ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 30ರ ಟಾಪ್ 10 ಸುದ್ದಿಗಳು ಒಂದೇ ಕ್ಲಿಕ್ ನಲ್ಲಿ ಲಭ್ಯ

ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

By Mahesh
|
Google Oneindia Kannada News

ಬೆಂಗಳೂರು, ಮೆ 30: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ, ಈ ಸಮಯದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

Top 10 stories for today - May 30, 2017

* ಬಾಬ್ರಿ ಮಸೀದಿ ಧ್ವಂಸ: ಅಡ್ವಾಣಿ ಸೇರಿ 12 ಜನರಿಗೆ ಜಾಮೀನು

ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯ ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಹಾಗೂ ಕೇಂದ್ರ ಸಚಿವೆ ಉಮಾ ಭಾರತಿ ಸೇರಿ ಎಲ್ಲಾ 12 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.[ಮುಂದೆ ಓದಿ]

Top 10 stories for today - May 30, 2017

* 2017ರ ಸಿಇಟಿ ಫಲಿತಾಂಶ ಮೇ 30ರ 11 ಗಂಟೆಗೆ ಆನ್ಲೈನಲ್ಲಿ ಲಭ್ಯ
2017ರ ಸಿಇಟಿ ಫಲಿತಾಂಶವು ಮಂಗಳವಾರ(ಮೇ 30) ರಂದು ಮಧ್ಯಾಹ್ನ 1 ಗಂಟೆಯಿಂದ ಆನ್ ಲೈನ್ ನಲ್ಲಿ ವೀಕ್ಷಣೆ ಲಭ್ಯವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪ್ರಕಟಿಸಿದೆ. ನಿಗದಿತ ವೇಳಾಪಟ್ಟಿಯಂತೆ ಜೂ.1ರಿಂದ ದಾಖಲೆಗಳ ಪರಿಶೀಲನೆ ಆರಂಭವಾಗಲಿದೆ.[ಮುಂದೆ ಓದಿ]

Top 10 stories for today - May 30, 2017

*ಜೂನ್ ನಲ್ಲಿ ಮತ್ತೆ ವೃಶ್ಚಿಕಕ್ಕೆ ಶನಿ ಪ್ರವೇಶ, ಹನ್ನೆರಡು ರಾಶಿಗಳ ಫಲಾಫಲ ಏನು?

ಶನೈಶ್ಚರ ಸಂಚಾರದ ಬಗ್ಗೆ ಈ ಹಿಂದೆ ನೀವು ಲೇಖನ ಓದಿರುತ್ತೀರಿ. ಧನುಸ್ಸು ರಾಶಿಯನ್ನು ಜನವರಿಯಲ್ಲಿ ಪ್ರವೇಶಿಸಿದ್ದ ಶನಿಯು ಜೂನ್ 21ರಂದು ವಕ್ರಿಯಾಗಿ ಮತ್ತೆ ವೃಶ್ಚಿಕ ರಾಶಿ ಪ್ರವೇಶ ಮಾಡುತ್ತಿದೆ. ಇದರಿಂದ ಹನ್ನೆರಡು ರಾಶಿಗಳ ಮೇಲೆ ಆಗುವ ಪರಿಣಾಮ ಏನು ಎಂದು ವಿವರಿಸುವ ಲೇಖನ ಇದು.[ಮುಂದೆ ಓದಿ]

Top 10 stories for today - May 30, 2017

* ಮದುವೆ ಮರುದಿನವೇ ವರನನ್ನು ಸೆರೆಮನೆಗಟ್ಟಿದ ವಧು

ಗಂಡು ಹೆಣ್ಣಿನ ಕತ್ತಿಗೆ ಮಂಗಳಸೂತ್ರ ಬಿಗಿದು, ಔತಣವೆಲ್ಲ ಮುಗಿದು, ಇನ್ನೇನು ಮೊದಲ ರಾತ್ರಿಗೆ ವಧುವರರಿಬ್ಬರು ಸಿದ್ಧವಾಗಬೇಕು, ಅಷ್ಟರಲ್ಲಿ ನನಗೆ ರೆಫ್ರಿಜರೇಟರ್, ಚಿನ್ನದ ಚೈನು ಬೈಕು ಎಂದು ವರ ಬೇಡಿಕೆ ಇಟ್ಟ.[ಮುಂದೆ ಓದಿ]

Top 10 stories for today - May 30, 2017

* ಸಿದ್ದು ಕನಸಿನ ಮಟನ್ ಭಾಗ್ಯ ಶೀಘ್ರವೇ ನನಸು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ 'ಮಟನ್ ಭಾಗ್ಯ' ಶೀಘ್ರವೇ ನನಸಾಗಲಿದೆ. ಕೆಎಂಎಫ್ ನಂದಿನಿ, ಹಾಪ್ ಕಾಪ್ಸ್ ಮಳಿಗೆಗಳಂತೆ ಮಟನ್ ಶಾಪ್ ಗಳು ರಾಜ್ಯದೆಲ್ಲೆಡೆ ಆರಂಭಗೊಳ್ಳಲಿವೆ.[ಮುಂದೆ ಓದಿ]

