ಟ್ಯೂಷನ್ ನಡೆಸುತ್ತಿರುವ ಶಿಕ್ಷಕರ ವಿರುದ್ಧ ತ್ರಿಪುರ ಸರ್ಕಾರ ಕ್ರಮ

ಅಗರ್ತಲಾ, ಜೂನ್ 8: ವಿದ್ಯಾರ್ಥಿಗಳಿಗೆ ಟ್ಯೂಷನ್ ಮಾಡುತ್ತಿರುವ ಸರ್ಕಾರ ಶಾಲೆ ಹಾಗೂ ಅನುದಾನಿತ ಶಾಲೆ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ತ್ರಿಪುರ ಸರ್ಕಾರ ಮುಂದಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ರತನ್ ಸಿಂಗ್ ಲಾಲ್‌ನಾಥ್ ಮಾಹಿತಿ ನೀಡಿದ್ದಾರೆ.

ತ್ರಿಪುರದಲ್ಲಿ ಅನೇಕ ಸರ್ಕಾರಿ ಶಾಲೆ ಶಿಕ್ಷಕರು ಟ್ಯೂಷನ್ ನೀಡುವುದು ಕಂಡು ಬರುತ್ತಿದ್ದು, ಮಂಗಳವಾರದಿಂದ ರೈಡ್‌ ಮಾಡುವ ಮೂಲಕ ಅವರನ್ನು ಪತ್ತೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಾಗಿದೆ.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಅನೇಕ ಶಿಕ್ಷಕರು ಟ್ಯೂಷನ್ ನೀಡುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ. ಇದು ಕೊರೊನಾ ಲಾಕ್‌ ಡೌನ್ ನಿಯಮದ ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

Tripura Govt Conduct Raids To Control School Teachers Private Tuitions

2015 ರಲ್ಲಿ ತ್ರಿಪುರ ಹೈಕೋರ್ಟ್ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಟ್ಯೂಷನ್ ನೀಡುವುದನ್ನು ನಿಷೇಧ ಮಾಡಿತ್ತು. 14 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಟ್ಯೂಷನ್ ನೀಡಬಹುದು. ಆದರೆ, ಅವರು ಇತರ ಶಾಲೆಗಳವರಾಗಿದ್ದರೆ ಮಾತ್ರ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.

''ನಿಯಮ ಉಲ್ಲಂಘನೆ ಮಾಡಿದ ಶಾಲಾ ಶಿಕ್ಷಕರಿಗೆ ಹಲವಾರು ನೋಟಿಸ್‌ಗಳನ್ನು ನೀಡಿದ್ದರೂ, ಅವರು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಅಭ್ಯಾಸವನ್ನು ಮುಂದುವರಿಸುತ್ತಿದ್ದಾರೆ. ಮಂಗಳವಾರದಿಂದ ನಾವು ದಾಳಿ ನಡೆಸುತ್ತೇವೆ ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ'' ಎಂದು ಸಚಿವ ರತನ್ ಸಿಂಗ್ ಲಾಲ್‌ನಾಥ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+