• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಸುದ್ದಿ: ಚಿಣ್ಣರ ಮುಂದೆ ಸತ್ಯ ಬಾಯ್ಬಿಟ್ಟ ಸಚಿನ್

By Mahesh
|

ಮುಂಬೈ, ಮಾ.3: ಕ್ರಿಕೆಟ್ ಕ್ಷೇತ್ರದ ದೇವರು ಎಂದೇ ಕರೆಯಲ್ಪಡುವ ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಚಿಣ್ಣರ ಜತೆ ಚಿಣ್ಣರಾಗಿ ಸಂತಸ ಪಟ್ಟ ಕ್ಷಣಗಳು ಚಿತ್ರದಲ್ಲಿ ಸೆರೆಯಾಗಿದೆ. ಸಚಿನ್ ಅವರ ಸಾಧನೆಯನ್ನು ಮನ್ನಿಸಿ ಬೃಹತ್ ಗಾತ್ರ ಬ್ಯಾಟ್ ಅನಾವರಣಗೊಳಿಸಿದ ಸಮಾರಂಭದಲ್ಲಿ ಶಾಲಾ ಮಕ್ಕಳೊಂದಿಗೆ ಬೆರೆತು ನಲಿದಾಡಿದರು.

ನನ್ನ ವೃತ್ತಿ ವಿದಾಯ ಭಾಷಣಕ್ಕೆ ನಾನು ಪೂರ್ವ ತಯಾರಿ ನಡೆಸಿರಲಿಲ್ಲ. ನನ್ನ ಮನಸ್ಸಿಗೆ ಬಂದಿದ್ದು ಹೇಳಿದೆ. ಆದರೆ, ನಾನು ಯಾರು ಯಾರಿಗೆ ಕೃತಜ್ಞತೆ ಸಲ್ಲಿಸಬೇಕು ಎಂಬ ಪಟ್ಟಿಯನ್ನು ಮಾತ್ರ ಚೆನ್ನಾಗಿ ಕಂಠಪಾಠ ಮಾಡಿಕೊಂಡು ಬಂದಿದ್ದೆ ಎಂದು ಸತ್ಯ ಒಪ್ಪಿಕೊಂಡರು. ನಿವೃತ್ತಿ ನಂತರ ದೇಶದ ಜನತೆ ನನ್ನನ್ನು ಸ್ವೀಕರಿಸಿದ ರೀತಿ ನನಗೆ ಅಚ್ಚರಿ ತಂದಿತು. ನಾನು ಎಲ್ಲರೊಡನೆ ಬೆರೆತು ಹೋದೆ ಎಂದು ಸಚಿನ್ ಹೇಳಿದರು. ಕಳೆದ ವರ್ಷ ವಾಂಖೆಡೆ ಸ್ಟೇಡಿಯಂನಲ್ಲಿ ಸಚಿನ್ ನೀಡಿದ 20 ನಿಮಿಷಗಳ ಭಾಷಣ ಕೇಳಿ ಸಾವಿರಾರು ಅಭಿಮಾನಿಗಳ ಕಣ್ಣಾಲಿಗಳು ತುಂಬಿ ಬಂದಿತ್ತು.

ಉಳಿದಂತೆ ಇತ್ತೀಚಿನ ಚಿತ್ರಸುದ್ದಿಯಲ್ಲಿ ಕೋಲ್ಕತ್ತಾದ ಸಾಮೂಹಿಕ ವಿವಾಹ ಮಹೋತ್ಸವ, ಬಾಲಿವುಡ್ ನಟಿ ಪೂಜಾ ಛೋಪ್ರಾ ಹಾಗೂ ರೂಪದರ್ಶಿಯರು, ಚೀನಾದಲ್ಲಿ ಹತ್ಯಾಕಾಂಡದ ನಂತರದ ಚಿತ್ರ, ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ವಿಭಿನ್ನ ಪ್ರತಿಭಟನೆ, ಹಳೆ ಕಾರು ಮೆರವಣಿಗೆ ಮುಂತಾದ ಚಿತ್ರಗಳಿವೆ ನೋಡಿ...