Top 10 stories for today - May 30, 2017

* ಶ್ರೀಲಂಕಾದಲ್ಲಿ ವರುಣನ ರುದ್ರ ನರ್ತನ, ಬದುಕು ಕಸಿದ ಭಗವಂತ

ಬೆಂಗಳೂರಿನಲ್ಲಿ ಮಳೆ ತಂದ ಅವಾಂತರಗಳ ತೂಕ ಒಂದಾದರೆ, ಶ್ರೀಲಂಕಾದಲ್ಲಿ ವರುಣನ ರುದ್ರನರ್ತನದಿಂದ ಆದ ಆನಾಹುತಗಳು ಮತ್ತೊಂದು ಬಗೆಯದಾಗಿದೆ. ಅಲ್ಲಿ ಎಷ್ಟೋ ಹಳ್ಳಿಗಳು ದ್ವೀಪದಂತಾಗಿವೆ. ನೂರೈವತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಕಣ್ಮರೆಯಾಗಿದ್ದಾರೆ. ಅಲ್ಲಿ ಮಳೆಯಿಂದ ಆದ ಅನಾಹುತಗಳ ಚಿತ್ರಗಳನ್ನು ವಾಯುಸೇನೆಯವರು ಸೆರೆ ಹಿಡಿದಿದ್ದಾರೆ.[ಮುಂದೆ ಓದಿ]

Top 10 stories for today - May 30, 2017

* ಹೆದ್ದಾರಿಯಲ್ಲೇ ಕನ್ನಡ ನಟನ ಮೇಲೆ ಹಲ್ಲೆಗೆ ಯತ್ನ

ಬೆಂಗಳೂರು-ಮೈಸೂರು ಹೆದ್ದಾರಿಯ ಮುಖ್ಯರಸ್ತೆಯಲ್ಲಿ ಯುಗಪುರುಷ ಚಿತ್ರದ ನಾಯಕ ನಟ ಅರ್ಜುನ್‍ದೇವ್ ಮೇಲೆ ಹಲ್ಲೆಗೆ ಯತ್ನ ನಡೆಸಲಾಗಿದೆ.[ಮುಂದೆ ಓದಿ]

Top 10 stories for today - May 30, 2017

* ಕರ್ನಾಟಕ ಸಿಇಟಿ ಫಲಿತಾಂಶ: ಟಾಪರ್ ಪ್ರತೀಕ್ ಪ್ರತಿಕ್ರಿಯೆ

ಇಂದು ಬಿಡುಗಡೆಯಾದ ಕರ್ನಾಟಕ ಸಿಇಟಿ ಫಲಿತಾಂಶದಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿ ಪ್ರತೀಕ್ ನಾಯಕ್ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ.[ಮುಂದೆ ಓದಿ]

Top 10 stories for today - May 30, 2017

* ಲೇಖಕ, ಪ್ರೊಫೆಸರ್, ಧರ್ಮಾಧಿಕಾರಿ ಸುಬ್ರಮಣ್ಯ ಸ್ವಾಮಿ ವಿಧಿವಶ

ಬೆಂಗಳೂರಿನ ವಿಜಯ ಕಾಲೇಜಿನಲ್ಲಿಪ್ರೊಫೆಸರ್ ಆಗಿ, ಮುಕ್ತನಾಗ ದೇಗುಲ ಸ್ಥಾಪಿಸಿ, ಧರ್ಮಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುಬ್ರಮಣ್ಯ ಶಾಸ್ತ್ರಿಗಳು ನಿಧನರಾಗಿದ್ದಾರೆ.[ಮುಂದೆ ಓದಿ]

Top 10 stories for today - May 30, 2017

* ಅನಿಲ್ ಕುಂಬ್ಳೆ ವಿರುದ್ಧ ಟೀಂ ಇಂಡಿಯಾ ಆಟಗಾರರ ದೂರು

ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಮುಖ್ಯ ಕೋಚ್ ಅನಿಲ್ ಕುಂಬ್ಳೆ ವಿರುದ್ಧ ಟೀಂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಲಾಗಿದೆ. ಟೀಂ ಇಂಡಿಯಾದ ಆಟಗಾರರು ಬಿಸಿಸಿಐನ ಆಡಳಿತ ಸಮಿತಿ(ಸಿಒಎ)ಗೆ ದೂರು ನೀಡಿದ್ದಾರೆ ಎಂದು ಇಂಡಿಯಾ ಟುಡೇ ಟಿವಿ ಸೋಮವಾರ(ಮೇ 29) ವರದಿ ಮಾಡಿದೆ.[ಮುಂದೆ ಓದಿ]

English summary
Top 10 stories for today - May 29, 2017 : In 'Babri Masjid Demolition Case' BJP leaders LK Advani, Murali Manohar Joshi and Union minister Uma Bharti granted bail from CBI special court Lucknow this and many more stories from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X