ನವೆಂಬರ್ ನಲ್ಲಿ ಭಾರತಕ್ಕೆ ಬರಲಿರುವ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಭಾರತ ಭೇಟಿ. ಇದೇ ವರ್ಷ ನವೆಂಬರ್ ನಲ್ಲಿ ಹೈದರಾಬಾದ್ ನಲ್ಲಿ ನಡೆಯಲಿರುವ ಜಾಗತಿಕ ಉದ್ಯಮಿಗಳ ಸಮ್ಮೇಳನಕ್ಕೆ ಆಗಮಿಸಲಿರುವ ಇವಾಂಕಾ.

ನವದೆಹಲಿ, ಆಗಸ್ಟ್ 11: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್, ಇದೇ ವರ್ಷ ನವೆಂಬರ್ ತಿಂಗಳಲ್ಲಿ ಭಾರತಕ್ಕೆ ಆಗಮಿಸಲಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಹೈದರಾಬಾದ್ ನಲ್ಲಿ ನವೆಂಬರ್ 28ರಿಂದ ಮೂರು ದಿನಗಳ ಕಾಲ ಜಾಗತಿಕ ಉದ್ಯಮಿಗಳ ಸಮ್ಮೇಳನ ನಡೆಯಲಿದ್ದು, ಈ ಸಮ್ಮೇಳನದಲ್ಲಿ ಭಾಗವಹಿಸಲು ಇವಾಂಕಾ ಅವರು ಆಗಮಿಸಲಿದ್ದಾರೆಂದು ಹೇಳಲಾಗಿದೆ. ಈ ಸಮ್ಮೇಳನವನ್ನು ನೀತಿ ಆಯೋಗ ಆಯೋಜಿಸಿದೆ.

Trump tweets Ivanka participation in Global Entrepreneurship Summit in India

ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಮೆರಿಕದ ಉದ್ಯಮಿಗಳ ನಿಯೋಗವೊಂದು ಭಾರತಕ್ಕೆ ಆಗಮಿಸುತ್ತಿದೆ. ಆ ನಿಯೋಗಕ್ಕೆ ಇವಾಂಕಾ ಅವರು ಸಾರಥಿಯಾಗಿದ್ದು ಆ ಹಿನ್ನೆಲೆಯಲ್ಲೇ ಅವರು ಭಾರತಕ್ಕೆ ಆಗಮಿಸಲಿದ್ದಾರೆ.

ಇದೇ ವರ್ಷ ಜೂನ್ ತಿಂಗಳಲ್ಲಿ ಅಮೆರಿಕಕ್ಕೆ ಮೋದಿ ಭೇಟಿ ನೀಡಿದ್ದಾಗಲೇ, ಇವಾಂಕಾ ಅವರಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಮಂತ್ರಣ ನೀಡಿದ್ದರು.

ಇವಾಂಕಾ ಆಗಮನದ ಕುರಿತಂತೆ ಮೋದಿ ಮಾಡಿರುವ ಟ್ವೀಟ್ ಗೆ ಟ್ವೀಟ್ಟರ್ ನಲ್ಲೇ ಉತ್ತರಿಸಿರುವ ಇವಾಂಕಾ, ಭಾರತಕ್ಕೆ ಭೇಟಿ ನೀಡುವ ವಿಚಾರದಲ್ಲಿ ಕಾತುರರಾಗಿದ್ದು, ಭಾರತಕ್ಕೆ ಭೇಟಿ ನೀಡಿದಾಗ ಮೋದಿಯವರನ್ನು ಸಂಧಿಸುವುದಾಗಿ ತಿಳಿಸಿದ್ದಾರೆ.

ಅತ್ತ, ಡೊನಾಲ್ಡ್ ಟ್ರಂಪ್ ಕೂಡ ಇವಾಂಕಾ ಅವರ ಭಾರತ ಭೇಟಿಯನ್ನು ಟ್ವಿಟ್ಟರ್ ಮೂಲಕ ಖಚಿತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+