ತಿರುಪತಿ: ಉಚಿತ ದರ್ಶನ ಬುಕ್ಕಿಂಗ್ ಕೂಡ ಇನ್ನು ಆನ್‌ಲೈನ್‌ನಲ್ಲಿ
ತಿರುಪತಿ, ಜೂನ್ 10: ತಿರುಪತಿಯಲ್ಲಿ ಇನ್ನು ಎಲ್ಲಾ ಸೇವೆಗಳು ಆನ್‌ಲೈನ್‌ನಲ್ಲಿ ದೊರೆಯಲಿದೆ. ವಿಸ್ತೃತ ರೂಪ್ ಇ-ಸೇವೆ ನಿರ್ವಹಣೆಗಾಗಿ ತಿರುಪತಿ ತಿರುಮಾಲಾ ದೇವಸ್ಥಾನಂ ಪ್ರತ್ಯೇಕ ಮಾಹಿತಿ ತಂತ್ರಜ್ಞಾನ ವಿಭಾಗವನ್ನು ತೆರಯಲು ನಿರ್ಧರಿಸಿದೆ.
ರಾಷ್ಟ್ರೀಯ ಇನ್‌ಫಾರ್ಮೆಟಿಕ್ಸ್ ಸೆಂಟರ್ ಮಾನದಂಡದಂತೆ ಮೂಲಸೌಕರ್ಯ ಕಲ್ಪಿಸಿ, ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಿದೆ. ಐಟಿ ವಿಭಾಗ ಆರಂಭಿಸುವ ಕಾರ್ಯ ಒಂದೆರೆಡು ತಿಂಗಳಲ್ಲಿ ಪೂರ್ಣಗೊಳಿಸಲು ಟಿಟಿಡಿ ನಿರ್ಧರಿಸಿದೆ.
ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದೆ. ಈ ನಿಟ್ಟಿನಲ್ಲಿ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಎನ್‌ಐಸಿ ಮತ್ತು ರಾಜ್ಯ ಐಟಿ ನೀತಿ ಅನ್ವಯಯ ನಿಯಮಗಳನ್ನು ರೂಪಿಸುತ್ತಿದ್ದಾರೆ ಮತ್ತು ಉಪಸಮಿತಿಯೊಂದನ್ನೂ ರಚಿಸಿದ್ದಾರೆ.

ಖಾಲಿ ಇರುವ 33 ಹುದ್ದೆಗಳ ಮಂಜೂರಾತಿಯನ್ನು ರದ್ದು ಮಾಡಲು ಸರ್ಕಾರವನ್ನು ಕೇಳಿದ್ದ ಟಿಟಿಡಿ, ಇದರ ಬದಲಿಗೆ ಹೊಸ ಹುದ್ದೆಗಳನ್ನು ಸೃಷ್ಟಿಸಲು ಅನುಮತಿ ಕೋರಿತ್ತು. ಇದಕ್ಕೆ ಸರ್ಕಾರದಿಂದಲೂ ಅಗತ್ಯ ಅನುಮತಿ ದೊರೆತಿತ್ತು. ಆದರೆ ಟಿಟಿಡಿ ಇದನ್ನು ಬಳಕೆ ಮಾಡಿಕೊಂಡಿರಲಿಲ್ಲ. ಈಗ ಈ ಹುದ್ದೆಗಳನ್ನು ಐಟಿ ವಿಭಾಗದಲ್ಲಿ ಸೃಷ್ಟಿಸಲು ಮುಂದಾಗಿದೆ.












Click it and Unblock the Notifications