ಹಬ್ಬಕ್ಕೆ ಕಡಿವಾಣವಲ್ಲ, ಕಳಪೆ ಆಹಾರಕ್ಕೆ ಕಡಿವಾಣ: ತುಕಾರಾಂ ಮುಂಢೆ ಖಡಕ್‌ ಕ್ರಮ

ಮಹಾರಾಷ್ಟ್ರದಲ್ಲಿ ಪಬ್ಲಿಕ್‌ ಫುಡ್‌ ಸೇಫ್ಟಿ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಜನಪ್ರಿಯರಾಗುತ್ತಿದ್ದಾರೆ ಅಲ್ಲಿನ ಆಹಾರ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತ ತುಕಾರಾಂ ಮುಂಢೆ. ಈಗಾಗಲೇ ಅವರು ನೂರಾರು ಕಡೆ ರೈಡ್‌ ಮಾಡಿ ಕಳಪೆ ಆಹಾರ ಜಪ್ತಿ ಮಾಡಿದ್ದಾರೆ. ಕಲಬೆರಕೆ ಮಾಡುವವರನ್ನು ಜೈಲಿಗಟ್ಟಿದ್ದಾರೆ. ಸಾರ್ವಜನಿಕವಾಗಿ ಎಲ್ಲೆಲ್ಲ ಆಹಾರ ಪೂರೈಕೆ ಇದೆಯೋ ಅಲ್ಲೆಲ್ಲಾ ಕ್ಲೀನ್‌, ಶುದ್ಧತೆ ಇರಬೇಕು ಎಂದು ಆಕ್ಷನ್‌ ತಗೋತಾ ಇದಾರೆ. ಹೋಟೆಲ್‌ಗಳನ್ನೂ ಬಿಟ್ಟಿಲ್ಲ. ಇದರಿಂದಾಗಿ ತುಂಬಾ ಮಂದಿಗೆ ಅಪ್ರಿಯ ಕೂಡ ಆಗಿದಾರೆ.

ಈಗ ಹೊಸದೊಂದು ಕಠಿಣ ಕ್ರಮ ತಗೋತಿದಾರೆ. ಅದು ಫೆಸ್ಟಿವಲ್ ಎನ್‌ಫೋರ್ಸ್‌ಮೆಂಟ್ ಕ್ಯಾಲೆಂಡರ್‌. ಮಹಾರಾಷ್ಟ್ರ, ಮುಂಬಯಿಯಲ್ಲಿ ಗಣೇಶ ಚತುರ್ಥಿ, ಗಣೇಶೋತ್ಸವ ಸಿಕ್ಕಾಪಟ್ಟೆ ಫೇಮಸ್‌. ಆ ಸಂದರ್ಭದಲ್ಲಿ ಪ್ರಸಾದ ವಿತರಣೆ ಕೂಡ ಕಾಮನ್‌. ಲಕ್ಷಾಂತರ ಮಂದಿ ಆಹಾರ ಸೇವಿಸುತ್ತಾರೆ. ಆದ್ರೆ ಕ್ಲೀನ್ಲಿನೆಸ್‌ ಕಡಿಮೆ. ಇದೀಗ ಅದನ್ನು ಕಠಿಣ ಪರಿಶೀಲನೆ, ಸ್ವಚ್ಛತೆಯ ಪರೀಕ್ಷೆಗೆ ಒಳಪಡಿಸುವ ಹಿನ್ನೆಲೆಯಲ್ಲಿ ಗಣಪತಿ ಮಂಡಳಗಳು ಕೋರ್ಟಿಗೆ ಹೋಗಿವೆ.

Tukaram Mundhe No Ban on Festivals Only on Unsafe Food Tukaram Mundhe s Strict Food Safety Drive

ಹಬ್ಬ, ಮದುವೆ, ಭಂಡಾರ, ಧಾರ್ಮಿಕ ಕಾರ್ಯಕ್ರಮ ಅಥವಾ ದೊಡ್ಡ ಸಾರ್ವಜನಿಕ ಸಮಾರಂಭ-ಎಲ್ಲಿ ಜನರಿಗೆ ಆಹಾರ ಬಡಿಸಲಾಗುತ್ತದೆಯೋ ಅಲ್ಲಿ ಅದರ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಯಾವುದೇ ರಾಜಿ ಇಲ್ಲ. ಆಹಾರ ಕಲಬೆರಕೆ ಹಾಗೂ ಅಸುರಕ್ಷಿತ ಆಹಾರದ ವಿರುದ್ಧ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಇದರಿಂದ ಅಂಜಿದ ಕೆಲವರು ಕೋರ್ಟಿಗೆ ಹೋಗಿದ್ದಾರೆ. ಕೋರ್ಟ್‌ ಮುಂದೆ ತುಕಾರಾಂ ಮುಂಢೆ ತಮ್ಮ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಈ ಕ್ರಮ ಹಬ್ಬಗಳ ಆಚರಣೆಗೆ ಸಂಬಂಧಿಸಿದ್ದಲ್ಲ. ನಾವು ಹಬ್ಬಗಳನ್ನು ನಿಯಂತ್ರಿಸುತ್ತಿಲ್ಲ; ಹಬ್ಬಗಳಲ್ಲಿ ಬಡಿಸುವ ಆಹಾರವನ್ನು ಸುರಕ್ಷಿತವಾಗಿಡುತ್ತಿದ್ದೇವೆ. ಹಬ್ಬಗಳನ್ನು ಹೇಗೆ ಆಚರಿಸಬೇಕು, ಧಾರ್ಮಿಕ ವಿಧಿವಿಧಾನಗಳನ್ನು ಹೇಗೆ ನಡೆಸಬೇಕು ಅಥವಾ ಯಾವ ಸಂಪ್ರದಾಯಗಳನ್ನು ಅನುಸರಿಸಬೇಕು ಎಂಬುದರಲ್ಲಿ ಇಲಾಖೆಯ ಯಾವುದೇ ಹಸ್ತಕ್ಷೇಪವಿಲ್ಲ. ಅದರ ಗಮನ ಜನರಿಗೆ ನೀಡಲಾಗುವ ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸುವುದರ ಮೇಲಷ್ಟೇ ಎಂದಿದ್ದಾರೆ.

ವರ್ಷಪೂರ್ತಿ ಆಹಾರ ಸುರಕ್ಷತಾ ನಿಗಾ

ಹಬ್ಬಗಳು ಸಮೀಪಿಸಿದಾಗ ಪ್ರತ್ಯೇಕವಾಗಿ ಆಹಾರ ಸುರಕ್ಷತಾ ಸೂಚನೆಗಳನ್ನು ನೀಡುವ ಬದಲು, ಇದೀಗ ವರ್ಷಪೂರ್ತಿ ಅನ್ವಯವಾಗುವ 'ಫೆಸ್ಟಿವಲ್ ಎನ್‌ಫೋರ್ಸ್‌ಮೆಂಟ್ ಕ್ಯಾಲೆಂಡರ್‌' ಅನ್ನು ಜಾರಿಗೆ ತರಲಾಗಿದೆ. ಇದರ ಮೂಲಕ ವಿವಿಧ ಹಬ್ಬಗಳು ಮತ್ತು ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆಹಾರದ ಗುಣಮಟ್ಟದ ಮೇಲೆ ವ್ಯವಸ್ಥಿತವಾಗಿ ನಿಗಾ ವಹಿಸಲಾಗುತ್ತದೆ.

ಅಧಿಕಾರಿಗಳು, ಆಹಾರ ಮಾರಾಟಗಾರರು, ಕ್ಯಾಟರರ್‌ಗಳು, ಆಹಾರ ವ್ಯವಹಾರ ನಿರ್ವಾಹಕರು ಮತ್ತು ಕಾರ್ಯಕ್ರಮ ಆಯೋಜಕರು ತಮ್ಮ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ತಿಳಿದುಕೊಂಡು ಕಾರ್ಯನಿರ್ವಹಿಸುವುದು ಇದರ ಉದ್ದೇಶ. 2011ರಿಂದಲೇ ಆಹಾರ ವ್ಯವಹಾರ ನಡೆಸುವವರಿಗೆ ನೋಂದಣಿ ಮತ್ತು ಪರವಾನಗಿ ಸೇರಿದಂತೆ ಆಹಾರ ಸುರಕ್ಷತಾ ಕಾನೂನುಗಳು ಜಾರಿಯಲ್ಲಿವೆ. ಹೊಸ ಆದೇಶ ಯಾವುದೇ ಹೊಸ ಕಾನೂನು ಅಥವಾ ಹೊಸ ಪರವಾನಗಿ ವ್ಯವಸ್ಥೆಯನ್ನು ಪರಿಚಯಿಸುತ್ತಿಲ್ಲ ಎಂದು ಮುಂಢೆ ಹೇಳಿದ್ದಾರೆ. ಬದಲಾಗಿ, ಈಗಾಗಲೇ ಇರುವ ಕಾನೂನನ್ನು ವರ್ಷಪೂರ್ತಿ ಒಂದೇ ರೀತಿಯಲ್ಲಿ ಅನುಷ್ಠಾನಗೊಳಿಸುವ ವ್ಯವಸ್ಥೆ ರೂಪಿಸಲಾಗಿದೆ.

