ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ ಬ್ಲೂ ಟಿಕ್‌ ಮಾಸಿಕ ಚಂದಾದಾರಿಕೆ ಆರಂಭ; ಭಾರತದಲ್ಲಿ ಯಾವಾಗ?

|
Google Oneindia Kannada News

ಟ್ವಿಟ್ಟರ್ ಬಳಕೆಯ ಬ್ಲೂ ಟಿಕ್‌ನೊಂದಿಗೆ ಮಾಸಿಕ ಚಂದಾದಾರಿಕೆ ಯೋಜನೆಯನ್ನು ಪ್ರಾರಂಭಿಸಿದೆ. ಭಾರತದ ಟ್ವಿಟ್ಟರ್ ಬಳಕೆದಾರರು ಕೂಡ ಪ್ರತಿ ತಿಂಗಳಿಗೆ 660 ರೂ. ಪಾವತಿಸುವುದು ಕಡ್ಡಾಯವಾಗಿದೆ. ಅಂದರೆ ಯುಎಸ್‌ $8 ಡಾಲರ್ ಹಣ ಪಾವತಿಸಿದರೆ ಮಾತ್ರ ಟ್ವಿಟ್ಟರ್ ಬಳಕೆ ಲಭ್ಯ ಎಂದು ಟ್ವಿಟ್ಟರ್ ಹೇಳಿದೆ. ಈ ಮಾಸಿಕ ಬ್ಲೂ ಟಿಕ್‌ ಚಂದಾದಾರಿಕೆ ಯೋಜನೆಯು ಈಗಾಗಲೇ ಯುಎಸ್, ಕೆನಡ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಬ್ರಿಟನ್‌ ಸೇರಿದಂತೆ ಇದೀಗ ಭಾರತದಲ್ಲೂ ಪ್ರಾರಂಭವಾಗಿದೆ. ಎಲಾನ್ ಮಸ್ಕ್ ಸ್ವತಃ ಭಾರತದಲ್ಲಿ ಈ ಸೇವೆಯ ಬಗ್ಗೆ ಟ್ವೀಟ್‌ಗೆ ಉತ್ತರಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಹೌದು, ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿಸಿದಾಗಿನಿಂದ ಕಂಪನಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಿರಂತರವಾಗಿ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಟ್ವಿಟ್ಟರ್ ಉದ್ಯೋಗಿಗಳ ವಜಾಗೊಳಿಸಿದ ನಂತರ ಅವರು ಟ್ವಿಟ್ಟರ್ ಬ್ಲೂ ಟಿಕ್ ಮಾಸಿಕ ಚಂದಾದಾರಿಕೆ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಮಾಸಿಕ ಚಂದಾದಾರಿಕೆ ಯೋಜನೆಯನ್ನು iOS ಬಳಕೆದಾರರಿಗೆ ಮಾತ್ರ ಪ್ರಾರಂಭಿಸಲಾಗಿದೆ. ಮತ್ತೊಂದೆಡೆ, ಟ್ವಿಟ್ಟರ್ ಸಹ ಸಂಸ್ಥಾಪಕ ಜಾಕ್ ಡಾರ್ಸೆ ಟ್ವೀಟ್ ಮಾಡಿ ಉದ್ಯೋಗಿಗಳಿಗೆ ಕ್ಷಮೆಯಾಚಿಸಿದ್ದಾರೆ.

