ಧೋನಿ ದಾಖಲೆ ಸರಿಗಟ್ಟಿದ ಕೊಹ್ಲಿ-ರೋಹಿತ್‌: ಮುಂಬೈ ಬ್ಯಾಟರ್‌ಗಳಿಗೆ ಸಿಂಹಸ್ವಪ್ನ ಆದ ಆರ್‌ಸಿಬಿ 'ಸ್ವಿಂಗ್ ಕಿಂಗ್' ಭುವಿ

RCB Vs MI IPL 2026: ರಾಯ್‌ಪುರದಲ್ಲಿ ಭಾನುವಾರ (ಮೇ 10) ನಡೆಯುತ್ತಿರುವ ಐಪಿಎಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್‌ ಮುಖಾಮುಖಿಯಾಗಿವೆ. ಟಾಸ್ ಸೋತು ಮೊದಲು ಬ್ಯಾಟ್‌ ಬೀಸಿದ ಎಂಐ ನಿಗದಿತ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 166 ಪೇರಿಸಿತು. ಭುವನೇಶ್ವರ್ ಕುಮಾರ್ ಸ್ವಿಂಗ್‌ ದಾಳಿಗೆ ಮುಂಬೈ ಅಕ್ಷರಸಃ ತತ್ತರಿಸಿದರು. ಮತ್ತೊಂದೆಡೆ ಈ ಪಂದ್ಯದ ಮೂಲಕ ರೋಹಿತ್ ಹಾಗೂ ಕೊಹ್ಲಿ ಎಂಎಸ್ ಧೋನಿ ಅವರ ದಾಖಲೆಯೊಂದನ್ನ ಸರಿಗಟ್ಟಿದ್ದಾರೆ.

ಆರ್‌ಸಿಬಿಯು ಭುವನೇಶ್ವರ್ ಕುಮಾರ್ ಅವರ ಅಮೋಘ ಬೌಲಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವನ್ನು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್‌ಗಳಿಗೆ ನಿಯಂತ್ರಿಸಿದೆ. ಭುವನೇಶ್ವರ್ ಕುಮಾರ್ 23 ರನ್‌ಗಳಿಗೆ 4 ವಿಕೆಟ್ ಕಿತ್ತು ಮುಂಬೈ ತಂಡದ ಪಾಲಿಗೆ ಸಿಂಹಸ್ವಪ್ನವಾದರು. ತಮ್ಮ ಮೊದಲ ಎರಡು ಓವರ್‌ಗಳಲ್ಲೇ 3 ವಿಕೆಟ್ ಕಬಳಿಸುವ ಮೂಲಕ ಮುಂಬೈ ಬ್ಯಾಟರ್‌ಗಳಿಗೆ ಆರಂಭಿಕ ಆಘಾತ ನೀಡಿದರು.

RCB vs MI IPL 2026 Bhuvneshwar Kumar s 4 Wickets Restrict Mumbai to 166 Know Three records details

4 ವಿಕೆಟ್‌ ಕಿತ್ತು ಮಿಂಚಿದ ಭುವಿ

ಆರಂಭದಲ್ಲೇ 28 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಮುಂಬೈ ತಂಡಕ್ಕೆ ತಿಲಕ್ ವರ್ಮಾ (42 ಎಸೆತಗಳಲ್ಲಿ 57) ಮತ್ತು ನಮನ್ ಧೀರ್ (32 ಎಸೆತಗಳಲ್ಲಿ 47) ಆಸರೆಯಾದರು. ಈ ಜೋಡಿ 82 ರನ್‌ಗಳ ಅತ್ಯಮೂಲ್ಯ ಜೊತೆಯಾಟವಾಡಿತು. ನಂತರ ಮತ್ತೆ ದಾಳಿಗಿಳಿದ ಭುವಿ ತಿಲಕ್ ವರ್ಮಾ ವಿಕೆಟ್ ಪಡೆಯುವ ಮೂಲಕ ತಮ್ಮ 4ನೇ ವಿಕೆಟ್ ಪೂರೈಸಿದರು.

ಅತಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರರು

ಹಾರ್ದಿಕ್ ಪಾಂಡ್ಯ ಈ ಪಂದ್ಯಕ್ಕೂ ಅಲಭ್ಯರಾದ ಕಾರಣ ಸೂರ್ಯಕುಮಾರ್ ಯಾದವ್ ಅವರೇ ಮುಂಬೈ ತಂಡದ ಹಂಗಾಮಿ ನಾಯಕರಾಗಿ ಮುಂದುವರಿದಿದ್ದಾರೆ. ಈ ಪಂದ್ಯವು ದಿಗ್ಗಜ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪಾಲಿಗೆ 278ನೇ ಐಪಿಎಲ್ ಪಂದ್ಯವಾಗಿದೆ. ಈ ಮೂಲಕ ಇವರಿಬ್ಬರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಎಂ.ಎಸ್. ಧೋನಿ ಅವರ ದಾಖಲೆಯನ್ನು (278 ಪಂದ್ಯಗಳು) ಸರಿಗಟ್ಟಿದ್ದಾರೆ.

ಒಟ್ಟಿನಲ್ಲಿ ಭುವನೇಶ್ವರ್ ಕುಮಾರ್ ಅವರ ಮಾರಕ ಬವಳಿಂಗ್ ದಾಳಿಯಿಂದಾಗಿ ಮುಂಬೈ ತಂಡವು ಸಾಧಾರಣ ಮೊತ್ತಕ್ಕೆ ತೃಪ್ತಿಪಡಬೇಕಾಯಿತು. ಇನ್ನು ಆರ್‌ಸಿಬಿ ತಂಡವು ಗೆಲುವಿಗಾಗಿ 167 ರನ್‌ಗಳ ಗುರಿಯನ್ನು ಬೆನ್ನಟ್ಟಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+