Boxanagar By Election Results: ಬೊಕ್ಸಾನಗರದಲ್ಲಿ ಬಿಜೆಪಿ ಗೆಲುವು!
ಬೊಕ್ಸಾನಗರ, ಸೆಪ್ಟೆಂಬರ್ 08: ತ್ರಿಪುರ ರಾಜ್ಯದ ಬೊಕ್ಸಾನಗರ ವಿಧಾನಸಭಾ ಕ್ಷೇತ್ರದಲ್ಲಿ ಸೆಪ್ಟೆಂಬರ್ 5 ರಂದು ಉಪ ಚುನಾವಣೆ ನಡೆದಿದ್ದು, ಇಂದು(ಶುಕ್ರವಾರ) ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ.
ಬೋಕ್ಸಾನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಿಪಿಐ ಎಂ. ನಾಯಕ ಸಂಶುಲ್ ಹಕ್ ನಿಧನರಾಗಿರುವುದರಿಂದ ತೆರವಾದ ಸ್ಥಾನಕ್ಕೆ ಈ ಚುನಾವಣೆ ನಡೆಸಲಾಗಿದೆ. ಈ ಕ್ಷೇತ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಸಿಪಿಐ ಮಾತ್ರ ಕಣದಲ್ಲಿದ್ದವು.

ಬೊಕ್ಸಾ ನಗರ ಕ್ಷೇತ್ರದಲ್ಲು ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ವಿರೋಧ ಪಕ್ಷವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಇತರ ಎರಡು ವಿರೋಧ ಪಕ್ಷಗಳಾದ ಟಿಪ್ರಾ ಮೋಥಾ ಮತ್ತು ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೊಕ್ಸಾನಗರದಿಂದ ಸ್ಪರ್ಧಿಸಿ ಸೋತಿದ್ದ ಬಿಜೆಪಿಯ ತಫಜ್ಜಲ್ ಹುಸೇನ್ ಕಣಕ್ಕಿಳಿದಿದ್ದು, ಸಿಪಿಐ(ಎಂ) ಅಭ್ಯರ್ಥಿ ಮಿಜಾನ್ ಹುಸೇನ್ ಸ್ಪರ್ಧಿಸಿದ್ದಾರೆ.
ಇನ್ನೂ ಬೆಳಗ್ಗೆಯಿಂದ ಮತಎಣಿಕೆ ಆರಂಭವಾಗಿದ್ದು, ತ್ರಿಪುರಾದಲ್ಲಿ ಬಿಜೆಪಿ ಮುನ್ನೆಡೆ ಸಾಧಿಸಿದೆ. ಈಗಾಗಲೇ ಆರು ಸುತ್ತುಗಳಿಗೆ ಮತ ಏಣಿಕೆ ನಡೆದಿದ್ದು, ಬೊಕ್ಸಾನಗರ ಬಿಜೆಪಿ ಗೆಲುವು ಸಾಧಿಸಿದೆ.
ಬಿಜೆಪಿ ಅಭ್ಯರ್ಥಿ ತಫಜ್ಜಲ್ ಹುಸೇನ್ 30 ಸಾವಿರ ಅಂತರಗಳಿಂದ ಗೆಲುವು ಸಾಧಿಸಿದ್ದಾರೆ.












Click it and Unblock the Notifications