ಟ್ವಿಟರ್ ಸಹ-ಸಂಸ್ಥಾಪಕ ಜಾಕ್ ಡೋರ್ಸೆ ಶನಿವಾರ ಟ್ವೀಟ್ ಮಾಡಿದ್ದಾರೆ, "ಬಹಳಷ್ಟು ಜನರು ನನ್ನ ಮೇಲೆ ಕೋಪಗೊಂಡಿದ್ದಾರೆಂದು ನಾನು ಅರಿತುಕೊಂಡಿದ್ದೇನೆ. ಎಲ್ಲರೂ ಏಕೆ ಈ ಸ್ಥಾನದಲ್ಲಿದ್ದಾರೆ ಎಂಬುದಕ್ಕೆ ನಾನು ಜವಾಬ್ದಾರನಾಗಿರುತ್ತೇನೆ. ನಾನು ಕಂಪನಿಯನ್ನು ಇಷ್ಟು ವೇಗವಾಗಿ ಬೆಳೆಸಿದೆ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನಾನು ಕೃತಜ್ಞನಾಗಿದ್ದೇನೆ " ಎಂದು ಹೇಳಿದರು. ಇದರೊಂದಿಗೆ, ಎಲಾನ್ ಮಸ್ಕ್ ಸ್ವತಃ ಟ್ವೀಟ್‌ಗೆ ಉತ್ತರಿಸಿದ್ದಾರೆ ಭಾರತದಲ್ಲಿ ಬ್ಲೂ ಟಿಕ್‌ ಈ ಸೇವೆ ಯಾವಾಗ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.

Twitter Blue tick will be launched in India in this month, reveals Elon Musk

ಭಾರತದಲ್ಲಿ ಮಾಸಿಕ ಚಂದಾದಾರಿಕೆ ಸೇವೆ ಯಾವಾಗ ಪ್ರಾರಂಭ?

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟ್ಟರ್‌ನಲ್ಲಿ ಪರಿಶೀಲಿಸಿದ ಬಳಕೆದಾರ (@Cricprabhu) ಎಂಬುವರು ಎಲಾನ್ ಮಸ್ಕ್ ಅವರನ್ನು "ಭಾರತದಲ್ಲಿ ಟ್ವಿಟ್ಟರ್ ಬ್ಲೂ ಯಾವಾಗ ಪ್ರಾರಂಭಿಸುತ್ತದೆ?" ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಎಲಾನ್ ಮಸ್ಕ್, "ಆಶಾದಾಯಕವಾಗಿ ಮುಂದಿನ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ" ಅಂದರೆ ಶೀಘ್ರದಲ್ಲೇ ಬ್ಲೂ ಟಿಕ್ ಮಾಸಿಕ ಚಂದಾದಾರಿಕೆ ಯೋಜನೆಯು ಭಾರತದಲ್ಲಿಯೂ ಪ್ರಾರಂಭವಾಗಲಿದೆ ಎಂದು ಹೇಳಿದರು. ಭಾರತಕ್ಕೆ ಯಾವ ಬೆಲೆಯನ್ನು ನಿಗದಿಪಡಿಸಲಾಗಿದೆ ಮತ್ತು ಜಿಎಸ್‌ಟಿ ಅನ್ವಯಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕಾಗಿದೆ.

ಬ್ಲೂ ಟಿಕ್ ಮಾಸಿಕ ಚಂದಾದಾರಿಕೆ ಯೋಜನೆ 5 ದೇಶಗಳಲ್ಲಿ ಪ್ರಾರಂಭ

ಟ್ವಿಟ್ಟರ್ ಬ್ಲೂ ಟಿಕ್ ಮಾಸಿಕ ಚಂದಾದಾರಿಕೆ ಯೋಜನೆಯು ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಬ್ರಿಟನ್‌ನಲ್ಲಿ ಪ್ರಾರಂಭವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಆಯ್ಕೆಯನ್ನು ಐಒಎಸ್ ಬಳಕೆದಾರರಿಗೆ ಮಾತ್ರ ಪ್ರಾರಂಭಿಸಲಾಗಿದೆ. ಬ್ಲೂ ಟಿಕ್‌ನೊಂದಿಗೆ ಮಾಸಿಕ ಚಂದಾದಾರಿಕೆ ಯೋಜನೆಯನ್ನು ತೆಗೆದುಕೊಳ್ಳುವ ಮೂಲಕ ಟ್ವಿಟ್ಟರ್ ಬಳಕೆದಾರರು ಅನೇಕ ಹೊಸ ಮತ್ತು ಹೆಚ್ಚಿನ ವೈಶಿಷ್ಟ್ಯಗಳ ಪ್ರಯೋಜನವನ್ನು ಪಡೆಯುತ್ತಾರೆ ಎಂದು ವರದಿಯಾಗಿದೆ.

English summary
Twitter blue is expected to roll out in India in less than a month, Elon Musk has confirmed on 6 November.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X