ಚಿಣ್ಣರ ಮುಂದೆ ಸತ್ಯ ಬಾಯ್ಬಿಟ್ಟ ಸಚಿನ್

ಚಿಣ್ಣರ ಮುಂದೆ ಸತ್ಯ ಬಾಯ್ಬಿಟ್ಟ ಸಚಿನ್

ಕ್ರಿಕೆಟ್ ಕ್ಷೇತ್ರದ ದೇವರು ಎಂದೇ ಕರೆಯಲ್ಪಡುವ ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಚಿಣ್ಣರ ಜತೆ ಚಿಣ್ಣರಾಗಿ ಸಂತಸ ಪಟ್ಟ ಕ್ಷಣಗಳು ಚಿತ್ರದಲ್ಲಿ ಸೆರೆಯಾಗಿದೆ. ಸಚಿನ್ ಅವರ ಸಾಧನೆಯನ್ನು ಮನ್ನಿಸಿ ಬೃಹತ್ ಗಾತ್ರ ಬ್ಯಾಟ್ ಅನಾವರಣಗೊಳಿಸಿದ ಸಮಾರಂಭದಲ್ಲಿ ಶಾಲಾ ಮಕ್ಕಳೊಂದಿಗೆ ಬೆರೆತು ನಲಿದಾಡಿದರು.

ವಿದಾಯ ಭಾಷಣಕ್ಕೆ ತಯಾರಿ ನಡೆಸಿರಲಿಲ್ಲ

ವಿದಾಯ ಭಾಷಣಕ್ಕೆ ತಯಾರಿ ನಡೆಸಿರಲಿಲ್ಲ

ನನ್ನ ವೃತ್ತಿ ವಿದಾಯ ಭಾಷಣಕ್ಕೆ ನಾನು ಪೂರ್ವ ತಯಾರಿ ನಡೆಸಿರಲಿಲ್ಲ. ನನ್ನ ಮನಸ್ಸಿಗೆ ಬಂದಿದ್ದು ಹೇಳಿದೆ. ಆದರೆ, ನಾನು ಯಾರು ಯಾರಿಗೆ ಕೃತಜ್ಞತೆ ಸಲ್ಲಿಸಬೇಕು ಎಂಬ ಪಟ್ಟಿಯನ್ನು ಮಾತ್ರ ಚೆನ್ನಾಗಿ ಕಂಠಪಾಠ ಮಾಡಿಕೊಂಡು ಬಂದಿದ್ದೆ ಎಂದು ಸತ್ಯ ಒಪ್ಪಿಕೊಂಡರು

ದೆಹಲಿಯಲ್ಲಿ ಹಳೆ ಕಾರು ಮೆರವಣಿಗೆ

ದೆಹಲಿಯಲ್ಲಿ ಹಳೆ ಕಾರು ಮೆರವಣಿಗೆ

ದೆಹಲಿಯಲ್ಲಿ ಭಾನುವಾರ ನಡೆದ ಹಳೆ ಕಾರುಗಳ ಮೆರವಣಿಗೆ.PTI Photo by Atul Yadav

ಪೂಜಾ ಛೋಪ್ರಾ ಹಾಗೂ ರೂಪದರ್ಶಿಯರು

ಪೂಜಾ ಛೋಪ್ರಾ ಹಾಗೂ ರೂಪದರ್ಶಿಯರು

ಮುಂಬೈ: ಬಾಲಿವುಡ್ ನಟಿ ಪೂಜಾ ಛೋಪ್ರಾ ಹಾಗೂ ರೂಪದರ್ಶಿಯರು ಫೆಮಿನಾ ಮಿಸ್ ಇಂಡಿಯಾ 2014ರ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ

