• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಮುದ್ದು ಮುಖದ ಪುಟಾಣಿ ಇನ್ನಷ್ಟು ವರ್ಷ ಬದುಕಿರಲಿ

By Prasad
|

ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಈ ಪುಟಾಣಿ ಮಗುವನ್ನು ನೋಡಿದರೆ ಎಂಥವರಿಗೂ ಹೃದಯ ಕಿತ್ತುಬರುತ್ತದೆ, ಆ ಮಗುವಿನ ಸ್ಥಿತಿ ನೋಡಿ ಕಂಬನಿ ಜಿನುಗುತ್ತದೆ. ಈ ಮಗು ಈಗ ಜೀವನ್ಮರಣದ ಹೋರಾಟ ನಡೆಸಿದೆ. ಮಗು ಬದುಕಬೇಕಿದ್ದರೆ ದಾನಿಗಳು ಹೃದಯ ವೈಶಾಲ್ಯತೆ ಮೆರೆಯಲೇಬೇಕು.

ಅನಾರೋಗ್ಯದಿಂದ ಬಳಲುತ್ತಿರುವಹದಿನಾಲ್ಕು ತಿಂಗಳ ಶ್ರದ್ಧಾಳ ಹೃದಯದಲ್ಲಿ ರಂಧ್ರವಿದೆ. ಹೃದ್ರೋಗ ತಜ್ಞರು ಇದನ್ನು ಸೆಪ್ಟಲ್ ಸಮಸ್ಯೆ ಎನ್ನುತ್ತಾರೆ. ಶ್ರದ್ಧಾ ಹುಟ್ಟಿದ ಎರಡು ತಿಂಗಳಿಗೇ ಈ ಸಮಸ್ಯೆ ಇರುವುದು ತಿಳಿಯಿತು. ಇದು ತಿಳಿಯುತ್ತಿದ್ದಂತೆ ಪೋಷಕರ ಎದೆ ಒಡೆದಿತ್ತು. ಅವಳನ್ನು ಪರೀಕ್ಷಿಸಿದ ವೈದ್ಯರು ಕೂಡಲೇ ತೆರೆದ ಹೃದಯದ ಶಸ್ತ್ರಚಿಕಿತ್ಸೆ ಆಗಬೇಕು ಎಂದು ಹೇಳಿದ್ದಾರೆ.

ಆ ಹೆಣ್ಣುಮಗುವಿನ ಕುಟುಂಬದವರು ತಕ್ಷಣವೇ ಚಿಕಿತ್ಸೆ ಆರಂಭಿಸಲು ತೀರ್ಮಾನಿಸಿದರು. ಚಿಕಿತ್ಸೆಗಾಗಿ ಅಗತ್ಯ ಇರುವ ಹಣ ತಮ್ಮ ಬಳಿ ಇಲ್ಲ ಎಂದು ಆ ಕುಟುಂಬಕ್ಕೆ ಗೊತ್ತಿದ್ದರೂ ತುಂಬ ಬೇಗ ತೀರ್ಮಾನ ತೆಗೆದುಕೊಳ್ಳುವುದು ಅಗತ್ಯವಿತ್ತು. ಶೀಘ್ರವಾಗಿ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಶ್ರದ್ಧಾಳನ್ನು ಸೇರಿಸಿದರು.

ಆ ಮಗುವಿನ ತಂದೆ ಸುಬ್ರಂತ್ ರಾವತ್ ಕಾರ್ಪೋರೇಟ್ ಹೌಸ್ ವೊಂದರಲ್ಲಿ ಕಾರು ಚಾಲಕರು. ತಿಂಗಳಿಗೆ ಒಂಬತ್ತರಿಂದ ಹತ್ತು ಸಾವಿರ ರುಪಾಯಿ ದುಡಿಯುತ್ತಾರೆ. ಮನೆಯ ಬಾಡಿಗೆ, ತಿಂಗಳ ದಿನಸಿ ಇತರ ಅಗತ್ಯಗಳಿಗೆ ಹಾಗೂ ಮಗಳ ಚಿಕಿತ್ಸೆಗೆ ಎಲ್ಲಕ್ಕೂ ಈ ಮೊತ್ತದಲ್ಲೇ ಖರ್ಚು ಮಾಡಬೇಕು.

