ಮಲಯಾಳಂ ಕಲಾವಿದರ ಸಂಘದಿಂದ ದಿಲೀಪ್ ಔಟ್

ಮಲಯಾಳಂ ಸಿನಿಮಾ ನಟರ ಸಂಘದಿಂದ ಕೇರಳ ನಟ ದಿಲೀಪ್ ಉಚ್ಛಾಟನೆ. ಮಂಗಳವಾರ ಸಭೆ ಸೇರಿದ ಸಂಘದ ಕಲಾವಿದರಿಂದ ನಿರ್ಧಾರ.

ಕೊಚ್ಚಿ, ಜುಲೈ 11: ಬಹುಭಾಷಾ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ಕೊಟ್ಟ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ಚಿತ್ರ ನಟ ದಿಲೀಪ್ ಅವರನ್ನು ಮಲಯಾಳಂ ಚಿತ್ರ ಕಲಾವಿದರ ಸಂಘದಿಂದ (ಎಎಂಎಂಎ) ವಜಾಗೊಳಿಸಲಾಗಿದೆ.

ದಿಲೀಪ್ ಅವರನ್ನು ಪೊಲೀಸರು ಸೋಮವಾರ (ಜುಲೈ 10) ಸಂಜೆ ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಜುಲೈ 11ರಂದು ಬೆಳಗ್ಗೆ ಎಎಂಎಂಎ ನ ಎಲ್ಲಾ ಸದಸ್ಯರೂ ಸಭೆ ಸೇರಿ ದಿಲೀಪ್ ಬಂಧನದ ಕುರಿತಂತೆ ಚರ್ಚಿಸಿದರು. ಈ ಸಭೆಯು, ಕೊಚ್ಚಿಯಲ್ಲಿರುವ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರ ಮನೆಯಲ್ಲಿ ನಡೆಯಿತು.

ಬಹುಭಾಷಾ ನಟಿ ಲೈಂಗಿಕ ಪ್ರಕರಣ: ನಟ ದಿಲೀಪ್ ಬಂಧನ

Top Kerala Filmstars Sack Jailed Dileep From Malayalam Actors' Body

ಈ ಸಭೆಯಲ್ಲಿ ಸೂಪರ್ ಸ್ಟಾರ್ ಗಳಾದ ಮೋಹನ್ ಲಾಲ್, ಪೃಥ್ವಿರಾಜ್ ಮತ್ತಿತರರು ಭಾಗಿಯಾಗಿದ್ದರು. ಈ ವೇಳೆ, ನೊಂದ ಕಲಾವಿದೆಯ ಬೆನ್ನಿಗೆ ಉಳಿದೆಲ್ಲಾ ಕಲಾವಿದರೂ ನಿಲ್ಲುವ ಒಮ್ಮತದ ನಿರ್ಧಾರ ಕೈಗೊಂಡರಲ್ಲದೆ, ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ದಿಲೀಪ್ ಅವರನ್ನು ಸಂಘದಿಂದ ಬರಖಾಸ್ತು ಮಾಡುವ ನಿರ್ಧಾರ ಕೈಗೊಂಡರು.

ಫೆ. 17ರಂದು ಬಹುಭಾಷಾ ನಟಿಯನ್ನು ಅಪಹರಿಸಿದ್ದ ದುಷ್ಕರ್ಮಿಗಳ ಗುಂಪೊಂದು ಆಕೆಯ ಮೇಲೆ ಸುಮಾರು ಗಂಟೆಗಳ ಕಾಲ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಕೇರಳ ಚಿತ್ರರಂಗದ ಇತಿಹಾಸದಲ್ಲೇ ಈವರೆಗೆ ಕಂಡು ಕೇಳರಿಯದ ಈ ಘಟನೆಯಿಂದ ಇಡೀ ಭಾರತೀಯ ಚಿತ್ರೋದ್ಯಮವೇ ದಂಗಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+