Here are twitter statements.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more