ಪಂಜಾಬಿನ ಕಾಂಗ್ರೆಸ್ ಸಮಾವೇಶದ ವೇಳೆ ಬಾಂಬ್ ಸ್ಫೋಟ!
ಪಂಜಾಬಿನ ಬಟಿಂಡಾದಲ್ಲಿ ಮಂಗಳವಾರ ಸಂಜೆ ಪ್ರಬಲ ಕಾರು ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಅನೇಕರಿಗೆ ಗಾಯಗಳಾಗಿವೆ.
ಅಮೃತ್ ಸರ್, ಜನವರಿ 31: ಪಂಜಾಬಿನ ಬಟಿಂಡಾದಲ್ಲಿ ಮಂಗಳವಾರ ಸಂಜೆ ಪ್ರಬಲ ಕಾರು ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಅನೇಕರಿಗೆ ಗಾಯಗಳಾಗಿವೆ.
ಪಂಜಾಬಿನಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಈ ರೀತಿ ಘಟನೆ ನಡೆದಿರುವುದು ಆತಂಕ ಮೂಡಿಸಿದೆ. ಫೆಬ್ರವರಿ 04ರಂದು ಪಂಜಾಬಿನಲ್ಲಿ ವಿಧಾನಸಭೆ ಚುನಾವಣೆ ನಿಗದಿಯಾಗಿದೆ.

ಮೌರ್ ಮಂಡಿ ಎಂಬ ಪ್ರದೇಶದಲ್ಲಿ ಕಾರು ಬಾಂಬ್ ಸ್ಫೋಟಿಸಿದ್ದು ಮೂರು ಜನ ಸಾವನ್ನಪ್ಪಿದ್ದು, 15 ಜನ ಗಾಯಗೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಹರ್ಮಿಂದರ್ ಜಸ್ಸಿ ಅವರು ಚುನಾವಣಾ ಪ್ರಚಾರ ಭಾಷಣ ನಿರತರಾಗಿದ್ದಾಗ ಈ ಸ್ಫೋಟ ಸಂಭವಿಸಿದೆ. ಗಾಯಗೊಂಡವರನ್ನು ಮೌರ್ ಮಂಡಿ ಹಾಗೂ ಬಟಿಂಡಾದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.
Explosion in a car in Bathinda's Maur mandi. 3 dead: SDM Latif Ahmed #Punjab
— ANI (@ANI_news) January 31, 2017
ವಿವಾದಿತ ಗುರು ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರ ಆಪ್ತ ಸಂಬಂಧಿಯಾಗಿರುವ ಜಸ್ಸಿ ಅವರ ಸಮಾವೇಶದ ಬಳಿ ಈ ದುರ್ಘಟನೆ ನಡೆದಿದೆ.












Click it and Unblock the Notifications