ಕರಾಟೆ ಉಡುಪು ಧರಿಸಿ ಬಂದ ಮೆಲಾನಿಯಾ ಟ್ರಂಪ್!: ಟ್ವಿಟ್ಟರ್‌ನಲ್ಲಿ ತಮಾಷೆ

ನವದೆಹಲಿ, ಫೆಬ್ರವರಿ 25: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಅವರ ಪತ್ನಿ ಮೆಲಾನಿಯಾ, ಮಗಳು ಇವಾಂಕ ಟ್ರಂಪ್ ಮತ್ತು ಅಳಿಯ ಜಾರೆಡ್ ಕುಶ್ನರ್ ಎರಡು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಬಂದಿದ್ದಾರೆ.

ಸೋಮವಾರ ಟ್ರಂಪ್ ಕುಟುಂಬ ಆಗಮಿಸಿದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರ ನಡೆ ನುಡಿಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದರೂ, ಟ್ರಂಪ್ ಪತ್ನಿ ಮೆಲಾನಿಯಾ ಕೂಡ ಗಮನ ಸೆಳೆದಿದ್ದರು. ಕಾರಣ ಅವರ ಉಡುಪು. ಬೆಳಿಗ್ಗೆ ವಿಮಾನದಿಂದ ಬಂದಿಳಿದ ಸಂದರ್ಭದಿಂದ ಸಂಜೆ ದೆಹಲಿಗೆ ತೆರಳುವವರೆಗೂ ಮೆಲಾನಿಯಾ ಒಂದೇ ದಿರಿಸಿನಲ್ಲಿ ಕಾಣಿಸಿಕೊಂಡಿದ್ದರು.

ಅಮೆರಿಕದ ಪ್ರಥಮ ಮಹಿಳೆಯಾಗಿದ್ದರೂ ವಿದೇಶಕ್ಕೆ ಬಂದಾಗ ಪದೇ ಪದೇ ಉಡುಪು ಬದಲಿಸುವ ಅಭ್ಯಾಸ ಅವರಿಗಿಲ್ಲ ಎಂದು ಅನೇಕರು ಮೆಚ್ಚುಗೆಯ ಮಾತನ್ನಾಡಿದ್ದಾರೆ. ಆದರೆ ಅದಕ್ಕಿಂತಲೂ ಹೆಚ್ಚು ಚರ್ಚೆಗೆ ಒಳಗಾಗಿರುವುದು ಅವರ ಉಡುಪಿನ ವಿನ್ಯಾಸ. ಇದು ಯಾವ ಮಾದರಿಯ ಡ್ರೆಸ್ ಎಂದು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಭಾರತದ ಪುರುಷರ ಬಗ್ಗೆ ಗೊತ್ತಿರಬೇಕು

ಮೆಲಾನಿಯಾ ಟ್ರಂಪ್ ಕರಾಟೆ ಉಡುಪು ಧರಿಸಿ ಭಾರತಕ್ಕೆ ಬಂದಿದ್ದಾರೆ. ಕರಾಟೆ ಉಡುಗೆ ತೊಟ್ಟಿರುವುದು ಮೆಲಾನಿಯಾ ಬುದ್ಧಿವಂತಿಕೆಯನ್ನು ತೋರಿಸುತ್ತದೆ. ಮೆಲಾನಿಯಾ ಬಹುಶಃ ಭಾರತದ ಪುಂಡ ಪುರುಷರ ಬಗ್ಗೆ ಕೇಳಿರಬೇಕು. ಹಾಗಾಗಿ ಸ್ವಯಂ ರಕ್ಷಣೆಗಾಗಿ ಸಿದ್ಧರಾಗಿ ಬಂದಿದ್ದಾರೆ ಎಂದು ವೀಣಾ ವೇಣುಗೋಪಾಲ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಸರೋಜಿನಿ ಮಾರುಕಟ್ಟೆಯಲ್ಲಿ ಸಿಗಲಿದೆ

