Alcohol Price Hike: ಹೊಸ ಅಬಕಾರಿ ನೀತಿ: ಕರ್ನಾಟಕದಲ್ಲಿ ಬ್ರಾಂಡಿ, ಬಿಯರ್, ವಿಸ್ಕಿ ಸೇರಿ ಈ ಮದ್ಯಗಳ ಬೆಲೆ ದುಬಾರಿ, ಎಷ್ಟು

Alcohol Price Hike: ಕರ್ನಾಟಕ ಕಾಂಗ್ರೆಸ್ ಸರ್ಕಾರವು ಮದ್ಯ ಪ್ರಿಯರಿಗೆ ಕರ್ನಾಟಕದಲ್ಲಿ ಭಾರೀ ಶಾಕ್ ನೀಡುವುದಕ್ಕೆ ಮುಂದಾಗಿದೆ. ಬೆಂಗಳೂರು ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಈಗಾಗಲೇ ಮದ್ಯದ ಬೆಲೆಯು ದುಬಾರಿಯಾಗಿದೆ. ಆದರೆ ಇದೀಗ ನಾಳೆಯಿಂದ ಮದ್ಯ ಪ್ರಿಯರಿಗೆ ಮತ್ತೊಂದು ಭಾರಿ ಬೆಲೆ ಏರಿಕೆಯ ಶಾಕ್ ಎದುರಾಗಲಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮದ್ಯದ ಬೆಲೆಯು ಇನ್ನಷ್ಟು ಹೆಚ್ಚಳವಾಗಲಿದೆ. ಅದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ಕರ್ನಾಟಕ ಕಾಂಗ್ರೆಸ್ ಸರ್ಕಾರವು ಮದ್ಯದ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಆಲ್ಕೋಹಾಲ್ ಇನ್ ಬೇವರೇಜ್ - ವಿವಿಧ ಮದ್ಯದಲ್ಲಿನ ಮದ್ಯದ ಪ್ರಮಾಣ ಆಧಾರಿತ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತರಲು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.

Alcohol Price Hike

ಈ ಹೊಸ ನೀತಿಯು ನಾಳೆಯಿಂದ ಅಂದರೆ ಮೇ 11ರ ಸೋಮವಾರದಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಈ ಮೂಲಕ ಕಳೆದ 6 ದಶಕಗಳಿಂದ ಜಾರಿಯಲ್ಲಿರುಚ ಬಲ್ಕ್ ಲೀಟರ್ ಆಧಾರಿತ ತೆರಿಗೆ ಪದ್ಧತಿ ವ್ಯವಸ್ಥೆಯು ಮುಗಿಯಲಿದೆ. ಇದೀಗ ದೇಶದಲ್ಲೇ ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಪದ್ಧತಿ ಜಾರಿಗೆ ಬರುತ್ತಿದೆ. ಆದರೆ, ಈ ಪದ್ಧತಿಯಿಂದ ಮದ್ಯ ಪ್ರಿಯರಿಗೆ ಇನ್ನಷ್ಟು ಬೆಲೆ ಏರಿಕೆ ಆಗಲಿದೆ. ಕರ್ನಾಟಕದಲ್ಲಿ ಈಗಾಗಲೇ ಮದ್ಯ ಬೆಲೆಯು ದುಬಾರಿಯಾಗಿದೆ.

