ಬುಡಕಟ್ಟು ಮಹಿಳೆ ಮೇಲೆ ಅತ್ಯಾಚಾರ: ಸಂತ್ರಸ್ಥೆ ಸ್ಥಿತಿ ಗಂಭೀರ
ದಿನಜ್ಪುರ್, ಫೆಬ್ರವರಿ 20: ಪಶ್ಚಿಮ ಬಂಗಾಳದ ದಿನಜ್ಪುರದ ಕುಷ್ಮಂಡಿ ಎಂಬಲ್ಲಿ ಬುಡಕಟ್ಟು ಜನಾಮಗದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದ್ದು, ಮಹಿಳೆ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ಕುಷ್ಮಂಡಿ ಎಂಬಲ್ಲಿ ಫೆ.17 ರಂದು ಈ ಘಟನೆ ನಡೆದಿದ್ದು, ಅತ್ಯಾಚಾರ ನಡೆದ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಸೇತುವೆಯೊಂದರ ಬಳಿ ಬಿದ್ದಿದ್ದ ಮಹಿಳೆಯನ್ನು ಗ್ರಾಸ್ಥರು ಆಸ್ಪತ್ರೆಗೆ ಸೇರಿಸಿದ್ದಾರೆ.
ವಿಕೃತ ಕಾಮಿಗಳು, ಮಹಿಳೆಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದು, ಇಲ್ಲಿನ ಮಾಲ್ಡಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಸಂತ್ರಸ್ಥೆ ಬುದ್ಧಿಮಾಂದ್ಯಳಾಗಿದ್ದಳು ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಸುಳಿವು ಇನ್ನೂ ಪತ್ತೆಯಾಗಿಲ್ಲ.












Click it and Unblock the Notifications