ತಿರುಮಲದಲ್ಲಿ ಅಕ್ಕಿನೇನಿ ಅಪ್ಪ-ಮಗ

ತಿರುಮಲದಲ್ಲಿ ಅಕ್ಕಿನೇನಿ ಅಪ್ಪ-ಮಗ

ತಿರುಮಲದಲ್ಲಿ ಇತ್ತೀಚೆಗೆ ಅಕ್ಕಿನೇನಿ ಕುಟುಂಬದ ಅಪ್ಪ-ಮಗ ಕಾಣಿಸಿಕೊಂಡಿದ್ದರು. ನಾಗಾರ್ಜುನ ಹಾಗೂ ಅಖಿಲ್ ಅವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡರು.

ಕೋಲ್ಕತ್ತಾದಲ್ಲಿ ಶಾಲಾ ಮಕ್ಕಳಿಗೆ ಸೈಕಲ್

ಕೋಲ್ಕತ್ತಾದಲ್ಲಿ ಶಾಲಾ ಮಕ್ಕಳಿಗೆ ಸೈಕಲ್

ಕೋಲ್ಕತ್ತಾದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶಾಲಾ ಮಕ್ಕಳಿಗೆ ಸೈಕಲ್ ವಿತರಿಸಿದ್ದಾರೆ.

ಸಾಮೂಹಿಕ ವಿವಾಹ ಮಹೋತ್ಸವ

ಸಾಮೂಹಿಕ ವಿವಾಹ ಮಹೋತ್ಸವ

ಕೋಲ್ಕತ್ತಾದಲ್ಲಿ ಭಾನುವಾರ ನಡೆದ ಸಾಮೂಹಿಕ ವಿವಾಹ ಮಹೋತ್ಸವದ ಒಂದು ಚಿತ್ರ

ಬಿಹಾರದಲ್ಲಿ ಸಿಎಂ ನಿತೀಶ್ ಪ್ರತಿಭಟನೆ

ಬಿಹಾರದಲ್ಲಿ ಸಿಎಂ ನಿತೀಶ್ ಪ್ರತಿಭಟನೆ

ಪಾಟ್ನ: ಕೇಂದ್ರ ಸರ್ಕಾರ ತೆಲಂಗಾಣಕ್ಕೆ ವಿಶೇಷ ಅನುದಾನ ನೀಡುವಂತೆ ಬಿಹಾರಕ್ಕೂ ನೀಡುವಂತೆ ಆಗ್ರಹಿಸಿ ಜಾಗಟೆ ಬಾರಿಸಿದ ಸಿಎಂ ನಿತೀಶ್ ಕುಮಾರ್ ಅವರು ರಾಜ್ಯ ಬಂದ್ ಯಶಸ್ವಿಗೊಳಿಸಿದರು.

ಚೀನಾದಲ್ಲಿ ರೈಲು ನಿಲ್ದಾಣ ದಾಳಿ ನಂತರ

ಚೀನಾದಲ್ಲಿ ರೈಲು ನಿಲ್ದಾಣ ದಾಳಿ ನಂತರ

ಚೀನಾದ ಯುನಾನ್ ಪ್ರಾಂತ್ಯದ ಕುನ್ಮಿಂಗ್ ರೈಲು ನಿಲ್ದಾಣದಲ್ಲಿ ಅಪರಿಚಿತ ದುಷ್ಕರ್ಮಿಗಳು ಜನರ ಮೇಲೆ ಮಾರಕಾಸ್ತ್ರಗಳಿಂದ 'ಅಮಾನವೀಯ'ವಾಗಿ ದಾಳಿ ಮಾಡಿ 30ಕ್ಕೂ ಅಧಿಕ ಜನರನ್ನು ಕೊಂದಿದ್ದರು. ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Todays news stories in pics around the world: Former cricketer Sachin Tendulkar interacts with children at the unveiling ceremony of the monument 'Bat of Honour' in Mumbai on Sunday. Oneindia News brings to you interesting photographs from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more