ಮೋದಿ ಸರಕಾರದಲ್ಲಿ ತೈಲ ಬೆಲೆ ಮಾತ್ರ ಐತಿಹಾಸಿಕ: ಮಾಯಾವತಿ ವ್ಯಂಗ್ಯ

ನವದೆಹಲಿ, ಮೇ 26: ಪ್ರಧಾನಿ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದು ಇಂದಿಗೆ 4 ವರ್ಷಗಳು ತುಂಬಿವೆ. ಈ ಹೊತ್ತಲ್ಲಿ ಸ್ವಪಕ್ಷೀಯರು ಸಂಭ್ರಮಾಚರಣೆಯಲ್ಲಿದ್ದರೆ, ವಿಪಕ್ಷಗಳು ಆಡಳಿತ ಪಕ್ಷವನ್ನು ಟೀಕಿಸುವುದರಲ್ಲಿ ನಿರತವಾಗಿವೆ.

ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಪ್ರಧಾನಿ ಮೋದಿ ವಿರುದ್ಧ ಇದೇ ಸಂದರ್ಭದಲ್ಲಿ ಕಿಡಿಕಾರಿದ್ದು, ಸರಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

"ಸರಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಎಲ್ಲವನ್ನೂ ಐತಿಹಾಸಿಕ ಎಂದು ಬಣ್ಣಿಸುತ್ತಾರೆ. ಬಹುಶಃ ನನ್ನ ಪ್ರಕಾರ ಇದೇ ಕಾರಣಕ್ಕೆ ಅವರ ಸರಕಾರದ ಅವಧಿಯಲ್ಲಿ ತೈಲ ಬೆಲೆಗಳು ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿವೆ," ಎಂದು ಅವರು ವ್ಯಂಗ್ಯವಾಡಿದ್ದಾರೆ.

 This government has failed on all fronts, says Mayawati on 4 years of Modi govt

ದೇಶದಲ್ಲಿ ಏರಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಬಗ್ಗೆ ಭಾರೀ ಅಸಮಧಾನವಿದ್ದು ಇದನ್ನೇ ಮಾಯಾವತಿಯವರೂ ತಮ್ಮ ಹೇಳಿಕಯಲ್ಲಿ ಉಲ್ಲೇಖಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+