This car driver’s baby has a hole in her heart

ಇನ್ನು ಸುಬ್ರಂತ್ ರ ಪತ್ನಿ, ಶ್ರದ್ಧಾಳ ತಾಯಿ ಗೃಹಿಣಿ. ಅವರಿಂದ ಕುಟುಂಬದ ಆದಾಯಕ್ಕೆ ಯಾವುದೇ ಹೆಚ್ಚುವರಿ ಕೊಡುಗೆ ಸಾಧ್ಯವಿಲ್ಲ. ಏಕೆಂದರೆ, ತಮ್ಮ ಮಗಳ ಅನಾರೋಗ್ಯದ ಕಾರಣಕ್ಕೆ ಹಗಲು- ಇರುಳು ಆಕೆಯನ್ನು ನೋಡಿಕೊಳ್ಳುವುದೇ ಆಗುತ್ತದೆ.

ಶ್ರದ್ಧಾಳ ಶಸ್ತ್ರಚಿಕಿತ್ಸೆಯ ವೆಚ್ಚ ಅಂತಲೇ 5 ಲಕ್ಷ ರುಪಾಯಿ ಅಗತ್ಯವಿದೆ. ಇದರ ಜತೆ ಆಸ್ಪತ್ರೆಯ ವೆಚ್ಚ, ಔಷಧಿ ಖರ್ಚು, ಡಾಕ್ಟರ್ ಗಳ ಫೀ ಕೂಡ ಇದೆ. ದಿನದಿನಕ್ಕೂ ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚ ಈ ಕುಟುಂಬದ ಪಾಲಿಗೆ ದುಃಸ್ವಪ್ನವಾಗಿ ಪರಿಣಮಿಸಿ ಒಂದು ವರ್ಷವಾಯಿತು.

This car driver’s baby has a hole in her heart

ಭಾರತದಲ್ಲಿನ ಕಡಿಮೆ ಆದಾಯದ ಕುಟುಂಬಗಳ ಸದಸ್ಯರಿಗೆ ಯಾರಿಗಾದರೂ ದೊಡ್ಡ ಪ್ರಮಾಣದ ಅನಾರೋಗ್ಯ ಕಾಣಿಸಿಕೊಂಡರೆ ಇಂಥದ್ದೇ ಸ್ಥಿತಿ ಎದುರಾಗುತ್ತದೆ. ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಆರಂಭದ ಚಿಕಿತ್ಸೆಗಾಗಿ ಪುಟ್ಟ ಬಾಲಕಿ ಶ್ರದ್ಧಾಗೆ ಸಾಕಷ್ಟು ಖರ್ಚಾಗಿದೆ. ಈ ಕುಟುಂಬ ತಮ್ಮಲ್ಲಿದ್ದ ಆಸ್ತಿಯನ್ನು ಅಡಮಾನ ಮಾಡಿದೆ.

ಇದೀಗ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಬೇಕಿದೆ. ಏಕೆಂದರೆ ಇನ್ನು ಚಿಕಿತ್ಸೆ ಮುಂದುವರಿಸುವುದಕ್ಕೆ ಆ ಕುಟುಂಬದ ಹತ್ತಿರ ಹಣ ಇಲ್ಲ. ನಾನಾ ಹೆಲ್ತ್ ಕೇರ್ ಸೆಂಟರ್ ಗಳಿಗೆ ಈ ಪೋಷಕರು ಎಡತಾಕಿದ್ದಾರೆ. ಪ್ರತಿ ಸಲವೂ ತಮ್ಮ ಬಳಿ ಸಂಗ್ರಹವಾದ ಹಣದಲ್ಲೇ ಶಸ್ತ್ರಚಿಕಿತ್ಸೆ ಆಗುತ್ತದೆ ಎಂಬ ಭರವಸೆ ಇರುತ್ತದೆ.