Alcohol Price Hike: ಯಾವೆಲ್ಲ ಮದ್ಯದ ಬೆಲೆ ಏರಿಕೆ ಆಗಲಿದೆ

ಕರ್ನಾಟಕದಲ್ಲಿ ನಾಳೆಯಿಂದಲೇ ವಿವಿಧ ಮದ್ಯಗಳ ಬೆಲೆ ಏರಿಕೆಯಾಗಲಿದೆ. ಬ್ರಾಂಡಿ, ವಿಸ್ಕಿ, ರಮ್, ಜಿನ್, ಬಿಯರ್ ಹಾಗೂ ವೈನ್ ಸೇರಿದಂತೆ ವಿವಿಧ ಮದ್ಯಗಳ ಬೆಲೆ ಏರಿಕೆಯಾಗಲಿದೆ. ಈ ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಈಗಿರುವ 16 ಅಬಕಾರಿ ಸ್ಲ್ಯಾಬ್‌ಗಳನ್ನು ಕಡಿತಗೊಳಿಸಿ ಕೇವಲ 8 ಸ್ಲ್ಯಾಬ್‌ಗಳಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಅಬಕಾರಿ ಇಲಾಖೆಯ ಆದಾಯದಲ್ಲಿ ಪ್ರಮುಖ ಪಾತ್ರವಹಿಸುವ ಕಡಿಮೆ ದರದ ಮದ್ಯ ವಿಭಾಗದ ಮೇಲೆ ಈ ನೀತಿಯ ಪರಿಣಾಮ ಹೆಚ್ಚಾಗಿ ಆಗುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೂರು ವರ್ಷದಲ್ಲಿ ಅಬಕಾರಿಯಲ್ಲಿ ಇದು ಮಹತ್ವದ ಬೆಳವಣಿಗೆಯಾದರೂ, ಕಳೆದ ಮೂರು ವರ್ಷದ ಅವಧಿಯಲ್ಲಿ ಕನಿಷ್ಠ ಮೂರರಿಂದ ಆರು ಬಾರಿ ವಿವಿಧ ಮಾದರಿಯಲ್ಲಿ ಮದ್ಯದ ಬೆಲೆಯು ಹೆಚ್ಚಳವಾಗಿದೆ. ಈ ರೀತಿ ನಿರಂತರವಾಗಿ ಮದ್ಯ ಬೆಲೆ ಏರಿಕೆ ಆಗುತ್ತಿರುವುದನ್ನು ಮದ್ಯ ಪ್ರಿಯರು ವಿರೋಧಿಸಿದ್ದಾರೆ.

ಈ ಹಿಂದೆ ಬಿಯರ್ ಬೆಲೆ ಹೆಚ್ಚಳವಾದಾಗ ಬಿಯರ್ ಉತ್ಪಾದನಾ ಕಂಪನಿಗಳು ವಿರೋಧ ವ್ಯಕ್ತಪಡಿಸಿದ್ದವು. ದೇಶದ ಉಳಿದ ರಾಜ್ಯಗಳಿಗಿಂತಲೂ ಕರ್ನಾಟಕದಲ್ಲಿ ಮದ್ಯದ ಬೆಲೆ ಅದರಲ್ಲೂ ಮುಖ್ಯವಾಗಿ ಬಿಯರ್ ಬೆಲೆ ಹೆಚ್ಚಾಗಿದ್ದು, ಬಿಯರ್ ಬೆಲೆ ಹೆಚ್ಚಾದರೆ ಮಾರಾಟದ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಲಾಗಿತ್ತು.

ವಿವಿಧ ಮದ್ಯಗಳ ಬೆಲೆ ಏರಿಕೆ

ಕರ್ನಾಟಕದಲ್ಲಿ 180 ಮಿಲಿ ಟೆಟ್ರಾ ಪ್ಯಾಕ್‌ಗಳ ವಿಸ್ಕಿ, ರಮ್, ಬ್ರಾಂಡಿ, ಜಿನ್ ಮತ್ತು ವೋಡ್ಕಾ ಬೆಲೆಯು ಕನಿಷ್ಠ ಶೇ.20% ಹೆಚ್ಚಾಗುವ ಸಾಧ್ಯತೆ ಇದೆ. ಪ್ರೀಮಿಯಂ ಮದ್ಯ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಪ್ರೀಮಿಯಂ ಮದ್ಯ ಬ್ರ್ಯಾಂಡ್‌ಗಳ ಬೆಲೆಯು ಶೇ.16 ರಿಂದ ಶೇ.20ವರೆಗೆ ಇಳಿಕೆಯಾಗುವ ಸಾಧ್ಯತೆ ಇದೆ. ಆದರೆ ಇದು ಸ್ಥಳೀಯ ಮದ್ಯ ಉತ್ಪಾದನಾ ಕಂಪನಿಗಳಿಗೆ ಲಾಭವಾಗುವ ಸಾಧ್ಯತೆ ಕಡಿಮೆ. ಅಲ್ಲದೆ ಇದರಿಂದಲೂ ಮದ್ಯ ಪ್ರಿಯರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+