ಮೆಲಾನಿಯಾ ಚಿತ್ರವನ್ನು ಹಂಚಿಕೊಂಡಿರುವ ಅಫ್ಸರ್ ಎಂಬುವವರು, ಮುಂದಿನ ವಾರದ ವೇಳೆಗೆ ಮೆಲಾನಿಯಾ ಅವರು ಧರಿಸಿದ್ದ ಉಡುಪಿನ ಮಾದರಿ ಸರೋಜಿನಿ ಮಾರುಕಟ್ಟೆಯಲ್ಲಿ ಸಿಗಬೇಕಿದೆ ಎಂದಿದ್ದಾರೆ. ದೆಹಲಿಯ ಸರೋಜಿನಿ ಮಾರುಕಟ್ಟೆ ಬಹಳ ಪ್ರಸಿದ್ಧ ಮಾರುಕಟ್ಟೆಯಾಗಿದ್ದು, ದೇಶ ವಿದೇಶಗಳ ಜನಪ್ರಿಯ ಹಾಗೂ ಹೊಸ ವಿನ್ಯಾಸದ ಉಡುಪುಗಳನ್ನು ನಕಲು ಮಾಡಿದ ಉಡುಗೆಗಳು ಇಲ್ಲಿ ಕಡಿಮೆ ಬೆಲೆಗೆ ಲಭ್ಯವಾಗುತ್ತದೆ.

ಕರಾಟೆ ಕಿಡ್ ಮತ್ತು ಕಿಡ್!

ಮೆಲಾನಿಯಾ ನೋಡಲು 'ಕರಾಟೆ ಕಿಡ್‌'ನಂತೆ (ಹಾಲಿವುಡ್‌ನ ಜನಪ್ರಿಯ ಸಿನಿಮಾ) ಕಾಣಿಸುತ್ತಾರೆ. ಅವರ ಪಕ್ಕದಲ್ಲಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೇವಲ ಕಿಡ್‌ನಂತೆ (ಮಗು) ಕಾಣಿಸುತ್ತಾರೆ ಎಂದು ಎಸ್. ಸಂಧು ಎಂಬುವವರು ಛೇಡಿಸಿದ್ದಾರೆ. ಮೆಲಾನಿಯಾ ಡ್ರೆಸ್ ಸಕತ್ ಸ್ಟೈಲಿಶ್ ಆಗಿದೆ ಎಂದು ಕೆಲವರು ಹೊಗಳಿದ್ದಾರೆ.

ಗ್ರೀನ್ ಬೆಲ್ಟ್ ಗೆದ್ದ ಮೆಲಾನಿಯಾ

ಮೆಲಾನಿಯಾ ಕರಾಟೆಗೆ ಸಿದ್ಧವಾಗಿರುವಂತೆ ಕಾಣಿಸುತ್ತಿದೆ ಎಂದು ಕೆಲವರು ಹೇಳಿದ್ದರೆ, ವಾವ್! ಮೆಲಾನಿಯಾ ಕರಾಟೆಯಲ್ಲಿ ಗ್ರೀನ್ ಬೆಲ್ಟ್ ಗೆದ್ದಿದ್ದಾರೆ. ಮೊದಲ ಮಹಿಳೆಗೆ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ. ಮೆಲಾನಿಯಾರ ಬಿಳಿ ದಿರಿಸು ಭಾರತದ ಶಾಂತಿ ನೀತಿಯನ್ನು ಸಂಕೇತಿಸುತ್ತಿದೆ ಎಂದಿದ್ದಾರೆ.

ಟಿಡಿಪಿಗೆ ಟ್ರಂಪ್ ಬೆಂಬಲ!

ಮೆಲಾನಿಯಾ ದಿರಿಸು ಮಾತ್ರವಲ್ಲ, ಟ್ರಂಪ್ ತೊಟ್ಟಿದ್ದ ಟೈ ಕೂಡ ನೆಟ್ಟಿಗರ ಚರ್ಚೆಗೆ ಒಳಗಾಗಿದೆ. ಅವರ ಹಳದಿ ಬಣ್ಣದ ಟೈ ತಮಾಷೆಯ ವಸ್ತುವಾಗಿದೆ. 'ಟ್ರಂಪ್ ಟಿಡಿಪಿಯನ್ನು ಬೆಂಬಲಿಸುತ್ತಿದ್ದಾರೆ. ಏಕೆಂದರೆ ಅವರು ಹಳದಿ ಟೈ ಧರಿಸಿದ್ದಾರೆ'- ಚಂದ್ರಬಾಬು ನಾಯ್ಡು ಎಂದು ಶ್ರೀಕಾಂತ್ ಎಂಬುವವರು ಕಿಚಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+