ಯಾವುದೇ ಹಬ್ಬಕ್ಕೆ ಒಂದೇ ನಿಯಮ

ಹೊಸ ನಿಯಮಗಳು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಹಬ್ಬವನ್ನು ಗುರಿಯಾಗಿಸಿಕೊಂಡಿಲ್ಲ. ಈದ್, ಕ್ರಿಸ್‌ಮಸ್‌, ಹೊಸ ವರ್ಷದ ಕಾರ್ಯಕ್ರಮ, ಗಣೇಶೋತ್ಸವ, ಮದುವೆ ಸಮಾರಂಭ, ಭಂಡಾರ ಸೇರಿದಂತೆ ಎಲ್ಲ ರೀತಿಯ ದೊಡ್ಡ ಕಾರ್ಯಕ್ರಮಗಳಿಗೂ ಒಂದೇ ಆಹಾರ ಸುರಕ್ಷತಾ ಮಾನದಂಡ ಅನ್ವಯವಾಗಲಿದೆ. ಭಂಡಾರ, ಪ್ರಸಾದ ಅಥವಾ ಸಮುದಾಯದ ವತಿಯಿಂದ ಆಹಾರ ವಿತರಿಸುವುದಕ್ಕೂ ನಿಷೇಧವಿಲ್ಲ. ಧಾರ್ಮಿಕ ಆಚರಣೆಗಳು ಮತ್ತು ಸಾಂಸ್ಕೃತಿಕ ಸಂಪ್ರದಾಯಗಳ ಮೇಲೂ ಯಾವುದೇ ನಿರ್ಬಂಧ ಹೇರಲಾಗಿಲ್ಲ. ಅಂದರೆ, ಆಚರಣೆಗೆ ಸ್ವಾತಂತ್ರ್ಯ ಇದೆ; ಆದರೆ ಜನರಿಗೆ ಬಡಿಸುವ ಆಹಾರ ಕಾನೂನುಬದ್ಧವಾಗಿ ಸುರಕ್ಷಿತವಾಗಿರಬೇಕು.

ಆಹಾರ ಕಲಬೆರಕೆಗೆ ಕಠಿಣ ನಿಲುವು

ಕಳೆದ ಕೆಲವು ತಿಂಗಳುಗಳಿಂದ ಆಹಾರ ಕಲಬೆರಕೆ ವಿರುದ್ಧ ಕಾರ್ಯಾಚರಣೆಯನ್ನು ಇಲಾಖೆ ತೀವ್ರಗೊಳಿಸಿದೆ. ತುಕಾರಾಂ ಮುಂಚೂಣಿಯಲ್ಲಿದ್ದಾರೆ. ಹಬ್ಬದ ಸಂದರ್ಭದಲ್ಲಿ ಮಾತ್ರವಲ್ಲದೆ ವರ್ಷಪೂರ್ತಿ ಆಹಾರ ಸುರಕ್ಷತೆಯ ಮೇಲೆ ಗಮನ ಹರಿಸಲು ಮುಂದಾಗಿದೆ.

ದೊಡ್ಡ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರಿಗೆ ಒಂದೇ ಬಾರಿ ಆಹಾರ ಪೂರೈಸುವ ಸಂದರ್ಭಗಳಲ್ಲಿ ಗುಣಮಟ್ಟದ ನಿರ್ಲಕ್ಷ್ಯ ದೊಡ್ಡ ಪ್ರಮಾಣದ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹೀಗಾಗಿ ಆಹಾರ ಪೂರೈಕೆದಾರರು ಮತ್ತು ಕಾರ್ಯಕ್ರಮ ಆಯೋಜಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳುವುದು ಈ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ.

ಆಯುಕ್ತ ತುಕಾರಾಂ ಮುಂಢೆ ಯಾರನ್ನೂ ಬಿಟ್ಟಿಲ್ಲ. ಹಲವು ಕಡೆ ರೈಡ್‌ ಮಾಡಿ ಯುನಿಟ್‌ಗಳನ್ನು ಮುಚ್ಚಿಸಿದ್ದಾರೆ. ಆನ್‌ಲೈನ್‌ ಸ್ಟೋರ್‌ಗಳಿಗೆ ಬೀಗ ಹಾಕಿಸಿದ್ದಾರೆ. ಆಹಾರ ಪ್ರಮೋಟ್‌ ಮಾಡುತ್ತಿದ್ದ ಬಾಲಿವುಡ್‌ ಸ್ಟಾರ್‌ಗಳಿಗೆ ನೋಟೀಸ್‌ ಕೊಟ್ಟಿದ್ದಾರೆ. ಇದರಿಂದ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ. ಶಿಸ್ತಿನ ಮನುಷ್ಯ ತುಕಾರಾಂ ಟ್ರಾನ್ಸ್‌ಫರ್‌ಗಳಿಗೆ ಹೆದರುವವರೂ ಅಲ್ಲ. ಅವರಿಗೆ 20 ವರ್ಷ ಸರ್ವಿಸ್‌ ಅನುಭವ ಇದೆ. ಟ್ರಾನ್ಸ್‌ಫರ್‌ಗಳ ಸಂಖ್ಯೆ ಅದಕ್ಕಿಂತಲೂ ಹೆಚ್ಚಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+