ನೂತನ ಸಾಲಿಟರ್ ಜನರಲ್ ಆಗಿ ತುಷಾರ್ ಮೆಹ್ತಾ ನೇಮಕ

ನವದೆಹಲಿ, ಅಕ್ಟೋಬರ್ 10 : ಹಿರಿಯ ವಕೀಲ ತುಷಾರ್ ಮೆಹ್ತಾ ಅವರನ್ನು ಸಾಲಿಟರ್ ಜನರಲ್ ಆಗಿ ನೇಮಿಸಲಾಗಿದೆ. ಹೆಚ್ಚುವರಿ ಸಾಲಿಟರ್ ಜನರಲ್ ಆಗಿ ಅವರು ಕಾರ್ಯ ನಿರ್ವಹಣೆ ಮಾಡುತ್ತಿದ್ದರು.

ಬುಧವಾರ ಕೇಂದ್ರ ಸರ್ಕಾರ ತುಷಾರ್ ಮೆಹ್ತಾ ಅವರನ್ನು ಸಾಲಿಟರ್ ಜನರಲ್ ಆಗಿ ನೇಮಕ ಮಾಡಿದೆ. ಡಿಸೆಂಬರ್ ತಿಂಗಳಿನಲ್ಲಿ ರಂಜತ್ ಕುಮಾರ್ ರಾಜೀನಾಮೆ ಬಳಿಕ ಸಾಲಿಟರ್ ಜನರಲ್ ಹುದ್ದೆ ತೆರವಾಗಿತ್ತು.

2014ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ತುಷಾರ್ ಮೆಹ್ತಾ ಅವರನ್ನು ಹೆಚ್ಚುವರಿ ಸಾಲಿಟರಿ ಜನರಲ್ ಆಗಿ ನೇಮಕ ಮಾಡಲಾಗಿತ್ತು. ಹಲವು ಮಹತ್ವದ ಪ್ರಕರಣದಲ್ಲಿ ಅವರು ಸರ್ಕಾರದ ಪರವಾಗಿ ವಾದ ಮಂಡನೆ ಮಾಡಿದ್ದಾರೆ.

Tushar Mehta

ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಲಿಟರ್ ಜನರಲ್ 3ನೇ ಪ್ರಮುಖ ಹುದ್ದೆಯಾಗಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿ, ಅರ್ಟಾನಿ ಜನರಲ್ ಹುದ್ದೆಯ ಬಳಿಕದ ಹುದ್ದೆ ಸಾಲಿಟರ್ ಜನರಲ್ ಆಗಿದೆ.

ತುಷಾರ್ ಮೆಹ್ತಾ ಅವರು ಜೂನ್ 30, 2020ರ ತನಕ ಸಾಲಿಟರ್ ಜನರಲ್ ಆಗಿ ಮುಂದುವರೆಯಲಿದ್ದಾರೆ. ನಂತರವೂ ಅವರನ್ನು ಮುಂದುವರೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ.

ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಸಾಮಾಜಿಕ ಕಾರ್ಯಕರ್ತರ ಬಂಧನ, ಜಮ್ಮು ಕಾಶ್ಮೀರದ 370ನೇ ವಿಶೇಷ ಸ್ಥಾನಮಾನ ಸೇರಿದಂತೆ ಹಲವು ಪ್ರಕರಣದಲ್ಲಿ ತುಷಾರ್ ಮೆಹ್ತಾ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+