ಎದೆ ನಡುಗಿಸುವ ವಿಡಿಯೋ; ಸಫಾರಿಗೆ ಹೋದವರ ಬೆನ್ನಟ್ಟಿದ ಹುಲಿ

Recommended Video

      Tiger Chases Bus On Nandanvan Jungle Safari In Chhattisgarh | Oneindia Kannada

      ರಾಯಪುರ್, ಫೆಬ್ರವರಿ 18: ಇತ್ತೀಚಿನ ದಿನಗಳಲ್ಲಿ ವನ್ಯಧಾಮಗಳಿಗೆ ಸಫಾರಿ ಹೋಗುವವರಿಗೆ ವನ್ಯಪ್ರಾಣಿಗಳು ಕಾಣಿಸಿಕೊಳ್ಳದೇ ನಿರಾಸೆಯಾಗುವುದು ಸಹಜ. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ, ಹುಲಿ ನೋಡಬೇಕು ಎಂದು ಸಫಾರಿಗೆ ಹೋದವರಿಗೆ ಹುಲಿಗಳೇ ಅಟ್ಟಿಸಿಕೊಂಡು ಬಂದರೆ ಹೇಗಿರಬೇಡ...

      ಇಂತಹದೇ ಘಟನೆ ಇತ್ತೀಚೆಗೆ ಛತ್ತೀಸ್ ಗಢದಲ್ಲಿ ನಡೆದಿರುವುದು ವರದಿಯಾಗಿದೆ. ಛತ್ತೀಸ್ ಗಢ ನಂದನವನ ಹುಲಿ ರಕ್ಷಿತಾರಣ್ಯಕ್ಕೆ ಅರಣ್ಯ ಇಲಾಖೆಯ ವಾಹನದಲ್ಲಿ ಸಫಾರಿ ತರಳಿದ್ದ ಪ್ರವಾಸಿಗರಿಗೆ ಇಂತಹ ಅನುಭವ ಆಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

      ದಾರಿ ಮಧ್ಯೆ ಆಟವಾಡುತ್ತಿದ್ದ ಎರಡು (ಗಂಡು-ಹೆಣ್ಣು) ವ್ಯಾಘ್ರಗಳು ಸಫಾರಿ ವಾಹನ ನೋಡಿ, ದೂರ ಸರಿಯದೇ, ವಾಹನವನ್ನೇ ಬೆನ್ನತ್ತಿವೆ. ಇದರಲ್ಲಿ ಹೆಣ್ಣು ಹುಲಿಯೊಂದು ತುಂಬಾ ದೂರದವರೆಗೂ ಸಫಾರಿ ವಾಹನವನ್ನು ಬೆನ್ನತ್ತಿದ್ದಲ್ಲದೇ ವಾಹನಕ್ಕೆ ಅಳವಡಿಸಿದ್ದ ಬಟ್ಟೆಯೊಂದನ್ನು ಬಾಯಲ್ಲಿ ಹಿಡಿದು ಎಳೆದಿದೆ.

      Tiger Chase Safari Vehicle At Nandanvan Forest In Chhattisgarh

      ಆದರೆ, ನಂದನವನ ರಕ್ಷಿತಾರಣ್ಯದ ಮುಖ್ಯಾಧಿಕಾರಿಗಳು ಈ ಘಟನೆಯಲ್ಲಿ ಸಫಾರಿ ವಾಹನದ ಸಿಬ್ಬಂದಿ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಇಬ್ಬರು ಸಿಬ್ಬಂದಿಗಳನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+