ಟ್ರಂಪ್ ತೆರಿಗೆ ಕಡಿಮೆ ಮಾಡಿ ನಮಗೇನೂ ಮಹದುಪಕಾರ ಮಾಡಿಲ್ಲ: ರಂಗಸ್ವಾಮಿ ಮೂಕನಹಳ್ಳಿ
ಭಾರತ-ಯುರೋಪ್ ಹಾಗೂ ಅರಬ್ ಲೀಗ್ ನಡುವಿನ ವ್ಯಾಪಾರ ಒಪ್ಪಂದಗಳ ಬೆಳವಣಿಗೆಯ ನಡುವೆ ಅಮೆರಿಕ ಕೂಡ ಎಚ್ಚೆತ್ತುಕೊಂಡಿದ್ದು, ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಘೋಷಿಸಿದ್ದಾರೆ ಡೊನಾಲ್ಡ್ ಟ್ರಂಪ್. ಈ ಒಪ್ಪಂದದ ಭಾಗವಾಗಿ ಭಾರತ ಮೇಲಿನ ದುಬಾರಿ ಆಮದು ಸುಂಕವನ್ನು ಕಡಿತಗೊಳಿಸಲಾಗಿದ್ದು, ಶೇ.25ರಷ್ಟಿದ್ದ ಸುಂಕವನ್ನು ಶೇ.18ಕ್ಕೆ ಇಳಿಸಲಾಗಿದೆ. ಈ ನಿರ್ಧಾರದಿಂದ ಭಾರತ-ಅಮೆರಿಕ ನಡುವಿನ ವ್ಯಾಪಾರ ಸಂಬಂಧಗಳು ಮತ್ತಷ್ಟು ಬಲವಾಗುವ ನಿರೀಕ್ಷೆ ವ್ಯಕ್ತವಾಗಿದ್ದು, ಭಾರತೀಯ ರಫ್ತುಗಾರರಿಗೆ ದೊಡ್ಡ ಉತ್ತೇಜನ ದೊರಕಲಿದೆ ಎಂದು ಹೇಳಲಾಗುತ್ತಿದೆ. ಆದರೆ "ಟ್ರಂಪ್ ತೆರಿಗೆ ಕಡಿಮೆ ಮಾಡಿ ನಮಗೇನೂ ಮಹದುಪಕಾರ ಮಾಡಿಲ್ಲ. ಅಮೆರಿಕವೂ ಬೇಯುತ್ತಿದೆ" ಎಂದಿದ್ದಾರೆ ಆರ್ಥಿಕ ತಜ್ಞ ರಂಗಸ್ವಾಮಿ ಮೂಕನಹಳ್ಳಿ.
'ಅಮೆರಿಕಾದ ತೆರಿಗೆ ಆಕ್ರಮಣಕ್ಕೆ ತಲೆ ಬಾಗದೆ ನಿಂತ ಕಾರಣ ಯುರೋಪಿಯನ್ ಒಕ್ಕೂಟದ ಜೊತೆಗೆ ಒಪ್ಪಂದ ಆಯ್ತು. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸೇರಿದಂತೆ ಜಗತ್ತಿನ ಎಲ್ಲಾ ಪ್ರಮುಖ ದೇಶಗಳ ಜೊತೆಗೆ ಟ್ರೇಡ್ ಡೀಲ್ ಮುಗಿದಿದೆ. ಇಷ್ಟೆಲ್ಲಾ ಆದದ್ದು ಒಂದು ಕಠಿಣ ನಿರ್ಧಾರದಿಂದ! ಒಬ್ಬ ವ್ಯಕ್ತಿ, ಉನ್ನತ ಸ್ಥಾನದಲ್ಲಿರುವ ಆ ವ್ಯಕ್ತಿ ತೆಗೆದು ಕೊಂಡ ನಿರ್ಧಾರದಿಂದ. ಹೌದು ಆ ನಿರ್ಧಾರ ತೆಗೆದುಕೊಳ್ಳಲು ಆತನಿಗೆ ಸಲಹೆ ನೀಡುವ ತಜ್ಞರ ತಂಡವಿರುತ್ತೆ, ಅದು ಬೇರೆ ಮಾತು. ಕೊನೆಗೂ ನಿರ್ಧಾರದ ಕೊನೆ ಬಟನ್ ಒತ್ತಬೇಕಾಗಿರುವುದು ಆ ಒಬ್ಬ ವ್ಯಕ್ತಿ ಮಾತ್ರ' ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

'ಈ ಬಾರಿ ಪೂರ್ಣ ಬಹುಮತ ಇಲ್ಲದ ಕಾರಣ ಈತನ ವರ್ಚಸ್ಸು ಕುಗ್ಗಬಹುದು ಎಂದು ಕೊಂಡಿದ್ದೆ. ಆದರೆ ಈತನೀಗ ವಿಶ್ವನಾಯಕ. ಯಾರೆಷ್ಟೆ ವಿಷ ಕಾರಿದರೂ ಆತ ವಿಶ್ವನಾಯಕ ಎನ್ನುವುದು ಬದಲಾಗುವುದಿಲ್ಲ. ಒಬ್ಬನಿಂದ ಏನಾಗುತ್ತೆ ಎನ್ನುತ್ತೇವೆ. ಒಬ್ಬ ವ್ಯಕ್ತಿ ಮನಸ್ಸು ಮಾಡಿ ಬಿಟ್ಟರೆ ಜಗತ್ತು ಕೂಡ ಮಣಿಯುತ್ತೆ. ವ್ಯಕ್ತಿಯ ಕನಸು, ನಿಯತ್ತು ಸರಿಯಿರಬೇಕು ಅಷ್ಟೇ'.
'ಟ್ರಂಪ್ ತೆರಿಗೆ ಕಡಿಮೆ ಮಾಡಿ ನಮಗೇನೂ ಮಹದುಪಕಾರ ಮಾಡಿಲ್ಲ. ಅಮೆರಿಕವೂ ಬೇಯುತ್ತಿದೆ, ಆತನಿಗೂ ಅನ್ಯ ಮಾರ್ಗವಿರಲಿಲ್ಲ. ಅದಕ್ಕೆ ತಿಂಗಳುಗಳ ಮುಂಚೆ ಡಿಪ್ಲೋಮಟ್ ಅಲ್ಲದ ತನ್ನ ಆಪ್ತ ಸೇರ್ಜಿಯೋ ವನ್ನು ಭಾರತಕ್ಕೆ ಕಳುಹಿಸಿದ್ದು. ಬಂದ ದಿನವೇ ಆತ ಭಾರತವನ್ನು, ಮೋದಿಯನ್ನು ಇನ್ನಿಲ್ಲದಂತೆ ಹೊಗಳಿದ್ದು. ಒಂದು ಒಪ್ಪಂದದ ಹಿಂದೆ ಅದೆಷ್ಟು ಕಥೆಗಳಿರುತ್ತವೆ. ಈ ಒಪ್ಪಂದದಿಂದ ಯಾರಿಗೆ ಹೆಚ್ಚು ಲಾಭ? ಬರೆಯುವೆ .ಸದ್ಯಕ್ಕಿರುವ ಕುತೂಹಲ ಮೋದಿಜೀ ಪುಟಿನ್ ಸಾಹೇಬರನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು, ಶುಭವಾಗಲಿ' ಎಂದು ಬರೆದುಕೊಂಡಿದ್ದಾರೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications