ಯುರೋಪ್ ವಿಮಾನ ಹತ್ತಿದ ರಾಹುಲ್ ಗಾಂಧಿ!
ನವದೆಹಲಿ, ಡಿಸೆಂಬರ್ 28 : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪುನಃ ವಿದೇಶ ಪ್ರವಾಸ ಕೈಗೊಂಡಿದ್ದಾರೆ. 'ಕೆಲ ದಿನಗಳ ಮಟ್ಟಿಗೆ ಯುರೋಪ್ ಪ್ರವಾಸ ಕೈಗೊಳ್ಳಲಿದ್ದೇನೆ' ಎಂದು ಅವರು ಟ್ವಿಟ್ ಮಾಡಿದ್ದಾರೆ.
'ಕೆಲವು ದಿನಗಳ ಮಟ್ಟಿಗೆ ಯುರೋಪ್‌ಗೆ ಹೋಗುತ್ತಿರುವೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷ ಎಲ್ಲರಿಗೂ ಸುಖ ಸಂತೋಷ ತರಲಿ' ಎಂದು ರಾಹುಲ್ ಗಾಂಧಿ ಸೋಮವಾರ ಟ್ವಿಟ್ ಮಾಡಿದ್ದಾರೆ. [ನಾಪತ್ತೆಯಾಗಿದ್ದ ರಾಹುಲ್ ಗಾಂಧಿ ದೆಹಲಿಯಲ್ಲಿ ಪತ್ತೆ]

ಈ ವರ್ಷದ ಬಜೆಟ್ ಅಧಿವೇಶನಕ್ಕೆ ರಾಹುಲ್ ಗಾಂಧಿ ಗೈರು ಹಾಜರಾಗಿದ್ದರು. ಅವರು ಎಲ್ಲಿ ಇದ್ದಾರೆ? ಎಂಬ ಮಾಹಿತಿ ಲಭ್ಯವಾಗಿರಲಿಲ್ಲ. ಆದ್ದರಿಂದ, ಈ ಬಾರಿ ರಾಹುಲ್ ಯುರೋಪ್ ಪ್ರವಾಸ ಕೈಗೊಳ್ಳುವುದಾಗಿ ಟ್ವಿಟ್ ಮಾಡಿ ಪ್ರವಾಸ ಹೊರಟಿದ್ದಾರೆ. [ಕಾಣೆಯಾಗಿದ್ದಾರೆ: ರಾಹುಲ್ ಗಾಂಧಿ, ಅಮೇಥಿ ಸಂಸದ]
I will be traveling to Europe for a few days. A very Happy New Year to everyone (1/2)
— Office of RG (@OfficeOfRG) December 28, 2015 56 ದಿನ ಕಾಣೆಯಾಗಿದ್ದರು : 2015ರ ಫೆಬ್ರವರಿಯಲ್ಲಿ ರಾಹುಲ್ ಗಾಂಧಿ 56 ದಿನಗಳ ಕಾಲ ನಾಪತ್ತೆಯಾಗಿದ್ದರು. ಫೆಬ್ರವರಿ 22ರ ನಂತರ ಎಸ್‌ಪಿಜಿ ಭದ್ರತೆ ಪಡೆದಿರಲಿಲ್ಲ. ಬಹಿರಂಗವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ರಾಹುಲ್ ರಜೆಯ ಮೇಲಿದ್ದಾರೆ ಎಂದು ಪಕ್ಷ ಹೇಳಿತ್ತು. ರಾಹುಲ್ ನಾಪತ್ತೆಯಾದ ಬಗ್ಗೆ ಭಾರೀ ಚರ್ಚೆ ನಡೆದಿತ್ತು.
Hope the new year brings much joy and happiness to you and everyone close to you! (2/2)
— Office of RG (@OfficeOfRG) December 28, 2015 











Click it and Unblock the Notifications