ರಾಹುಲ್ ಹುಟ್ಟುಹಬ್ಬ ಟ್ವಿಟ್ಟರ್ ನಲ್ಲಿ ಪಪ್ಪುದಿವಸ್
ನವದೆಹಲಿ, ಜೂ.19: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ 45ನೇ ವಸಂತಕ್ಕೆ ಕಾಲಿರಿಸಿದ್ದಾರೆ. ವಿದೇಶ ಬಿಟ್ಟು ಸ್ವದೇಶದಲ್ಲೇ ಅಭಿಮಾನಿಗಳ ಜೊತೆ ಸಂಭ್ರಮಾಚರಣೆಯಲ್ಲಿರುವ ಕಾಂಗ್ರೆಸ್ ಯುವರಾಜನಿಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ವಿಶ್ ಮಾಡಿದ್ದಾರೆ. ಅದರೆ, ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ವಿಶ್ವ ಪಪ್ಪುದಿವಸ್ ಟ್ರೆಂಡಿಂಗ್ ನಲ್ಲಿದೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಾರ್ದಿಕ ಶುಭಾಶಯ ಕೋರಿ, ಕಾಂಗ್ರೆಸ್ ನಾಯಕ ರಾಹುಲ್ ಅವರಿಗೆ ದೇವರು ಆಯುರಾರೋಗ್ಯಗಳನ್ನು ನೀಡಿ ಕಾಪಾಡಲಿ, ಅವರ ಈ ಹುಟ್ಟುಹಬ್ಬದಂದು ಅವರಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.
ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕರ್ತರು ಸಂತಸದಿಂದ ತಮ್ಮ ನಾಯಕ ಜನ್ಮದಿನ ಆಚರಣೆಯಲ್ಲಿ ತೊಡಗಿದ್ದಾರೆ. 45 ಕೆಜಿ ತೂಗುವ ಕೇಕ್ ಕತ್ತರಿಸಿದ್ದಾರೆ. ಪಟಾಕಿ ಸಿಡಿಸಿದ್ದಾರೆ, ಸಿಹಿ ಹಂಚಿ ಸಂಭ್ರಮದಿಂದ ಕುಣಿದಾಡಿದ್ದಾರೆ. ರಾಹುಲ್ ಗಾಂಧಿ ಅವರ ಹುಟ್ಟುಹಬ್ಬದ ದಿನ ಪಪ್ಪು ದಿವಸ್ ಆಚರಣೆ ಮಾಡಿ ಹಾಸ್ಯದ ಟ್ವೀಟ್ ಗಳನ್ನು ಹರಿಸಲಾಗಿದೆ.

ರಾಹುಲ್‌ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ವಿಶ್
ಪ್ರಧಾನಿ ನರೇಂದ್ರ ಮೋದಿ ಅವರ ಶುಭಾಶಯಕ್ಕೆ ರಾಹುಲ್ ಗಾಂಧಿ ಅವರ ಕಚೇರಿಯಿಂದ ಥ್ಯಾಂಕ್ಸ್ ಎಂಬ ಪ್ರತಿಕ್ರಿಯೆಬಂದಿದೆ.
|
ಉಪಾಧ್ಯಕ್ಷ ರಾಹುಲ್ ಗೆ ಶುಭವಾಗಲಿ
ರಾಹುಲ್ ಅವರಿಗೆ ದೇವರು ಆಯುರಾರೋಗ್ಯಗಳನ್ನು ನೀಡಿ ಕಾಪಾಡಲಿ, ಅವರ ಈ ಹುಟ್ಟುಹಬ್ಬದಂದು ಅವರಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.
|
ಬ್ಯಾಂಕಾಕ್ ಹೋಗುವುದು ತಪ್ಪಿಸಿ
ಬ್ಯಾಂಕಾಕ್ ಹೋಗುವುದು ತಪ್ಪಿಸಿ ಮೊದಲಿಗೆ ಒಂದು ಮದುವೆ ಮಾಡಿಸಿ
|
ಭಾರತದ ಭವಿಷ್ಯದ ತಂದೆ ಯಾರು ಗೊತ್ತಾ?
ಭಾರತದ ಭವಿಷ್ಯದ ತಂದೆ ಯಾರು ಗೊತ್ತಾ? ಟಿಟ್ಟರ್ ನಲ್ಲಿ ಬಹಿರಂಗ
|
ಮುಂಬೈ ಮಳೆಗೂ ಪಪ್ಪುನೇ ಕಾರಣ
ಮುಂಬೈ ಮಳೆಗೂ ಪಪ್ಪುನೇ ಕಾರಣ, ದೇವರು ಕಣ್ಣೀರು ಸುರಿಸುತ್ತಿದ್ದಾನೆ
|
ಮೋದಿ ಮಾತು ಕೇಳಿದ ಪಪ್ಪು
ಕೊನೆಗೂ ಮೋದಿ ಮಾತು ಕೇಳಿದ ಪಪ್ಪು, ಮೇಕ್ ಇನ್ ಇಂಡಿಯಾ ಯೋಜನೆಗೆ ಬೆಂಬಲ ನೀಡಲು ದೇಶದಲ್ಲೇ ಉಳಿದಿದ್ದಾರೆ.
|
ಛೋಟಾ ಭೀಮ್ ಬಿಟ್ಟುಬಿಡು ಮಗ
ಛೋಟಾ ಭೀಮ್ ಬಿಟ್ಟುಬಿಡು ಮಗ, ಛೋಟಾ ಸೊಸೆ ಮನೆಗೆ ಕರೆದುಕೊಂಡು ಬಾ-ಸೋನಿಯಾ
|
ಫ್ಲಿಪ್ ಕಾರ್ಟ್ ನಲ್ಲಿ ವಿಶೇಷ ರಿಯಾಯಿತಿ
ಫ್ಲಿಪ್ ಕಾರ್ಟ್ ನಲ್ಲಿ ಬೇಬಿ ಪ್ರಾಡೆಕ್ಟ್ ಮೇಲೆ ವಿಶೇಷ ರಿಯಾಯಿತಿ ಇದೆಯಂತೆ ಎಂದು ಜೋಕ್












Click it and Unblock the Notifications