Urvil Patel: 6,6,6,6,6,6,6,6.. ಸುರೇಶ್ ರೈನಾ ದಾಖಲೆ ಧೂಳೀಪಟ ಮಾಡಿದ ಉರ್ವಿಲ್ ಪಟೇಲ್

Urvil Patel: ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ (ಮೇ 10) ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಿಎಸ್‌ಕೆ ಪರ ಉರ್ವಿಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದ ಅವರು ಸುರೇಶ್ ರೈನಾ ಹೆಸರಲ್ಲಿದ್ದ ದಾಖಲೆ ಅಳಿಸಿ ಗಮನ ಸೆಳೆದರು.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟರ್ ಉರ್ವಿಲ್ ಪಟೇಲ್ ಐಪಿಎಲ್ ಇತಿಹಾಸದಲ್ಲಿ ಜಂಟಿ ಅತಿ ವೇಗದ ಅರ್ಧಶತಕ ದಾಖಲಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ತವರಿನ ಅಂಗಳದಲ್ಲಿ ಲಕ್ನೋ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅವರು ಸಿಎಸ್‌ಕೆ ತಂಡಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಉರ್ವಿಲ್ ಪಟೇಲ್ ಅವರ ಈ ಬಿರುಗಾಳಿಯಂತಹ ಇನ್ನಿಂಗ್ಸ್ ಐಪಿಎಲ್ 2026ರ ಅತ್ಯಂತ ಸ್ಮರಣೀಯ ಬ್ಯಾಟಿಂಗ್ ಪ್ರದರ್ಶನಗಳಲ್ಲಿ ಒಂದಾಗಿ ದಾಖಲಾಗಿದೆ.

Urvil Patel Breaks Suresh Raina Record With 13-Ball Fifty in IPL 2026 Know Complete details

ಜೈಸ್ವಾಲ್ ದಾಖಲೆ ಸರಿಗಟ್ಟಿದ ಉರ್ವಿಲ್

2023ರ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಯಶಸ್ವಿ ಜೈಸ್ವಾಲ್ ಅವರು 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದ್ದರು. ಈಗ ಉರ್ವಿಲ್ ಪಟೇಲ್ ಕೂಡ 13 ಎಸೆತಗಳಲ್ಲಿ ಅರ್ಶಶತಕ ಸಿಡಿಸಿ ಜೈಸ್ವಾಲ್ ಅವರ ಈ ಸಾಧನೆಯನ್ನು ಸರಿಗಟ್ಟಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಇತಿಹಾಸದಲ್ಲಿ ದಾಖಲಾದ ಅತ್ಯಂತ ವೇಗದ ಅರ್ಧಶತಕ ಇದಾಗಿದೆ. ಕೇವಲ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕವೇ ಉರ್ವಿಲ್ ಈ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.

ರೈನಾ ಅವರ ದೀರ್ಘಕಾಲದ ದಾಖಲೆ ಉಡೀಸ್

ಉರ್ವಿಲ್ ಪಟೇಲ್ ತಮ್ಮ ಈ ಸ್ಫೋಟಕ ಇನ್ನಿಂಗ್ಸ್ ಮೂಲಕ ಐಪಿಎಲ್‌ನ ಅತಿ ವೇಗದ ಅರ್ಧಶತಕದ ದಾಖಲೆಯನ್ನು ಸಂಪೂರ್ಣವಾಗಿ ತಮ್ಮೊಬ್ಬರ ಹೆಸರಿಗೇ ಬರೆದುಕೊಳ್ಳುವಲ್ಲಿ ಕೂದಲೆಳೆ ಅಂತರದಲ್ಲಿ ವಿಫಲರಾದರು. ಆದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಇದ್ದ ಸುರೇಶ್ ರೈನಾ ಅವರ ದೀರ್ಘಕಾಲದ ದಾಖಲೆಯನ್ನು ಅವರು ಧೂಳೀಪಟ ಮಾಡಿದ್ದಾರೆ.

2014ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸುರೇಶ್ ರೈನಾ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಇದು ಇಂದಿನವರೆಗೂ ಸಿಎಸ್‌ಕೆ ಆಟಗಾರನೊಬ್ಬನ ಅತಿ ವೇಗದ ಅರ್ಧಶಕವಾಗಿತ್ತು. ಈಗ ಉರ್ವಿಲ್ ಪಟೇಲ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ 12 ವರ್ಷಗಳ ಕಾಲ ರೈನಾ ಹೆಸರಿನಲ್ಲಿದ್ದ ಈ ದಾಖಲೆಯನ್ನು ಮುರಿದು ಸಿಎಸ್‌ಕೆ ಇತಿಹಾಸದ ಹೊಸ ವೇಗದ ಸುಲ್ತಾನ್ ಆಗಿ ಹೊರಹೊಮ್ಮಿದ್ದಾರೆ.

