24 ಗಂಟೆಗಳಲ್ಲಿ 25,153 ಹೊಸ ಪ್ರಕರಣ ದಾಖಲು
ನವದೆಹಲಿ, ಡಿಸೆಂಬರ್ 19: ಭಾರತದ ಕೋವಿಡ್ ಪ್ರಕರಣಗಳ ಸಂಖ್ಯೆ ಒಂದು ಕೋಟಿಯ ಗಡಿ ದಾಟಿದೆ. ದೇಶದಲ್ಲಿ ಮೊದಲ ಸೋಂಕು ಕಾಣಿಸಿಕೊಂಡ ಹತ್ತು ತಿಂಗಳಲ್ಲಿ ಭಾರತ ಈ ಗಡಿ ತಲುಪಿದೆ.
ಕಳೆದ 24 ಗಂಟೆಗಳಲ್ಲಿ 25,153 ಹೊಸ ಪ್ರಕರಣಗಳು ದೇಶದಲ್ಲಿ ದಾಖಲಾಗಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 10,004,599ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಶುಕ್ರವಾರ 347 ಮಂದಿ ಸೋಂಕಿತರು ವೈರಸ್‌ನಿಂದ ಬಲಿಯಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,45,136ಕ್ಕೆ ತಲುಪಿದೆ.
ದೇಶದಲ್ಲಿ ಇದುವರೆಗೂ ಒಟ್ಟು ಬಿಡುಗಡೆಯಾದವರ ಸಂಖ್ಯೆ 95,50,712ಕ್ಕೆ ಏರಿಕೆಯಾಗಿದೆ. ಜತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,08,751ಕ್ಕೆ ತಗ್ಗಿದೆ.

700ಕ್ಕೂ ಅಧಿಕ ಜಿಲ್ಲೆಗಳಿರುವ ಭಾರತದಲ್ಲಿ ಅರ್ಧದಷ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ಕೇವಲ 47 ಜಿಲ್ಲೆಗಳಲ್ಲಿಯೇ ವರದಿಯಾಗಿವೆ. ದೇಶದ ಬಹುಪಾಲು ಜಿಲ್ಲೆಗಳಲ್ಲಿ 5,000ಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿವೆ. ಕೇವಲ 11 ಜಿಲ್ಲೆಗಳಲ್ಲಿಯೇ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈ 11 ಜಿಲ್ಲೆಗಳು ದೇಶದ ಜನಸಂಖ್ಯೆಯ ಶೇ 7.8ರಷ್ಟು ಜನಸಂಖ್ಯೆ ಇವೆ. ಇದುವರೆಗೂ ಖಚಿತವಾದ ಪ್ರಕರಣಗಳಲ್ಲಿ ಸುಮಾರು ಶೇ 28ರಷ್ಟು ಪ್ರಕರಣಗಳು ಇಲ್ಲಿ ವರದಿಯಾಗಿವೆ.
ದೇಶದ ಒಟ್ಟು ಪ್ರಕರಣಗಳಲ್ಲಿ ಶೇ 6.3 ಸೋಂಕಿತರು ದೆಹಲಿಯಲ್ಲಿ ವರದಿಯಾಗಿವೆ. ಬಳಿಕ ಬೆಂಗಳೂರು, ಪುಣೆ, ಮುಂಬೈ, ಥಾಣೆ ಮತ್ತು ಚೆನ್ನೈಗಳು ಇವೆ. ಈ ಆರು ನಗರ ಕೇಂದ್ರಗಳಲ್ಲಿ ಎರಡು ಮಿಲಿಯನ್‌ಗೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ, ಅಂದರೆ ದೇಶದ ಒಟ್ಟು ಸೋಂಕಿತರಲ್ಲಿ ಶೇ 22ರಷ್ಟು ಪಾಲು ಹೊಂದಿವೆ.












Click it and Unblock the Notifications