Tomato Price: ಟೊಮೆಟೊ ಬೆಲೆಯಲ್ಲಿ ಭಾರಿ ಕುಸಿತ, ರೈತರಲ್ಲಿ ಆತಂಕ!
ಟೊಮೆಟೊ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು ರೈತರಿಗೆ ಖುಷಿ ಕೊಟ್ಟಿತ್ತು. ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಮುಗಿಲು ಮುಟ್ಟಿದ್ದ ಟೊಮೆಟೊ ಬೆಲೆ ಈಗ ದಿಢೀರ್ ಕುಸಿತ ಕಾಣುತ್ತಿದೆ. ಬೆಲೆ ಏರಿಕೆ ಬಳಿಕ ಖುಷಿಯಾಗಿದ್ದ ರೈತರಲ್ಲಿ ದಿಢೀರ್ ಬೆಲೆ ಕುಸಿತವು ಆತಂಕ ಸೃಷ್ಟಿ ಮಾಡಿದೆ. ಹಾಗಾದರೆ ಟೊಮೆಟೊ ಬೆಲೆ ಇಂದು ಎಷ್ಟಿದೆ? ರೈತರು ಎಷ್ಟು ಬೆಲೆಗೆ ಟೊಮೆಟೊ ಮಾರಾಟ ಮಾಡ್ತಿದ್ದಾರೆ? ತಿಳಿಯೋಣ ಬನ್ನಿ.
ಹಳ್ಳಿಯಿಂದ ದಿಲ್ಲಿವರೆಗೂ ಒಂದೇ ಮಾತು, ಅದು ಟೊಮೆಟೊ ಬೆಲೆ ಏರಿಕೆಯದ್ದು. ಹೀಗೆ ಕಳೆದ ಕೆಲ ದಿನಗಳಿಂದ ಟೊಮೆಟೊ ಬಗ್ಗೆ ಹುಟ್ಟದ ಜೋಕ್ಸ್ ಇಲ್ಲ, ಮಾಡದ ಕಮೆಂಟ್ಸ್ ಕೂಡ ಇಲ್ಲ. ಪೆಟ್ರೋಲ್‌ಗಿಂತ ಡಬಲ್ ಬೆಲೆಗೆ ಮಾರಾಟ ಆಗಿದ್ದ ಟೊಮೆಟೊ ಈಗ ಮತ್ತೆ ಕುಸಿಯಲು ಆರಂಭಿಸಿದೆ. 15 ಕೆಜಿ ತೂಕದ ಬಾಕ್ಸ್‌ಗೆ ಕಳೆದ ಕೆಲವು ವಾರದಿಂದ 2500 ಬೆಲೆ ಇತ್ತು. ಇನ್ನೇನು 3000 ರೂಪಾಯಿಗು ಬೆಲೆ ಮುಟ್ಟಲಿದೆ ಅಂತಾ ರೈತರು ಕಾಯುತ್ತಿದ್ದರು. ಆದ್ರೆ ಇದೀಗ ದಿಢೀರ್ ಬೆಲೆ ಕುಸಿತ ಕಾಣುತ್ತಿದ್ದು, ಟೊಮೆಟೊ ಬೆಳೆದ ರೈತರು ಕಂಗಾಲಾಗಿ ಹೋಗಿದ್ದಾರೆ.