This car driver’s baby has a hole in her heart

ಆದರೆ, ಪ್ರತಿ ಸಲ ನಿರಾಶೆಯೇ ಅವರಿಗೆ ಎದುರಾಗಿದೆ. ಈಗಾಗಲೇ ಸೋತು ನಿಂತಿರುವ ಕುಟುಂಬದ ಮನೆಯಲ್ಲಿ ಶ್ರದ್ಧಾ ಇದ್ದಾಳೆ. ಆಕೆ ನೋವಿನಲ್ಲಿದ್ದಾಳೆ. ಈ ಮಧ್ಯೆ ಶ್ರದ್ಧಾಗೆ ತಗುಲಿರುವ ಸೋಂಕು ಶ್ವಾಸಕೋಶಕ್ಕೆ ಹರಡುವ ಅಪಾಯ ಇದೆ. ಹೀಗಾದರೆ ಸ್ಥಿತಿ ಮತ್ತಷ್ಟು ಗಂಭೀರವಾಗುತ್ತದೆ.

"ನನ್ನ ಮಗು ಕಣ್ಣೆದುರೇ ಸವೆದು ಹೋಗುತ್ತಿದ್ದಾಳೆ ಮತ್ತು ನಾನೆಂದೂ ಇಷ್ಟು ಕೈಲಾಗದವನು ಅಂದುಕೊಂಡಿರಲಿಲ್ಲ" ಎನ್ನುತ್ತಾರೆ ಸುಬ್ರಂತ್. "ತಂದೆಯಾಗಿ ನಾನೊಬ್ಬ ಅಸಹಾಯಕ. ನಾನೆಷ್ಟೇ ಶ್ರಮ ಪಟ್ಟರೂ ಶ್ರದ್ಧಾಳನ್ನು ಗುಣಪಡಿಸಲು ಬೇಕಾದ 5 ಲಕ್ಷ ರುಪಾಯಿಯನ್ನು ಇಷ್ಟು ಕಡಿಮೆ ಸಮಯದಲ್ಲಿ ಸಂಪಾದಿಸಲು ಸಾಧ್ಯವಿಲ್ಲ" ಎಂದು ಕಣ್ಣೀರಾಗುತ್ತಾರೆ.

This car driver’s baby has a hole in her heart

ಶ್ರದ್ಧಾಳ ಚಿಕಿತ್ಸೆಗೆ ಹಣ ಹೊಂದಿಸುತ್ತಿರುವ ಸುಬ್ರಂತ್ ಗೆ ನೀವು ಸಹಾಯ ಮಾಡಲು ಬಯಸಿದರೆ, ನಿಮ್ಮಿಂದಾದ ಸಹಾಯ ಮಾಡಬಹುದು. ಮತ್ತು ಇಲ್ಲಿ ನೀವು ಓದುತ್ತಿರುವ ಈ ಕರುಣಾಜನಕ ಕಥೆಯನ್ನು ಫೇಸ್ ಬುಕ್ ಮತ್ತು ವಾಟ್ಸಾಪ್ ಮೂಲಕ ನಿಮ್ಮ ಸ್ನೇಹಿತ- ಸ್ನೇಹಿತೆಯರಿಗೂ ಷೇರ್ ಮಾಡಿ.ಮಗುವಿಗಾಗಿ ದಾನ ಮಾಡಿ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shradha is fourteen months old and has been sick for a long time. The hole in her heart, what cardiac experts call a septal defect, was diagnosed two months after her birth. Doctors who examined her said that an open heart surgery was immediately in order.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more