ಕೊರೊನಾ ಸೋಂಕಿತರು ಈ 2 ವಸ್ತುಗಳ ವಾಸನೆ ಗ್ರಹಿಸಲು ಸಾಧ್ಯವಿಲ್ಲ

ಕೊರೊನಾ ಸೋಂಕಿತರು ವಾಸನೆ ಗ್ರಹಿಕೆ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಸಾಕಷ್ಟು ಅಧ್ಯಯನಗಳು ಹೇಳಿವೆ. ಆದರೆ ಇನ್ನೂ ಕೆಲವರು ಇಂಥದ್ದೇ ಎರಡು ವಸ್ತುಗಳ ವಾಸನೆ ಗ್ರಹಿಸಲು ಸಾಧ್ಯವಿಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ.

ಈಗಾಗಲೇ ಕೊರೊನಾ ಸೋಂಕು ವಿಶ್ವದಾದ್ಯಂತ ಹರಡಲು ಆರಂಭವಾಗಿ 10 ತಿಂಗಳು ಕಳೆಯುತ್ತಿದೆ.

ಮುಂಚೆ ಒಣ ಕೆಮ್ಮು, ಜ್ವರ ಮತ್ತು ವಿವರಿಸಲಾಗದ ಬಳಲಿಕೆಯು ರೋಗದ ಲಕ್ಷಣಗಳೆಂದು ಪರಿಗಣಿಸಲ್ಪಟ್ಟಿದ್ದರೂ, ವಾಸನೆ ಮತ್ತು ರುಚಿಯ ನಷ್ಟವನ್ನು ಕೂಡ ಈಗ ರೋಗದ ಲಕ್ಷಣಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತಿದೆ.

ವಾಸನೆ ಗ್ರಹಿಕೆ ಶಕ್ತಿ ಕಳೆದುಕೊಳ್ಳುವುದಕ್ಕೆ ತಜ್ಞರು ಏನಂತಾರೆ?

ವಾಸನೆ ಗ್ರಹಿಕೆ ಶಕ್ತಿ ಕಳೆದುಕೊಳ್ಳುವುದಕ್ಕೆ ತಜ್ಞರು ಏನಂತಾರೆ?

ಕೊರೊನಾ ಸೋಂಕಿಗೆ ಒಳಗಾದ ನಂತರ ವಾಸನೆ ನಷ್ಟವಾದಂತೆ ಭಾಸವಾಗುತ್ತದೆ. ಕೊರೊನಾ ಸೋಂಕು ತಗುಲಿದಾಗ ಅನೋಸ್ಮಿಯಾ ಅಂದರೆ ವಾಸನೆಯ ನಷ್ಟ ಉಂಟಾಗುತ್ತದೆ. ಇದು ಆರಂಭಿಕ ಎಚ್ಚರಿಕೆಯ ಚಿಹ್ನೆ ಎಂದು ಬಹಳಷ್ಟು ಸಂಶೋಧಕರು ನಂಬಿದ್ದಾರೆ. ಹಾಗೆಯೇ ನ್ಯಾಷನಲ್ ಆಗ್ರಿ-ಫುಡ್ ಬಯೋಟೆಕ್ನಾಲಜಿ ಇನ್‌ಸ್ಟಿಟ್ಯೂಟ್ ಮೊಹಾಲಿ ಮತ್ತು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಚಂಡೀಗಢ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ ಕೊರೊನಾ ಸೋಂಕಿಗೆ ಒಳಗಾದವರು ಸುಗಂಧ ದ್ರವ್ಯಗಳನ್ನು ಮಾತ್ರ ವಾಸನೆ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.

ವಾಸನೆ ಗ್ರಹಿಕೆ ಪರೀಕ್ಷೆ ಹೇಗೆ?

ವಾಸನೆ ಗ್ರಹಿಕೆ ಪರೀಕ್ಷೆ ಹೇಗೆ?

ಕೆಲವು ವರದಿ ಪ್ರಕಾರ ಸಾಮಾನ್ಯ ಎಲ್ಲಾ ಭಾರತೀಯರ ಮನೆಯಲ್ಲಿ ವಾಸನೆ ಪರೀಕ್ಷೆ ನಡೆಸಬಹುದು. ಈ ಐದು ಸುಗಂಧ ದ್ರವ್ಯಗಳನ್ನು ಆನ್‌ಲೈನ್ ಸಮೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದ್ದು, ಅಲ್ಲಿ 100 ವ್ಯಕ್ತಿಗಳಿಗೆ 30 ಸುವಾಸನೆಗಳ ಪಟ್ಟಿಯನ್ನು ನೀಡಲಾಯಿತು. ಮತ್ತು ಅವರು ಸುಲಭವಾಗಿ ಗುರುತಿಸಬಹುದಾದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಲು ಹೇಳಲಾಯಿತು. ಪರೀಕ್ಷೆಯ ಆಧಾರದ ಮೇಲೆ ಐದಯ ವಸ್ತುಗಳನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ಬೆಳ್ಳುಳ್ಳಿ, ಪುದೀನಾ, ಏಲಕ್ಕಿ, ತೆಂಗಿನ ಎಣ್ಣೆ ಮತ್ತು ಫೆನ್ನಲ್ ಅಂದರೆ ಸುವಾಸನೆಯುಕ್ತ ಹಳದಿ ಹೂವು.

