ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಕೃಷ್ಣಾಗಮನ, ಶಿಸ್ತಿನ ರಾಜಕಾರಣಿಯ ರಾಜಕೀಯ ಹಿನ್ನೋಟ

|
Google Oneindia Kannada News

ಬೆಂಗಳೂರು, ಜನವರಿ 28: ಮುಗುಳು ನಗೆ, ಚಂದದ ದಿರಿಸು, ಮಂಡ್ಯದ ಕಡೆಯವರು ಎಂದು ಸುಲಭವಾಗಿ ತಿಳಿಯುವಂಥ ಕನ್ನಡ, ಅಸ್ಖಲಿತ ಇಂಗ್ಲಿಷ್, ಎಂಥ ಸಿಟ್ಟಿನಲ್ಲೂ ಮುಖದ ಮೇಲೆ ತೋರಗೊಡದ ಮುತ್ಸದ್ದಿತನ, ಸಂಗೀತ, ಸಾಹಿತ್ಯ-ಟೆನಿಸ್ ಹೀಗೆ ವಿವಿಧ ಅಭಿರುಚಿ..ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಮಾಜಿ ರಾಜ್ಯಪಾಲ ಎಸ್.ಎಂ.ಕೃಷ್ಣ ಅವರ ಬಗ್ಗೆ ಬರೆಯುತ್ತಿದ್ದರೆ ಕಲಾವಿದನ ಚಂದದ ಚಿತ್ರವೊಂದು ಕಣ್ಣೆದುರು ಬಂದಂತಾಗುತ್ತದೆ.

ಕರ್ನಾಟಕ ಕಂಡ ಮುಖ್ಯಮಂತ್ರಿಗಳ ಪೈಕಿ ಅತ್ಯಂತ ಕಠಿಣ ಸವಾಲು ಎದುರಿಸಿದವರು ಎಸ್ಸೆಂ ಕೃಷ್ಣ. ಸತತ ಬರಗಾಲ, ರಾಜ್ ಕುಮಾರ್ ಅಪಹರಣ, ಕಾವೇರಿ ಸಮಸ್ಯೆ...ಯಾವುದೇ ಮುಖ್ಯಮಂತ್ರಿಯ ತಲೆ ಕೆಟ್ಟು ಮೊಸರು ಗಡಿಗೆ ಆಗಬಹುದಾದಂಥ ಸಮಸ್ಯೆಗಳೆಲ್ಲವನ್ನು ಅವರು ಕಂಡುಂಡರು.

SM Krishna

ಕಾಂಗ್ರೆಸ್ ನ ಪ್ರಮುಖ ನಾಯಕರ ಹೆಸರನ್ನು ನೆನಪಿಸಿಕೊಳ್ಳುವುದಾದರೆ ಅಗ್ರ ಪಂಕ್ತಿಯಲ್ಲಿ ನಿಲ್ಲುವಂಥ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಮೇ 1, 1932ರಲ್ಲಿ ಮಂಡ್ಯದ ಸೋಮನಹಳ್ಳಿಯಲ್ಲಿ ಜನಿಸಿದ ಕೃಷ್ಣ ಅವರಿಗೆ 84 ವರ್ಷ ವಯಸ್ಸು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎ ಪದವಿ, ಲಾ ಕಾಲೇಜು ಯುನಿವರ್ಸಿಟಿಯಿಂದ ಕಾನೂನು ಪದವಿ, ಅಮೆರಿಕದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದವರು.

ಪತ್ನಿಯ ಹೆಸರು ಪ್ರೇಮಾ. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ಅಳಿಯ ಸಿದ್ಧಾರ್ಥ ಹೆಸರಾಂತ ಉದ್ಯಮಿ. ಕೃಷ್ಣ ಅವರೀಗ ರಾಜಕೀಯ ಬಿಜೆಪಿ ಸೇರಿದ್ದಾರೆ. ಈ ಸಂದರ್ಭದಲ್ಲಿ ಕೃಷ್ಣ ಅವರ ಜೀವನದ ಹಿನ್ನೋಟದ ಮೆಲುಕು ಹಾಕೋಣ.

timeline of Congress leader SM Krishna

1962-67 ಕರ್ನಾಟಕ ವಿಧಾನಸಭೆ ಸದಸ್ಯರಾಗಿ ಆಯ್ಕೆ
ಭಾರತೀಯ ಸಂಸತ್ ನಿಯೋಗದ ಸದಸ್ಯರಾಗಿ ಕಾಮನ್ ವೆಲ್ತ್ ಗೆ
1965- ಸಂಸದೀಯ ಸಮಾವೇಶಕ್ಕಾಗಿ ನ್ಯೂಜಿಲ್ಯಾಂಡ್ ಗೆ
1971-76 ಲೋಕಸಭಾ ಸದಸ್ಯರಾಗಿ ಆಯ್ಕೆ
1972-77 ಕರ್ನಾಟಕ ವಿಧಾನ ಪರಿಷತ್ ಗೆ ಆಯ್ಕೆ