ತಂದೆಗೆ ವಿಶೇಷ ಸಂದೇಶ

ಉರ್ವಿಲ್ ಅವರು ಈ ಪಂದ್ಯದಲ್ಲಿ 23 ಎಸೆತಗಳಲ್ಲಿ 2 ಬೌಂಡರಿ, 8 ಸಿಕ್ಸರ್‌ಗಳ ಸಹಿತ 65 ರನ್ ಗಳಿಸಿ ಔಟಾದರು. ಈ ಅತೀ ವೇಗದ ಅರ್ಧಶತಕದ ಸಾಧನೆಯನ್ನು ಅವರು ಅಮ್ಮಂದಿರ ದಿನದಂದೇ ಮಾಡಿರುವುದು ವಿಶೇಷವಾಗಿದೆ. 50 ರನ್ ಪೂರೈಸಿದ ತಕ್ಷಣ ಉರ್ವಿಲ್ ತಮ್ಮ ಪ್ಯಾಂಟ್‌ ಜೇಬಿನಲ್ಲಿದ್ದ ಕಾಗದವನ್ನು ತೆಗೆದಯ ಪ್ರದರ್ಶಿಸಿದರು. ಅದರಲ್ಲಿ "ಇದು ನಿಮಗಾಗಿ ಅಪ್ಪಾ" (This is for you Papa) ಎಂದು ಬರೆಯಲಾಗಿತ್ತು. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

27 ವರ್ಷದ ಉರ್ವಿಲ್ ಪಟೇಲ್ ಅವರ ಈ ಅಮೋಘ ದಾಖಲೆ ಮತ್ತು ತಂದೆಯ ಮೇಲಿನ ಪ್ರೀತಿಯ ಈ ನಡೆ ಕ್ರೀಡಾಭಿಮಾನಿಗಳ ಮನಗೆದ್ದಿದೆ. ನಾಲ್ಕನೇ ಓವರ್‌ನಲ್ಲಿ ಸಂಜು ಸ್ಯಾಮ್ಸನ್ ಔಟಾದ ನಂತರ ಕ್ರೀಸ್‌ಗೆ ಬಂದ ಇವರು ಎದುರಿಸಿದ ಮೊದಲ ಎಸೆತದಲ್ಲಿ ಒಂದು ರನ್ ಗಳಿಸಿದರು. ನಂತರ ಅವೇಶ್ ಖಾನ್ ಎಸೆದ ಓವರ್‌ನಲ್ಲಿ ಸತತ ಮೂರು ಸಿಕ್ಸರ್ ಸಿಡಿಸಿ ಅಬ್ಬರಿಸಿದರು.

ಎಲ್‌ಎಸ್‌ಜಿ ಬೌಲರ್‌ಗಳ ಬೆವರಿಳಿಸಿದ ಉರ್ವಿಲ್

ಪವರ್‌ಪ್ಲೇನ ಕೊನೆಯ ಓವರ್ ಎಸೆದ ದಿಗ್ವೇಶ್ ರಾಠಿ ಅವರ ಬೌಲಿಂಗ್‌ನಲ್ಲಿ ಉರ್ವಿಲ್ 3 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿದರು. 7ನೇ ಓವರ್‌ನಲ್ಲಿ ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಒಂದು ಸಿಕ್ಸರ್ ಮತ್ತು ಒಂದು ರನ್ ಪಡೆಯುವ ಮೂಲಕ ಕೇವಲ 13 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.

ಗಾಯಕ್ವಾಡ್ ಜೊತೆ ಭರ್ಜರಿ ಜೊತೆಯಾಟ

ಕೇವಲ 18 ಎಸೆತಗಳಲ್ಲಿ 65 ರನ್ ಗಳಿಸಿ ಶಹಬಾಜ್ ಅಹ್ಮದ್‌ಗೆ ವಿಕೆಟ್ ಒಪ್ಪಿಸುವ ಮುನ್ನ ಉರ್ವಿಲ್ ಅವರು ರುತುರಾಜ್ ಗಾಯಕ್ವಾಡ್ ಅವರೊಂದಿಗೆ ಎರಡನೇ ವಿಕೆಟ್‌ಗೆ ಕೇವಲ 34 ಎಸೆತಗಳಲ್ಲಿ 81 ರನ್‌ಗಳ ಸ್ಫೋಟಕ ಜೊತೆಯಾಟ ಆಡಿ ಮಿಂಚಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+