ಅಧ್ಯಯನ ನಡೆದಿದ್ದು ಹೇಗೆ?

ಅಧ್ಯಯನ ನಡೆದಿದ್ದು ಹೇಗೆ?

ಅವರಿಗೆ ಸುವಾಸನೆಯನ್ನು ಟ್ಯೂಬ್‌ಗಳಲ್ಲಿ ತುಂಬಿಸಿ ಕವರ್‌ನಲ್ಲಿ ಇರಿಸಲಾಗಿತ್ತು. ಮತ್ತು ತಮಗೆ ಯಾವುದರ ವಾಸನೆ ಬರುತ್ತಿದ, ಯಾವ ವಸ್ತುಗಳ ವಾಸನೆ ಬರುವುದಿಲ್ಲ ಎಂದು ಬರೆಯುವಂತೆ ತಿಳಿಸಲಾಗಿತ್ತು. 49 ಲಕ್ಷಣಾ ರಹಿತ ಸೋಂಕಿತರು ಮತ್ತು 35 ಕೊರೊನಾ ಸೋಂಕು ಹೊಂದಿಲ್ಲದ ರೋಗಿಗಳ ಮಧ್ಯೆ ಪರೀಕ್ಷೆ ನಡೆಸಲಾಗಿತ್ತು.

ತಜ್ಞರು ಅಧ್ಯಯನದಿಂದ ಕಂಡುಕೊಂಡಿದ್ದೇನು?

ತಜ್ಞರು ಅಧ್ಯಯನದಿಂದ ಕಂಡುಕೊಂಡಿದ್ದೇನು?

ಕೊರೊನಾ ಸೋಂಕಿಗೆ ಒಳಗಾದವರು ವಾಸನೆಯ ನಷ್ಟವನ್ನು ಅನುಭವಿಸಿದರೆ, ಕೆಲವರು ಸಂಪೂರ್ಣವಾಗಿ ಕಳೆದುಕೊಳ್ಳದಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಕೇವಲ ಶೇ.4.1 ಅಷ್ಟು ಜನರಿಗೆ ಮಾತ್ರ ವಾಸನೆ ಪರೀಕ್ಷೆಯಲ್ಲಿರುವ ಐದು ಸುವಾಸನೆಯನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಅವರಲ್ಲಿ ಶೇ.38.8 ರಷ್ಟು ಮಂದಿ ಕನಿಷ್ಠ ಒಂದು ಸುವಾಸನೆಯನ್ನು ಗುರುತಿಸಲು ಸಾಧ್ಯವಾಗಲಿಲ್ಲ.

ಯಾವ ವಾಸನೆ ಗ್ರಹಿಸಲು ಕೊರೊನಾ ಸೋಂಕಿತರಿಗೆ ಸಾಧ್ಯವಿಲ್ಲ

ಯಾವ ವಾಸನೆ ಗ್ರಹಿಸಲು ಕೊರೊನಾ ಸೋಂಕಿತರಿಗೆ ಸಾಧ್ಯವಿಲ್ಲ

ನಡೆಸಿದ ಅಧ್ಯಯನದಲ್ಲಿ ಬಹುತೇಕ ರೋಗಿಗಳಿಗೆ ತೆಂಗಿನ ಎಣ್ಣೆ ಮತ್ತು ಪುದೀನಾ ಸೊಪ್ಪಿನ ಸುವಾಸನೆಯನ್ನು ಗ್ರಹಿಸಲು ಸಾಧ್ಯವಾಗಲಿಲ್ಲ. ಆದರೆ ಯಾವೊಂದು ವಸ್ತುವಿನ ಪರಿಮಳ ನಿಮಗೆ ಬರುತ್ತಿಲ್ಲವೆಂದರೆ ಅದನ್ನೇ ಎಚ್ಚರಿಕೆ ಗಂಟೆ ಎಂದು ನಂಬಬೇಕು, ತಡ ಮಾಡಬಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+