₹2500ದಿಂದ ₹1550ಕ್ಕೆ ಕುಸಿದ ಟೊಮೆಟೊ ಬೆಲೆ!
ಹೌದು ಕೆಲವೇ ದಿನದ ಹಿಂದೆ ಟೊಮೆಟೊ 15 ಕೆಜಿ ತೂಕದ ಬಾಕ್ಸ್‌ಗೆ ₹2500ರಿಂದ ₹2600 ಬೆಲೆ ಇತ್ತು. ಆದರೆ ಇಂದು ಗರಿಷ್ಠ ಬೆಲೆ ₹1550ಕ್ಕೆ ಕುಸಿತ ಕಾಣುವ ಮೂಲಕ ರೈತರಿಗೂ ಶಾಕ್ ಕೊಟ್ಟಿದೆ. ಗಗನಕ್ಕೇರಿದ್ದ ಟೊಮೆಟೊ ಬೆಲೆ ಕುಸಿತ ಕಂಡಿದೆ. ಕೋಲಾರದಲ್ಲಿರುವ APMC ಮಾರುಕಟ್ಟೆಯಲ್ಲಿ ಮತ್ತೆ ಟೊಮೆಟೊ ಬೆಲೆ ಕುಸಿದಿದೆ. 15 ಕೆಜಿ ತೂಕದ 1 ಬಾಕ್ಸ್ ಟೊಮೆಟೊ ಬೆಲೆ 1,550 ರೂಪಾಯಿಗೆ ಕುಸಿತ ಕಂಡಿದೆ. ಇಂದು ಬೆಲೆ ಜಾಸ್ತಿ ಆಗುತ್ತೆ ಎಂಬ ನಿರೀಕ್ಷೆಯಲ್ಲಿ ರೈತರು ಇದ್ದರು. ಆದರೆ ಮಾರುಕಟ್ಟೆಯಲ್ಲಿ ಇಂದು ಆಗಿದ್ದೇ ಬೇರೆ. ನಿನ್ನೆ ಗರಿಷ್ಠ 1700 ರೂಪಾಯಿ ಬೆಲೆಗೆ ಟೊಮೆಟೊ ಮಾರಾಟವಾಗಿತ್ತು. ಇಂದು ಮತ್ತೆ ₹150 ಕುಸಿತ ಕಂಡಿದೆ.

ಗ್ರಾಹಕರಿಗೆ ಮಾತ್ರ ಟೊಮೆಟೊ ಹೊರೆ!
ಕೋಲಾರ ಎಪಿಎಸಿಂ ಮಾರುಕಟ್ಟೆಗೆ ಚಿತ್ರದುರ್ಗದ ಚಳ್ಳಕೆರೆ ಸೇರಿ ಮಂಡ್ಯ ಮತ್ತು ನೆರೆ ರಾಜ್ಯ ಆಂಧ್ರದಿಂದ ಟೊಮೆಟೊ ಬರುತ್ತಿದೆ. ಹೀಗಾಗಿ ಬೆಲೆ ಕುಸಿದಿದೆ ಎಂದು ಅಂದಾಜಿಸಲಾಗಿದೆ. ಇಷ್ಟಾದರೂ ದೇಶದ ವಿವಿಧೆಡೆ ಟೊಮೆಟೊ ಬೆಲೆ ಮಾತ್ರ ಆಕಾಶದಲ್ಲಿ ಇದೆ. ಹೀಗೆ ಒಂದು ಕಡೆ ಗ್ರಾಹಕರು ಬೆಲೆ ಇಳಿಕೆಯಾಗಲಿ ಅಂತ ಕಾಯುತ್ತಿದ್ರೆ ಇತ್ತ ರೈತರು ಮತ್ತೆ ಟೊಮೆಟೊ ಬೆಲೆ ಏರಿಕೆ ಕಾಣುತ್ತಾ? ಎಂಬ ನಿರೀಕ್ಷೆಯಲ್ಲಿದ್ದಾರೆ. ಈಗಿನ ಸ್ಥಿತಿ ನೋಡಿದರೆ ಮತ್ತೆ ಭಾರಿ ಪ್ರಮಾಣದಲ್ಲಿ ಮಾರುಕಟ್ಟೆಗೆ ಟೊಮೆಟೊ ಬರುತ್ತಿರುವ ಕಾರಣ ಬೆಲೆಯಲ್ಲಿ ಇಳಿಕೆ ಪಕ್ಕಾ ಎನ್ನಲಾಗುತ್ತಿದೆ.












Click it and Unblock the Notifications