timeline of Congress leader SM Krishna
ವಾಣಿಜ್ಯ, ಕೈಗಾರಿಕೆ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯ ನಿರ್ವಹಣೆ
1980-84 ಏಳನೇ ಲೋಕಸಭೆ ಚುನಾವಣೆಯಲ್ಲಿ ಆಯ್ಕೆ
1982 ವಿಶ್ವಸಂಸ್ಥೆಗೆ ತೆರಳಿದ ನಿಯೋಗದ ಸದಸ್ಯ
1983-84 ಕೇಂದ್ರ ಕೈಗಾರಿಕೆ ಖಾತೆ ರಾಜ್ಯ ಸಚಿವ
1984-85 ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ
1989-92 ಕರ್ನಾಟಕ ವಿಧಾನಸಭೆ ಸದಸ್ಯ
1989-93 ಕರ್ನಾಟಕ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯ ನಿರ್ವಹಣೆ
1990 ಯುಕೆಯಲ್ಲಿ ನಡೆದ ಸಂಸದೀಯ ಸೆಮಿನಾರ್ ನಿಯೋಗದಲ್ಲಿ ಭಾಗಿ

timeline of Congress leader SM Krishna
1992-94 ಕರ್ನಾಟಕ ಉಪಮುಖ್ಯಮಂತ್ರಿ
1996 ರಾಜ್ಯಸಭೆಗೆ ಆಯ್ಕೆ
1999-2004 ಕರ್ನಾಟಕದ ಮುಖ್ಯಮಂತ್ರಿ
2004 ಕರ್ನಾಟಕ ವಿಧಾನಸಭೆಗೆ ಪುನರಾಯ್ಕೆ
2004-08 ಮಹಾರಾಷ್ಟ್ರದ ರಾಜ್ಯಪಾಲ
2008-14 ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ
ಮೇ 2009ರಿಂದ ಅಕ್ಟೋಬರ್ 2012ರವರೆಗೆ ಕೇಂದ್ರ ವಿದೇಶಾಂಗ ಸಚಿವ
ಜನವರಿ 28, 2017 ಕಾಂಗ್ರೆಸ್ ಗೆ ರಾಜೀನಾಮೆ

ಮಾರ್ಚ್ 22, 2017 ಬಿಜೆಪಿಗೆ ಸೇರ್ಪಡೆ

timeline of Congress leader SM Krishna

ಕರ್ನಾಟಕ ರಾಜಕಾರಣದಲ್ಲಿ ಎಸ್.ಎಂ.ಕೃಷ್ಣ ಅವರಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಿದವರು ಅರ್ಥಾತ್ ರಾಜಕೀಯ ಯಶಸ್ಸು ಪಡೆದವರು ಇಲ್ಲ. ಎಚ್.ಡಿ.ದೇವೇಗೌಡ ಅವರು ಸಚಿವರಾಗಿ, ಮುಖ್ಯಮಂತ್ರಿಯಾಗಿ ಈ ದೇಶದ ಪ್ರಧಾನಿಯೇ ಆದವರು. ಆದರೆ ಎಲ್ಲವನ್ನೂ ಒಟ್ಟು ಮಾಡಿದರೂ ಅಧಿಕಾರ ಅನುಭವಿಸಿದ ಅವಧಿ ಐದು ವರ್ಷ ಕೂಡ ಮುಟ್ಟುವುದಿಲ್ಲವೇನೋ!

ಕರ್ನಾಟಕ ಹಾಗೂ ಕಾಂಗ್ರೆಸ್ ಪಾಲಿಗೆ ಕೃಷ್ಣ ಒಂದು ಕಿರೀಟದಂತೆ. ಮತ್ತು ಆ ಕಿರೀಟ ರಾಜ್ಯಕ್ಕೂ, ರಾಷ್ಟ್ರಕ್ಕೂ ಎಲ್ಲೆಡೆಯೂ ಹೊಂದಿಕೊಳ್ಳುತ್ತಿತ್ತು. ಅವರ ಸುದೀರ್ಘ ರಾಜಕೀಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅವರ ವಿರುದ್ಧ ಕೆಲವು ಪ್ರಕರಣಗಳು ದಾಖಲಾದವು. ಭ್ರಷ್ಟಾಚಾರದ ಆರೋಪಗಳನ್ನು ವಿರೋಧಿಗಳು ಮಾಡಿದರು. ಆದರೆ ಅವು ಯಾವುವೂ ಕೃಷ್ಣ ಚರಿಷ್ಮಾಗೆ ಮುಕ್ಕು ಮಾಡಲಿಲ್ಲ.

English summary
Former Chief Minister of Karnataka and union minister in the UPA regime S M Krishna has retired from active politics. Here is the Timeline of SM Krishna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X